ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿನ ಅಕ್ರಮ ಹಣ ವರ್ಗಾವಣೆ ಬಗ್ಗೆ ದಾಖಲೆಗಳು ಸಿಕ್ಕಿದ್ದಾವೆ ಎಂಬುದಾಗಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸ್ಪೋಟಕ ಬಾಂಬ್ ಸಿಡಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, “ಬಿಜೆಪಿ ಕಾಲದಲ್ಲಿ ಅಕ್ರಮ ಹಣ ವರ್ಗಾವಣೆಯಾಗಿರುವ ದಾಖಲೆಗಳು ಸಿಕ್ಕಿವೆ. ಬಿಜೆಪಿ ಸಮಯದಲ್ಲಿನ ಅಕ್ರಮ ಹಣ ವರ್ಗಾವಣೆಯ ಪ್ರಕರಣಗಳು ಗೌಪ್ಯವಾಗಿ ಕೆಲವು ಲೋಕಾಯುಕ್ತ ತನಿಖೆ ಸೇರಿದಂತೆ ಇತರೇ ತನಿಖೆಯಾಗಿವೆ. ಕೆಲವು ಹಣ ಮತ್ತೆ ಮರಳಿ ಬಂದಿದೆ. ಈ ರೀತಿ ಗಮನಕ್ಕೆ ಬರುವ ಎಲ್ಲಾ ಪ್ರಕರಣಗಳನ್ನು ಪರಿಶೀಲಿಸಲಾಗುವುದು. ಗೂಳಿಹಟ್ಟಿ ಶೇಖರ್ ಅವರು ಬಿಜೆಪಿ ಮೇಲೆ ಮಾಡಿರುವ ಆರೋಪವನ್ನು ಪರಿಶೀಲಿಸುತ್ತೇವೆ” ಎಂದು ಉತ್ತರಿಸಿದರು.
“ಈ ಹಿಂದಿನ ಸರ್ಕಾರದ ಮುಖ್ಯಮಂತ್ರಿ, ಸಚಿವರುಗಳಿಗೆ ಹಿಂದೆ ಯಾವ, ಯಾವ ಪ್ರಕರಣಗಳು ನಡೆದಿವೆ ಎಂದು ಅವರಿಗೂ ತಿಳಿದಿವೆ. ಬಿಜೆಪಿ ಇದ್ದಾಗಲೂ ಈ ರೀತಿಯ ಪ್ರಕರಣಗಳು ನಡೆದಿವೆ. ಹಗರಣಗಳ ಬಗ್ಗೆ ಮಾಹಿತಿಯೂ ಬಂದಿದೆ. ದಾಖಲೆಯೂ ಸಿಕ್ಕಿದೆ. ಬಿಜೆಪಿಯವರು ಹಗರಣ ಮಾಡಿದ್ದಾರೋ ಬಿಟ್ಟಿದ್ದಾರೋ ಅದರ ಬಗ್ಗೆ ಈಗಲೇ ಮಾತನಾಡಲು ಹೋಗುವುದಿಲ್ಲ. ಆದರೆ ಎಲ್ಲವನ್ನು ತನಿಖೆಗೆ ಒಳಪಡಿಸುತ್ತೇವೆ” ಎಂದರು.
“ಎಲ್ಲಾ ನಿಗಮದ ಅಧ್ಯಕ್ಷರನ್ನು ಕರೆದು ಚರ್ಚೆ ನಡೆಸಲಾಗುವುದು. ಬಡ್ಡಿ ಆಸೆಗೆ ಈ ರೀತಿಯ ಪ್ರಕರಣಗಳು ನಡೆಯುತ್ತಿವೆ. ಈ ವಿಚಾರದಲ್ಲಿ ಸಿಎಂ ಹಾಗೂ ಆರ್ಥಿಕ ಇಲಾಖೆಯವರು ಒಂದಷ್ಟು ಸೂಚನೆಗಳನ್ನು ನೀಡಿದ್ದಾರೆ” ಎಂದರು.
“ವಾಲ್ಮೀಕಿ ನಿಗಮದ ಹಣ ತೆಲಂಗಾಣ ಚುನಾವಣೆಯಲ್ಲಿ ಬಳಕೆಯಾಗಿದೆ ಎನ್ನುವ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ “ಬಿಜೆಪಿಯ ದಡ್ಡತನದ ಹೇಳಿಕೆ” ಎಂದು ಹೇಳಿದರು.
ಸಚಿವರ ಗಮನಕ್ಕೆ ಬಾರದೆ ಅಧಿಕಾರಿಗಳು ಅಕ್ರಮ ಎಸಗುತ್ತಿದ್ದಾರೆಯೇ ಎಂದಾಗ “ಈ ರೀತಿ ಮಾಡಲು ಆಗುವುದಿಲ್ಲ, ಮಾಡಬಾರದು. ಬೋರ್ಡ್ ರೆಸಲ್ಯೂಷನ್ ಇಲ್ಲದೆ ಒಂದು ಬ್ಯಾಂಕಿನ ಖಾತೆಯಿಂದ ಮತ್ತೊಂದು ಖಾತೆಗೆ ಹಣ ವರ್ಗಾವಣೆ ಮಾಡಲು ಆಗುವುದಿಲ್ಲ. ನಾನು ಇಂಧನ ಸಚಿವನಾಗಿದ್ದಾಗ ಅನೇಕ ಬ್ಯಾಂಕಿನವರು ಬಂದು ನಮ್ಮಲ್ಲಿ ಠೇವಣಿ ಇಡಿ ಎಂದು ಕೇಳುತ್ತಿದ್ದರು, ನಾನು ಇದಕ್ಕೆಲ್ಲ ಪ್ರತಿಕ್ರಿಯೆ ನೀಡುತ್ತಿರಲಿಲ್ಲ” ಎಂದರು.
ಪ್ರತಿ ನಿಗಮಕ್ಕೆ ಎಸಿಎಸ್ ಕಾರ್ಯದರ್ಶಿಗಳು ಇರುತ್ತಾರೆ. ಇಂತಹ ವಿಚಾರದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಾರೆ. ಮುಖ್ಯಮಂತ್ರಿಗಳು ಈ ವಿಚಾರವಾಗಿ ಈಗಾಗಲೇ ಎಸ್ ಐಟಿ ರಚನೆ ಮಾಡಿ ತನಿಖೆಗೆ ನೀಡಿದ್ದಾರೆ. ಒಂದು ಬ್ಯಾಂಕಿನಲ್ಲಿ ಈ ರೀತಿಯ ಅಕ್ರಮ ಕಂಡುಬಂದರೆ ಪ್ರಕರಣದ ತನಿಖೆ ನೇರವಾಗಿ ಸಿಬಿಐಗೆ ತಲುಪುತ್ತದೆ. ಅವರು ಸಹ ತನಿಖೆ ನಡೆಸಲಿದ್ದಾರೆ” ಎಂದು ತಿಳಿಸಿದರು.
BREAKING: ಸಿದ್ಧರಾಮಯ್ಯ ಸಂಪುಟ ಮೊದಲ ವಿಕೆಟ್ ಪತನ: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಿ.ನಾಗೇಂದ್ರ
ವಿಧಾನಸಭೆಯಿಂದ ವಿಧಾನಪರಿಷತ್ತಿಗೆ 11 ಅಭ್ಯರ್ಥಿಗಳು ಅವಿರೋಧ ಆಯ್ಕೆ: ಎಂ.ಕೆ ವಿಶಾಲಾಕ್ಷಿ ಮಾಹಿತಿ