ಬೆಂಗಳೂರು: ರಾಜ್ಯ ಸರ್ಕಾರ ಆದೇಶ ಹೊರಡಿಸಿ ತಿಂಗಳು ಸಮೀಪಿಸುತ್ತಿದ್ದರೂ ಮಾತೃ ಇಲಾಖೆಗೆ ತೆರಳದೆ ವೈದ್ಯರು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಲ್ಲೇ ಇನ್ನೂ ಕಾರ್ಯನಿರ್ವಹಿಸುತ್ತಿದ್ದಾರೆ. ಆ ಮೂಲಕ ರಾಜ್ಯ ಸರ್ಕಾರದ ಆದೇಶಕ್ಕೂ ಕ್ಯಾರೆ ಎನ್ನದೇ ಮಾತೃ ಇಲಾಖೆಗೆ ತೆರಳದೆ ಮೀನಾಮೇಷ ಮಾಡುತ್ತಿರೋ ಆರೋಪ ಕೇಳಿ ಬಂದಿದೆ.
ನಿಯೋಜನೆ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಜಿಲ್ಲಾ ಅಂಕಿತಾಧಿಕಾರಿಗಳ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯರು, ಕೂಡಲೆ ಜಾರಿಗೆ ಬರುವಂತೆ ಮಾತೃ ಇಲಾಖೆಗೆ ತೆರಳಿ ಮುಂದಿನ ಸ್ಥಳ ನಿಯುಕ್ತಿಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ ಆಯುಕ್ತರ ಕಚೇರಿಯಲ್ಲಿ ವರದಿ ಮಾಡಿಕೊಳ್ಳಬೇಕು. ಇಲಾಖೆಗೆ ಸಂಬಂಧಿಸಿದ ಯಾವುದೇ ಕರ್ತವ್ಯವನ್ನು ಅಂಕಿತಾಧಿಕಾರಿಗಳು ನಿರ್ವಹಿಸಬಾರದು. ತಪ್ಪಿದ್ದಲ್ಲಿ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಜ.23ರಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಆದೇಶ ಹೊರಡಿಸಿತ್ತು. ಆದರೆ, ಮಾತೃ ಇಲಾಖೆಗೆ ತೆರಳದೆ ಹುದ್ದೆಯಲ್ಲಿ ಮುಂದುವರಿದು ಆಡಳಿತಾತ್ಮಕ ಕಾರ್ಯವನ್ನು ಮಾಡುತ್ತಿದ್ದಾರೆ.
ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಆಹಾರ ಸುರಕ್ಷತೆ ಇಲಾಖೆ ಆಯುಕ್ತರು ವೈದ್ಯರ ನ್ನು ಬಿಡುಗಡೆಗೊಳಿಸಿ ಆದೇಶಿಸಿದ್ದರು. ಆದರೆ, ವೈದ್ಯ ರು ಮಾತೃ ಇಲಾಖೆಗೆ ತೆರಳದ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಮಂಡಳಿ ಕೆಲವರಿಗೆ ಮಾತೃ ಇಲಾಖೆಗೆ ತೆರಳದಂತೆ ಆದೇಶಿಸಿತ್ತು. ಇನ್ನೂ ಕೆಲವರಿಗೆ ನಾಟ್ ಟು ರಿಲೀವ್ ಎಂದು ಆದೇಶ ಹೊರಡಿಸಿದೆ. ಆದರೆ, ವೈದ್ಯರು 2 ಕಡೆಯಿಂದ ಬಿಡುಗಡೆ ನಂತರ ಈ ಇಲಾಖೆಯಲ್ಲಿ ಮುಂದುವರಿಯಲು ಸರ್ಕಾರದ ಪ್ರಧಾನ ಕಾರ್ಯದರ್ಶಿ ಅವರಿಂದ ಅನುಮತಿ ಪತ್ರ ಪಡೆಯಬೇಕಾಗುತ್ತದೆ. ಅನಮತಿ ಪಡೆದ ನಂತರ ಅಂಕಿತಾಧಿಕಾರಿಗಳ ಹುದ್ದೆಯಲ್ಲಿ ಕಾರ್ಯನಿರ್ವಹಿಸಬೇಕು. ಆದರೆ, ಅನುಮತಿ ಪಡೆಯದೆ ರಾಜ್ಯಾದ್ಯಂತ ಆಹಾರ ಉದ್ದಿಮೆದಾರರಿಗೆ ಪರವಾನಗಿ ನೀಡುತ್ತಾ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ನೀಡಿದ್ದ ಪರವಾನಗಿಗೆ ಎಷ್ಟರಮಟ್ಟಿಗೆ ಮಾನ್ಯತೆ ಇದೆ ಎಂಬ ಪ್ರಶ್ನೆ ಮೂಡುತ್ತಿದೆ.
ವೃತ್ತಿ ಬಾಂಧವರ ಉಳಿಸಿಕೊಳ್ಳಲು ಯತ್ನ:
ಬಿಬಿಎಂಪಿ ಉತ್ತರ ಅಂಕಿತಾಧಿಕಾರಿ ಡಾ. ಜರ್ನಾಧನ್ ಅವರು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಿಂದ ಮಾತೃ ಇಲಾಖೆಗೆ ಬಿಡುಗಡೆಗೊಳಿಸಲು ಪತ್ರ ಬರೆದಿದ್ದರು. ಆದರೆ, ಮಾತೃ ಇಲಾಖೆಗೆ ಹಿಂದಿರುಗದೆ ಅಂಕಿತಾಧಿಕಾರಿ ಹುದ್ದೆ ಹಾಗೂ ಉಪ ಆಯುಕ್ತರು(ಆಡಳಿತ) ಪ್ರಭಾರದಲ್ಲಿ ಮುಂದುವರಿದಿದ್ದಾರೆ. ಇವರು ವೃತ್ತಿ ( ವೈದ್ಯರು) ಬಾಂಧವರನ್ನು ಇಲಾಖೆಯಲ್ಲಿಯೇ ಉಳಿಸಿಕೊಳ್ಳುವ ಸಲುವಾಗಿ ನ್ಯಾಯಾಲಯಕ್ಕೆ ಪ್ರಕರಣಗಳ ಕುರಿತು ಕೋರ್ಟ್ ಮತ್ತು ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡದ ಕಾಲಹರಣ ಮಾಡುತ್ತಿದ್ದಾರೆ. ಬೇರೆ ವೃಂದದ ನೌಕರರಿಗೆ ತೊಂದರೆ ಕೊಡಲು ವೈದ್ಯರು ಇಲ್ಲಿಯೇ ಮುಂದುವರಿಯಲು ಹುನ್ನಾರ ನಡೆಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರು, ಜರ್ನಾಧನ್ ಸೇರಿ ಎಲ್ಲಾ ಅಂಕಿತಧಿಕಾರಿ ಗಳಿಗೆ (ವೈದ್ಯರಿಗೆ )ಪಾಸ್‌ವರ್ಡ್ ನೀಡದಂತೆ ಕ್ರಮಕೈಗೊಳ್ಳಬೇಕು. ಡಾ ಜನಾರ್ಧನ್‌ನನ್ನು ಉಪ ಆಯುಕ್ತರು(ಆಡಳಿತ )ಪ್ರಭಾರ ರಿಂದ ಕೂಡಲೇ ಬಿಡುಗಡೆಗೊಳಿಸಬೇಕು. ಬಿಬಿಎಂಪಿ ದಕ್ಷಿಣದಲ್ಲಿ ಡಾ.ಸುರೇಶ ಕರ್ತವ್ಯ ನಿರ್ಲಕ್ಷತೆ ಮೇರಗೆ ಅಮಾನತ್ತುಗೊಂಡಿದ್ದು, ಸದರಿ ಪ್ರಕರಣದಲ್ಲಿ ಕೆಎಟಿ ಯಲ್ಲಿ ಇವರ ವಿರುದ್ಧ ತೀರ್ಪು ಬಂದಿದೆ. ಆದರೆ, ಡಾ. ಜನಾರ್ಧನ್ ಕೃಪೆಯಿಂದ ವಾರದ ನಂತರ ಮಾನ್ಯ ನ್ಯಾಯಾಲಯದ ತಡೆಯಜ್ಞೆ ಸಿಗುವವರೆಗೂ ಸರ್ಕಾರಕ್ಕೆ ಮಾಹಿತಿ ಸಲ್ಲಿಸದೆ ಮೀನಾಮೇಷ ಎಣಿಸುತ್ತಿದ್ದಾರೆ. ಇವರನ್ನು ಉಪ ಆಯುಕ್ತರು ಉದ್ದೆಯಿಂದ ಕೂಡಲೇ ಬಿಡುಗಡೆಗೊಳಿಸಿ ಎಲ್ಲ ಪ್ರಕರಣಗಳ ಮಾಹಿತಿಯನ್ನು ಪಡೆದು ಮುಂದಿನ ಕ್ರಮ ತೆಗೆದುಕೊಳ್ಳುವ ಅವಶ್ಯತೆ ಇದೆ.
ಮಾ.1ರಿಂದ ದ್ವಿತೀಯ PUC ಪರೀಕ್ಷೆ ಆರಂಭ: ಪರೀಕ್ಷಾ ಕೇಂದ್ರದ ಸುತ್ತಮುತ್ತ 144 ಸೆಕ್ಷನ್ ಅಡಿ ನಿಷೇಧಾಜ್ಞೆ ಜಾರಿ
BREAKING:ಪರ್ವೇಶ್ ವರ್ಮಾ ದೆಹಲಿ ಸಿಎಂ ಆಗ್ತಾರಾ? ಬಿಜೆಪಿ ಅಭ್ಯರ್ಥಿ ಯಾರು | Delhi CM Announcement