ಶಿಡ್ಲಘಟ್ಟ : ಮುಂದಿನ ಲೋಕಸಭೆ ಚುನಾವಣೆಯಲ್ಲಿ 3ನೇ ಬಾರಿಗೆ ಮೋಧಿ ಅವರು ಪ್ರಧಾನ ಮಂತ್ರಿ ಆಗಲಿದ್ದಾರೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸರ್ಕಾರದ ಗ್ಯಾರಟಿಗಳನ್ನು ನಂಬಬೇಡಿ, ಮೋಧಿ ಸರ್ಕಾರದ ಗ್ಯಾರೆಂಟಿಗಳ ಮೇಲೆ ಭರವಸೆ ಇಡಿ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದರು.
ತಾಲೂಕಿನ ದೇವರಗುಡಿಪಲ್ಲಿ ಗ್ರಾಮದ ಗಾಯತ್ರಿ ಸಮುದಾಯ ಭವನದಲ್ಲಿ ನಡೆದ ಬಿಜೆಪಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಅಯೋಧ್ಯೆಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆಯ ಶುಭವೇಳೆಯಲ್ಲಿ ಪಕ್ಷದ ಕೆಲ ವಿರೋಧಿಗಳ ಶ್ರೀರಾಮನ ಪ್ರಾಣಪ್ರತಿಷ್ಠಾನೆ ವಿಷಯದಲ್ಲಿ ರಾಜಕೀಯ ಮಾಡುತ್ತಾ 140 ಕೋಟಿ ಭಾರತೀಯರ ನಂಬಿಕೆಗೆ ತ್ಯುತಿ ತರುತ್ತಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.
ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ಜನವರಿ 22ರಂದು ನಡೆಯಲಿದೆ ಆ ಹಿನ್ನೆಲೆಯಲ್ಲಿ ಪ್ರತಿ ಗ್ರಾಮದಲ್ಲೂ ಮನೆ ಮನೆಗೆ ಮಂತ್ರಾಕ್ಷತೆ ಹಾಗೂ ಶ್ರೀರಾಮಚಂದ್ರನ ಪೊಟೋ ಕ್ಯಾಲೆಂಡರ್ ನೀಡಿ ಮನೆಗಳ ಮುಂದೆ ರಂಗೋಲಿ ಬಿಡಿಸಿ ಉತ್ತರದ ಕಡೆ ದೀಪ ಬೆಳಗಿ ಶ್ರೀ ರಾಮ ಚಂದ್ರನನ್ನು ಮನೆಗಳಿಗೆ ಬರಮಾಡಿಕೊಳ್ಳಬೇಕೆಂದು ಮಾಜಿ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ರಾಮರಾಜ್ಯದ ಕನಸು ನನಸಾಗುವ ಸಮಯ ಬಂದಿದೆ. ನಮ್ಮ ಕಾಲಘಟ್ಟದಲ್ಲಿ ದೇವಾಲಯ ನಿರ್ಮಾಣವಾಗಿ ಪ್ರಾಣ ಪ್ರತಿಷ್ಟಾಪನೆ ನೋಡಲಿರುವ ನಾವೆಲ್ಲರೂ ಪುಣ್ಯವಂತರು ಎಂದರು. ಬಿಜೆಪಿ ಮುಖಂಡರಾದ ಸೀಕಲ್ ರಾಮಚಂದ್ರಗೌಡ ಮಾತನಾಡಿ ಹಿಂದೂ ಧರ್ಮವನ್ನು ನಾವೆಲ್ಲರೂ ಉಳಿಸುವ ಕೆಲಸ ಮಾಡಬೇಕು. ಮೋದಿಜಿಯವರ ದೇಶ ಪ್ರೇಮ ಹಾಗೂ ಅವರ ಅವಧಿಯಲ್ಲಾಗಿರುವ ಅಭಿವೃದ್ದಿ, ಜನಪರ ಕಾರ್ಯಕ್ರಮಗಳು, ಯೋಜನೆಗಳ ಬಗ್ಗೆ ತಿಳಿಸಲು ಸಮಯ ಸಾಕಾಗುವುದಿಲ್ಲ ಎಂದರು.
1951ರಲ್ಲಿ ಜ್ಯೋತಿರ್ಲಿಂಗ ಸ್ಥಾಪನೆ ಸಂದರ್ಭದಲ್ಲಿ ಅಂದಿನ ಪ್ರಧಾನ ಮಂತ್ರಿಯಾಗಿದ್ದ ನೆಹರು ರವರು ಹೋಗಲಿಲ್ಲ, ಕಾಂಗ್ರೆಸ್ ಸರ್ಕಾರಗಳು ಹಿಂದುತ್ವದ ವಿರುದ್ದ, ಹಿಂದುಗಳ ಭಾವನೆಗಳಿಗೆ ವಿರುದ್ದವಾಗಿ ನಡೆದುಕೊಂಡಿದ್ದಾರೆ. ನಾವು ಈ ರೀತಿಯಲ್ಲಿ ದೇವರ ಹೆಸರಿನಲ್ಲಿ ರಾಜಕೀಯ ಮಾಡುತ್ತಿಲ್ಲ ದೇಶದ ಪ್ರತಿಯೊಬ್ಬರ ಮನಸು ಗೆಲ್ಲುವಂತಹ ಹಾಗೂ ಎಲ್ಲರನ್ನು ಒಂದು ಮಾಡುವಂತಹ ಕೆಲಸವನ್ನು ಮಾಡುತ್ತಿದ್ದೇವೆ. ಇದೇ 22ರಂದು ಇಡೀ ದೇಶದಲ್ಲಿ ಸಂಭ್ರಮ ಸಡಗರದಿಂದ ಶ್ರೀರಾಮ ಲಾಲ್ಲ ಪ್ರಾಣಪ್ರತಿಷ್ಠಾಪನೆ ನಡೆಸಲಾಗುವುದು ಎಂದರು.