ಶಿವಮೊಗ್ಗ: ಸಾಗರದ ಗಣಪತಿ ದೇವಸ್ಥಾನಕ್ಕೆ ಭಕ್ತರ ಕಾಣಿಕೆಯ ಮಹಾಪೂರವೇ ಹರಿದು ಬಂದಿದೆ. ಇಂದು ನಡೆದಂತ ಹುಂಡಿ ಏಣಿಕೆ ಕಾರ್ಯದಲ್ಲಿ ಬರೋಬ್ಬರಿ 8 ಲಕ್ಷದ 80 ಸಾವಿರದ 910 ರೂಪಾಯಿ ನಗದು ಸಂಗ್ರಹವಾಗಿದೆ.

ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಗಣಪತಿ ದೇವಸ್ಥಾನದ ಹುಂಡಿ ಏಣಿಕೆ ಕಾರ್ಯವು ಕಾರ್ಯನಿರ್ವಹಣಾಧಿಕಾರಿ ಪ್ರಮಿಳಾ ಕುಮಾರಿ ನೇತೃತ್ವದಲ್ಲಿ ನಡೆಯಿತು. ಇಂದು ನೋಟಿನ ಏಣಿಕೆ ಮಾತ್ರವೇ ನಡೆಸಲಾಗಿದ್ದು, ಬರೋಬ್ಬರಿ 8 ಲಕ್ಷದ 80 ಸಾವಿರದ 910 ರೂಪಾಯಿ ಹಣ ಸಂಗ್ರಹವಾಗಿ ಹರಿದು ಬಂದಿದೆ. ಇನ್ನೂ ಗಣಪತಿ ದೇವಸ್ಥಾನದ ಹುಂಡಿಯ ಕಾಣಿಕೆ ಏಣಿಕೆ ಬಾಕಿ ಇದ್ದು, ಅದರ ಏಣಿಕೆಯ ನಂತ್ರ ಎಷ್ಟು ಹಣ ಬಂದಿರುವುದು ಖಚಿತಗೊಳ್ಳಲಿದೆ.

ಅಂದಹಾಗೇ ಈ ಹಿಂದೆ ಜುಲೈ.17, 2025ರಂದು ಗಣಪತಿ ದೇವಸ್ಥಾನದ ಹುಂಡಿಯನ್ನು ತೆರೆದು ಏಣಿಕೆ ಮಾಡಲಾಗಿತ್ತು. ಅದು 9 ಲಕ್ಷದ 42 ಸಾವಿರದ 895 ಹಣ ಸಂಗ್ರಹವಾಗಿತ್ತು. ಇಂದಿನ ಹುಂಡಿ ಹಣಕ್ಕೂ, ಈ ಹಿಂದಿನ ಹುಂಡಿ ಹಣಕ್ಕೂ ಭಕ್ತರ ಕಾಣಿಕೆಯು ಕೊಂಚ ಮಟ್ಟಿಗೆ ಹೆಚ್ಚಾಗಿರೋದು ಕಂಡು ಬಂದಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
BREAKING: ಗಂಭೀರ ಕರ್ತವ್ಯ ಲೋಪ, ಶಿಸ್ತು ನಿಯಮ ಉಲ್ಲಂಘನೆ: IAS ಅಧಿಕಾರಿ ಪಂಕಜ್ ಕುಮಾರ್ ಪಾಂಡೆಗೆ ಸಿಎಸ್ ನೋಟಿಸ್








