ಬಾಗಲಕೋಟೆ: ಬಾಗಲಕೋಟೆಯಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ವೃದ್ಧನೊಬ್ಬ 187 ನಾಣ್ಯಗಳನ್ನು ನುಂಗಿರುವ ಘಟನೆ ನಡೆದಿದೆ. ಸತತ ಪರಿಶ್ರಮದ ಬಳಿಕ ಜಿಲ್ಲೆಯ ಎಚ್ಎಸ್ಕೆ ಆಸ್ಪತ್ರೆಯ ವೈದ್ಯರ ತಂಡ ರೋಗಿಯ ಹೊಟ್ಟೆಯಿಂದ ಈ ನಾಣ್ಯಗಳನ್ನು ಹೊರತೆಗೆದಿದೆ.
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ದ್ಯಾಮಪ್ಪ ಹರಿಜನ ಎಂಬ 58 ವರ್ಷದ ವೃದ್ಧ 187 ನಾಣ್ಯಗಳನ್ನು ನುಂಗಿದ್ದ. ವೃದ್ಧ ನಾಣ್ಯ ನುಂಗಿರುವ ಬಗ್ಗೆ ಕುಟುಂಬಸ್ಥರಿಗೆ ಗೊತ್ತಾಗಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಎಂಡೋಸ್ಕೋಪಿ ಮಾಡಿದಾಗ ವೃದ್ಧ ನಾಣ್ಯಗಳನ್ನು ನುಂಗಿರುವುದು ಗೊತ್ತಾಯಿತು. ಅದರ ನಂತರವೇ ಆತನಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಆತನ ಹೊಟ್ಟೆಯಿಂದ ಒಂದೊಂದಾಗಿ ಒಟ್ಟು 187 ನಾಣ್ಯಗಳನ್ನು ತೆಗೆಯಲಾಗಿದೆ. ಅವುಗಳಲ್ಲಿ 5 ರೂ. ನ 56 ನಾಣ್ಯಗಳು, 2 ರೂ. ನ 51 ನಾಣ್ಯಗಳು ಮತ್ತು 1 ರೂ. ನ 80 ನಾಣ್ಯಗಳು ಸೇರಿ ಒಟ್ಟು 187 ನಾಣ್ಯಗಳನ್ನು ಹೊರ ತರಗರಯಲಾಗಿದ್ದು, ಈ ಎಲ್ಲಾ ನಾಣ್ಯಗಳ ಒಟ್ಟು ತೂಕ ಒಂದೂವರೆ ಕಿ. ಲೋ. ಆಗಿದೆ.
ಈ ಅಪರೂಪದ ಶಸ್ತ್ರಚಿಕಿತ್ಸೆಯನ್ನು ಡಾ.ಈಶ್ವರ ಕಲಬುರಗಿ, ಡಾ.ಪ್ರಕಾಶ ಕಟ್ಟಿಮನಿ, ಡಾ.ಅರ್ಚನಾ, ಡಾ.ರೂಪಾ ಹುಲಕುಂದೆ ಅವರು ವೃತ್ತಿಪರವಾಗಿ ಮಾಡಿದ್ದಾರೆ. ಮುದುಕ ನಾಣ್ಯಗಳನ್ನು ಏಕೆ ನುಂಗಿದ್ದಾನೆ ಎಂಬುದಕ್ಕೆ ವೈದ್ಯರು ಸರಿಯಾದ ಉತ್ತರವನ್ನು ನೀಡಲು ಸಾಧ್ಯವಾಗದಿದ್ದರೂ, ವೃದ್ಧ ಈ ನಾಣ್ಯಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಲು ಹೀಗೆ ಮಾಡಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
WATCH VIDEO: ಲಾವಾ ಸರೋವರಕ್ಕೆ ಮನುಷ್ಯ ಬಿದ್ದರೆ ಏನಾಗುತ್ತದೆ? ಇಲ್ಲಿದೆ ಆಘಾತಕಾರಿ ವಿಡಿಯೋ
ಬ್ಯಾಂಕ್ ಗ್ರಾಹಕರೇ ಗಮನಿಸಿ: ʻಡಿಸೆಂಬರ್ʼ ತಿಂಗಳಲ್ಲಿ ಬ್ಯಾಂಕುಗಳಿಗೆ 13 ದಿನ ರಜೆ |Bank Holidays December 2022
BIGG NEWS : ಕನ್ನಡ ಸಾಹಿತ್ಯ ಸಮ್ಮೇಳನ ಪ್ರತಿನಿಧಿಗಳಿಗೆ ಕಸಾಪ ಸದಸ್ಯತ್ವ ಕಡ್ಡಾಯ : ಮಹೇಶ್ ಜೋಶಿ
WATCH VIDEO: ಲಾವಾ ಸರೋವರಕ್ಕೆ ಮನುಷ್ಯ ಬಿದ್ದರೆ ಏನಾಗುತ್ತದೆ? ಇಲ್ಲಿದೆ ಆಘಾತಕಾರಿ ವಿಡಿಯೋ