ಬೆಳಗಾವಿ: ರಾಜ್ಯದಲ್ಲಿ ಭಾರತ್ ಜೋಡೋ ಯಾತ್ರೆಗೆ ವಿಡಿಯೋವೊಂದಕ್ಕೆ ಕೆಜಿಎಫ್ ನ ಹಾಡು ಬಳಕೆಯಾಗಿದೆ. ಇದರಿಂದ ಕಾಪಿರೈಟ್ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ಟ್ವಿಟರ್ ಖಾತೆಯನ್ನು ನಿರ್ಬಂಧಿಸಲು ಕೋರ್ಟ್ ಆದೇಶ ನೀಡಿದೆ. ಈ ಕುರಿತು ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
BIGG NEWS: ಚಂದ್ರಶೇಖರ್ ಸಾವಿನ ಬಗ್ಗೆ ವಿಶೇಷ ತನಿಖೆ ನಡೆಯುತ್ತಿದೆ: ಆರಗ ಜ್ಞಾನೇಂದ್ರ
ಮಾಜಿ ಸಚಿವ ವಿನಯ ಕುಲಕರ್ಣಿ 54ನೇ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, ‘ರಾಹುಲ್ ಗಾಂಧಿ ಡ್ಯಾನ್ಸ್ಗೆ ನಮ್ಮ ಕಾರ್ಯಕರ್ತರೊಬ್ಬರು ಕೆಜಿಎಫ್ ಹಾಡು ಸೇರಿಸಿ ವಿಡಿಯೊ ಮಾಡಿದ್ದರು. ಅದನ್ನು ಟ್ವಿಟರ್ನಲ್ಲಿ ಪ್ರಕಟಿಸಲಾಗಿತ್ತು. ಇದನ್ನೇ ನೆಪವಾಗಿಸಿ ನಮ್ಮ ಟ್ವಿಟರ್ ಖಾತೆ ಬ್ಲಾಕ್ ಮಾಡಿಸಲಾಗಿದೆ.
BIGG NEWS: ಚಂದ್ರಶೇಖರ್ ಸಾವಿನ ಬಗ್ಗೆ ವಿಶೇಷ ತನಿಖೆ ನಡೆಯುತ್ತಿದೆ: ಆರಗ ಜ್ಞಾನೇಂದ್ರ
ನೀವು ಟ್ವಿಟರ್ ಖಾತೆಯನ್ನದಾರೂ ಬ್ಲಾಕ್ ಮಾಡಿಸಿ ಅಥವಾ ರಾಹುಲ್ ಗಾಂಧಿ ಅವರನ್ನಾದರೂ ಜೈಲಿಗೆ ಹಾಕಿಸಿ. ನಮ್ಮ ಹೋರಾಟ, ಪ್ರಯತ್ನಗಳು ನಿಲ್ಲುವುದಿಲ್ಲ. ನಾವು ಎಂಥದ್ದೇ ಸಂದರ್ಭವನ್ನು ಎದುರಿಸಲು ಸಜ್ಜಾಗಿದ್ದೇವೆ’ ಎಂದು ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.