ಮೈಸೂರು : ಲೋಕಸಭಾ ಚುನಾವಣೆಗೆ ಈ ಬಾರಿ ಮೈಸೂರು ಕ್ಷೇತ್ರದಲ್ಲಿ ಮೈಸೂರು ಮಹಾರಾಜರಾಗಿರುವ ಯದುವೀರ ಒಡೆಯರ್ ಅವರು ಸ್ಪರ್ಧಿಸುತ್ತಿದ್ದು ನಾಮಪತ್ರ ಸಲ್ಲಿಸುವ ವೇಳೆದ್ದು ಯಾವುದೇ ಕೃಷಿಭೂಮಿ ಹಾಗೂ ಸ್ವಂತ ಮನೆ ಹೊಂದಿಲ್ಲ ಎಂದು ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.
ಹೌದು ಮೈಸೂರು ಮಹಾರಾಜರ ಬಳಿ ಸ್ವಂತ ಮನೆಯು ಇಲ್ಲ. ಈ ಕುರಿತಂತೆ ಆಸ್ತಿ ಘೋಷಣೆ ಮಾಡಿದ ಬಿಜೆಪಿ ಅಭ್ಯರ್ಥಿ ಯದುವೀರ ಅವರು, ಚುನಾವಣಾ ನಾಮಪತ್ರದ ವೇಳೆ ಆಫೀಡಿವೇಟ್ ಸಲ್ಲಿಸಿದ್ದು, ಒಟ್ಟು 4 ಕೋಟಿ 99 ಲಕ್ಷ 59 ಸಾವಿರ ರೂಪಾಯಿ ಚರಾಸ್ಥಿ ಹೊಂದಿದ್ದಾರೆ. ಸದ್ಯ ಕೈಯಲ್ಲಿ ಒಂದು ಲಕ್ಷ ರುಪಾಯಿ ನಗದು ಇದೆ. ಎರಡು ಬ್ಯಾಂಕಿನ ಖಾತೆಗಳಲ್ಲಿ 23.55 ಲಕ್ಷ ಬ್ಯಾಂಕ್ ಬ್ಯಾಲೆನ್ಸ್ ಹೊಂದಿದ್ದಾರೆ.
ವಿವಿಧ ಕಂಪನಿಗಳಲ್ಲಿ 1 ಕೋಟಿ ಮೌಲ್ಯದ ಬಾಂಡ್ ಹಾಗೂ ಶೇರುಗಳನ್ನು ಹೊಂದಿದ್ದಾರೆ.4 ಕೆಜಿ ಚಿನ್ನ ಮತ್ತು 20 ಕೆಜಿ ಬೆಳ್ಳಿ ಹೊಂದಿದ್ದಾರೆ. ಯಾವುದೇ ಕೃಷಿ ಭೂಮಿ ಹಾಗೂ ಸ್ವಂತ ಮನೆಯನ್ನು ಹೊಂದಿಲ್ಲ. ವಾಣಿಜ್ಯ ಕಟ್ಟಡಗಳು ಇಲ್ಲ. ಬ್ಯಾಂಕ್ ನಲ್ಲಿ ಸಾಲವಿಲ್ಲ ಯಾವುದೇ ಆದಾಯ ತೆರಿಗೆ ಬಾಕಿ ಉಳಿಸಿಕೊಂಡಿಲ್ಲ ಎಂದು ಉಲ್ಲೇಖಿಸಿದ್ದಾರೆ.