ಬೆಂಗಳೂರು: ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನದ ವೇಳೆಯಲ್ಲಿ ಬೆಂಗಳೂರಲ್ಲಿ ಮತದಾನಕ್ಕೆ ತೆರಳಿದಂತ ಮಹಿಳೆಯೊಬ್ಬರಿಗೆ ಹೃದಯಾಘಾತ ಉಂಟಾಗಿದೆ. ಈ ವೇಳೆಯಲ್ಲಿ ಸ್ಥಳದಲ್ಲೇ ಇದ್ದಂತ ವೈದ್ಯರೊಬ್ಬರು ಪ್ರಾಥಮಿಕ ಚಿಕಿತ್ಸೆ ನೀಡಿ, ಪ್ರಾಣ ಉಳಿಸಿದಂತ ಘಟನೆ ನಡೆದಿದೆ.

ಬೆಂಗಳೂರಿನ ಜೆಪಿ ನಗರದ 8ನೇ ಹಂತದ ಜಂಬೂ ಸವಾರಿ ದಿನ್ನೆಯಲ್ಲಿ ಇಂದು ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಮತಗಟ್ಟೆಯಲ್ಲಿ ಮತದಾನ ನಡೆಯುತ್ತಿತ್ತು. ಮತದಾರರು ಸರದಿ ಸಾಲಿನಲ್ಲಿ ನಿಂತು, ತಮ್ಮ ಹಕ್ಕನ್ನು ಚಲಾಯಿಸಿದರು.

ಹೀಗೆ ಜಂಬೂ ಸವಾರಿ ದಿನ್ನೆಯ ಮತಗಟ್ಟೆಯಲ್ಲಿ ಮತ ಚಲಾಯಿಸೋದಕ್ಕೆ ಬಂದಂತ 50 ವರ್ಷದ ಮಹಿಳೆಯೊಬ್ಬರು ದಿಢೀರ್ ಹೃದಯಾಘಾತಕ್ಕೆ ಒಳಗಾದರು. ಕೂಡಲೇ ಬೊಮ್ಮಸಂದ್ರದ ನಾರಾಯಣ ಆರೋಗ್ಯ ಕೇಂದ್ರದ ತಜ್ಞ ವೈದ್ಯ ಡಾ.ಗಣೇಶ್ ಶ್ರೀನಿವಾಸ್ ಪ್ರಸಾದ್ ಅವರು, ಮಹಿಳೆಗೆ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿ, ಪ್ರಾಣ ಉಳಿಸಿದ್ದಾರೆ. ಈ ಮೂಲಕ ವೃತ್ತಿ ಪ್ರಾವೀಣ್ಯತೆಯನ್ನು ಮೆರೆದಿದ್ದಾರೆ.

ಡಿಕೆಶಿ ರಾತ್ರೋರಾತ್ರಿ ಗಿಫ್ಟ್ ಕೂಪನ್, ಹಣ, ದೇವರ ಲಾಡು ಹಂಚಿದ್ದಾರೆ: HD ಕುಮಾರಸ್ವಾಮಿ ಗಂಭೀರ ಆರೋಪ

‘SC, ST, OBC’ ಹಕ್ಕುಗಳನ್ನ ಕಸಿದುಕೊಳ್ಳಲು ಕಾಂಗ್ರೆಸ್ ಪಿತೂರಿ : ಪ್ರಧಾನಿ ಮೋದಿ

Share.
Exit mobile version