ಕೆಎನ್ ಎನ್ ನ್ಯೂಸ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಎಲ್ಲರೂ ವಾಸ್ತುಗಳನ್ನು ನೋಡ್ತಾರೆ. ಕೆಲವರು ಯಾವುದೇ ವಿಚಾರವಾಗಲೀ ವಾಸ್ತುವನ್ನು ನಂಬುವುದಿಲ್ಲ. ಕೆಲವರು ಪ್ರತಿಯೊಂದು ವಿಚಾರಕ್ಕೂ ವಾಸ್ತು ಅನುಸರಿಸಲು ಯತ್ನಿಸುತ್ತಾರೆ. ಆದರೆ ನೀವು ವಾಸ್ತುವನ್ನು ನಂಬಲಿ, ನಂಬದಿರಲಿ ಕೆಲವೊಂದು ಸಂದರ್ಭಗಳಲ್ಲಿ ಬಹಳ ಎಚ್ಚರವಾಗಿರಬೇಕು.
ಕಾಲಿನ ‘ಹಿಮ್ಮಡಿ ಬಿರುಕು’ ಸಮಸ್ಯೆ? ಕಾರಣ, ಲಕ್ಷಣ, ತಡೆಗಟ್ಟುವಿಕೆ ವಿಧಾನಗಳನ್ನು ತಿಳಿಯಿರಿ | Cracked heel
ಪ್ರತಿದಿನದ ವ್ಯವಹಾರಕ್ಕೆ ಹಣ ಬಹಳ ಅವಶ್ಯಕ. ಇತರರರಿಗೆ ಹಣ ನೀಡುವಾಗ ಆಗಲೀ, ಬೇರೆಯವರಿಂದ ಪಡೆಯುವಾಗ ಆಗಲೀ ಹಣ ಎಣಿಸುತ್ತೇವೆ. ಆದರೆ ಅನೇಕ ಜನರು ಹಣ ಎಣಿಸುವಾಗ ತಿಳಿದೋ ತಿಳಿಯದೆಯೋ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಹಾಗೆ ಮಾಡುವುದರಿಂದ ಲಕ್ಷ್ಮಿ ದೇವಿಯು ಕೋಪಗೊಳ್ಳುತ್ತಾಳೆ. ಏಕೆಂದರೆ ಪುರಾಣಗಳ ಪ್ರಕಾರ ಲಕ್ಷ್ಮಿ ದೇವಿಯನ್ನು ಸಂಪತ್ತಿನ ಸಂಕೇತವೆಂದು ಪರಿಗಣಿಸಲಾಗಿದೆ. ಹಾಗಾಗಿ ಹಣವನ್ನು ಎಣಿಸುವಾಗ ಮಾಡುವ ತಪ್ಪುಗಳಿಂದ ನಿಮ್ಮ ಸಂಪೂರ್ಣ ಸಂಪತ್ತು ನಾಶವಾಗಬಹುದು ಎಂದು ವಾಸ್ತುಶಾಸ್ತ್ರ ತಜ್ಞರು ನಂಬುತ್ತಾರೆ.
ಕಾಲಿನ ‘ಹಿಮ್ಮಡಿ ಬಿರುಕು’ ಸಮಸ್ಯೆ? ಕಾರಣ, ಲಕ್ಷಣ, ತಡೆಗಟ್ಟುವಿಕೆ ವಿಧಾನಗಳನ್ನು ತಿಳಿಯಿರಿ | Cracked heel
ಎಂಜಲು ಬಳಸಬೇಡಿ: ನಮ್ಮಲ್ಲಿ ಹೆಚ್ಚಿನವರು ಹಣವನ್ನು ಎಣಿಸುವಾಗ ನೀರು ಬಳಸುವ ಬದಲಿಗೆ ನಾಲಿಗೆ ಎಂಜಲನ್ನು ಬಳಸುತ್ತಾರೆ. ಆದರೆ ಹೀಗೆ ಮಾಡುವುದು ದೊಡ್ಡ ತಪ್ಪು. ವಾಸ್ತು ಶಾಸ್ತ್ರದ ಪ್ರಕಾರ ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಗೆ ಕೋಪ ಬರುತ್ತದೆ. ಇದು ನಿಮ್ಮ ಕಷ್ಟಗಳನ್ನು ಹೆಚ್ಚಿಸುತ್ತದೆ. ಹಾಗಾಗಿ ನೋಟುಗಳನ್ನು ಎಣಿಸುವಾಗ ಅದರ ಪಕ್ಕದಲ್ಲಿ ಚಿಕ್ಕ ತಟ್ಟೆ ಅಥವಾ ನೀರಿನ ಲೋಟ ಇಟ್ಟು ನೋಟುಗಳನ್ನು ಸ್ಪರ್ಶಿಸಿ ಎಣಿಸಿ.
ಇವುಗಳನ್ನು ನಿಮ್ಮ ಪರ್ಸ್ನಲ್ಲಿ ಇಡಬೇಡಿ: ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಲಕ್ಷ್ಮಿ ದೇವಿಯನ್ನು ಸಂಪತ್ತಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಅನೇಕ ಜನರು ಹಣ ಇರುವ ಸ್ಥಳದಲ್ಲಿ ಲಕ್ಷ್ಮಿ ದೇವಿ ನೆಲೆಸುತ್ತಾಳೆ ಎಂದು ನಂಬುತ್ತಾರೆ. ಹಾಗಾಗಿ ಹಣದ ವಿಚಾರದಲ್ಲಿ ಪ್ರತಿಯೊಬ್ಬರೂ ವಿಶೇಷ ಕಾಳಜಿ ವಹಿಸಬೇಕು.
ಕಾಲಿನ ‘ಹಿಮ್ಮಡಿ ಬಿರುಕು’ ಸಮಸ್ಯೆ? ಕಾರಣ, ಲಕ್ಷಣ, ತಡೆಗಟ್ಟುವಿಕೆ ವಿಧಾನಗಳನ್ನು ತಿಳಿಯಿರಿ | Cracked heel
ನಿರ್ಲಕ್ಷ್ಯ ಮಾಡಬೇಡಿ: ಇಷ್ಟೇ ಅಲ್ಲ, ಕೆಲವರು ಹಣದ ಬಗ್ಗೆ ತುಂಬಾ ಅಸಡ್ಡೆ ಹೊಂದಿದ್ದಾರೆ. ಹಣದ ಬೆಲೆ ತಿಳಿಯದೆ ಎಲ್ಲಿ ಬೇಕೆಂದರಲ್ಲಿ ಇಡುತ್ತಾರೆ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿ ಆಕ್ರೋಶಕ್ಕೆ ಒಳಗಾಗುತ್ತಾಳೆ. ಹಾಗಾಗಿ ಹಣದ ಬಗ್ಗೆ ನಿರ್ಲಕ್ಷ್ಯ ಬೇಡ. ಸ್ವಲ್ಪ ಹಣವನ್ನು ಪರ್ಸ್ನಲ್ಲಿ ಮತ್ತು ಹೆಚ್ಚಿನ ಮೊತ್ತವನ್ನು ನಿಮ್ಮ ಮನೆಯ ಬೀರು ಅಥವಾ ಹಣದ ಲಾಕರ್ನಲ್ಲಿ ಇಟ್ಟುಕೊಳ್ಳುವುದು ಉತ್ತಮ. ಅಡುಗೆ ಮನೆಯ ಡಬ್ಬಿಗಳಲ್ಲಾಗಲೀ ಇತರ ಜಾಗಗಳಲ್ಲಾಗಲೀ ಇಡಬೇಡಿ.