ಕೆಎನ್ ಎನ್ ನ್ಯೂಸ್ ಡೆಸ್ಕ್ : ಇಂದಿನ ದಿನಗಳಲ್ಲಿ ಬೊಜ್ಜು ಕಾಯಿಲೆ ಸಾಮಾನ್ಯವಾಗಿ ಬಿಟ್ಟಿದೆ. ಬೊಜ್ಜು ಮಧುಮೇಹಕ್ಕೆ ನೇರವಾಗಿ ಆಹ್ವಾನ ನೀಡುತ್ತಿದ್ದು, ಮಧುಮೇಹಿಗಳು ಬೊಜ್ಜು ಕರಗಿಸಲು ಸಾಕಷ್ಟು ಕಷ್ಟ ಪಡುತ್ತಾರೆ.
ಆದರೆ ಕೆಲವು ಮಧುಮೇಹ ಔಷಧಗಳು ಬೊಜ್ಜು ಕರಗಿಸುವಲ್ಲಿ ಸಹಾಯ ಮಾಡುತ್ತವೆ. ಇತರ ದೀರ್ಘಕಾಲದ ಕಾಯಿಲೆಗಳಂತೆ ಹೆಚ್ಚು ಚರ್ಚಗೆ ಒಳಪಡದಿದ್ದರೂ, ಬೊಜ್ಜು ವಾಸ್ತವವಾಗಿ ಎಲ್ಲಾ ರೋಗಗಳ ತಾಯಿ ಎಂದು ಹೇಳಬಹುದು. ವ್ಯಕ್ತಿಯೋರ್ವನ ಬಾಡಿ ಮಾಸ್ ಇಂಡೆಕ್ಸ್ ನಿರ್ದಿಷ್ಟ ಕಟ್-ಆಫ್ಗಿಂತ ಹೆಚ್ಚಿದ್ದರೆ, ಅದನ್ನು ಬೊಜ್ಜು ಎಂದು ಪರಿಗಣಿಸಲಾಗುತ್ತದೆ.
ಭಾರತೀಯರಿಗಾಗಿ, ಕೆಜಿ/ಮೀ2 ನಲ್ಲಿನ ಕಟ್-ಆಫ್ಗಳು 23 ರಿಂದ 24.9ಕ್ಕೆ ಅಧಿಕ ತೂಕ ಮತ್ತು 25ಕ್ಕೆ ಬೊಜ್ಜು ಎಂದು ಪರಿಗಣಿಸಲಾಗುತ್ತದೆ. ಹಾಗೆಯೇ ಮಹಿಳೆಯರಲ್ಲಿ 80 ಸೆ.ಮೀ. ಮತ್ತು ಪುರುಷರಲ್ಲಿ 90 ಸೆ.ಮೀ ಸೊಂಟದ ಸುತ್ತಳತೆಯನ್ನು ಹೆಚ್ಚು ಎಂದು ಪರಿಗಣಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ, ಬೊಜ್ಜು ವಿಶ್ವಾದ್ಯಂತ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. 1975ರಿಂದ ಜಾಗತಿಕ ಬೊಜ್ಜು ಪ್ರಮಾಣ ಒಟ್ಟಾರೆ ಮೂರು ಪಟ್ಟು ಹೆಚ್ಚಾಗಿದೆ ಎಂಬುದು ನಿಜಕ್ಕೂ ಆಘಾತಕಾರಿ ಸಂಗತಿ.
ಬೊಜ್ಜು ಮಧುಮೇಹಕ್ಕೆ ಹೇಗೆ ಆಹ್ವಾನ ನೀಡುತ್ತದೆ?
ಹೆಚ್ಚುತ್ತಿರುವ ಸ್ಥೂಲಕಾಯತೆಯು ಮತ್ತು ಟೈಪ್ 2 ಮಧುಮೇಹದ ನಡುವೆ ಬಲವಾದ ಸಂಬಂಧ ಇದೆ. ಇದು ಅನೇಕ ಹಂತಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಮೊದಲನೆಯದಾಗಿ, ನೀವು ಅಧಿಕ ತೂಕ ಅಥವಾ ಬೊಜ್ಜು ಹೊಂದಿದ್ದರೆ, ಮಧುಮೇಹವನ್ನು ಆಹ್ವಾನಿಸುವ ಅಪಾಯವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಹೆಚ್ಚಿನ ದೇಹದ ತೂಕ ಹೊಂದಿರುವವರಲ್ಲಿ,ಮಧುಮೇಹದ ಅಪಾಯವು ಆರು ಪಟ್ಟು ಹೆಚ್ಚು ಎಂದು ಅಧ್ಯಯನವೊಂದು ತಿಳಿಸಿದೆ.
ನೀವು ಮಧುಮೇಹವನ್ನು ತಡೆಗಟ್ಟಲು ಬಯಸಿದರೆ, ನಿಮ್ಮ ಸೊಂಟದ ಭಾಗದ ಬೊಜ್ಜನ್ನು ಕಡಿಮೆ ಮಾಡುವುದು ಅನಿವಾರ್ಯ. ನೀವು ಮಧುಮೇಹ ಹೊಂದಿದ್ದರೆ, ಸ್ಥೂಲಕಾಯತೆಯು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಪರದಾಡುತ್ತದೆ. ಇದರಿಂದ ನೀವು ಮಧುಮೇಹಕ್ಕಾಗಿ ತೆಗೆದುಕೊಳ್ಳುವ ಔಷಧಿಗಳ ಅಗತ್ಯವು ಕೂಡ ಕ್ರಮೇಣ ಹೆಚ್ಚಾಗುತ್ತದೆ. ಬೊಜ್ಜು ಮಧುಮೇಹದ ತೊಡಕುಗಳನ್ನು ಇನ್ನಷ್ಟು ಹದಗೆಡಿಸುತ್ತದೆ. ಉದಾಹರಣೆಗೆ ನಿಮ್ಮ ಹೃದಯಾಘಾತದ ಸಂಭವನೀಯತೆಯ ಅಪಾಯವು ಹೆಚ್ಚಾಗುತ್ತದೆ.