ಬೆಳಗಾವಿ : ರೋಗಿಯ ಕೈಗೆ ಕೊಳಲು ಕೊಟ್ಟು, ರೋಗಿ ಕೊಳಲು ಊದುವಾಗಲೇ ಯಶಸ್ವಿಯಾಗಿ ಮೆದುಳು ಶಸ್ತ್ರಚಿಕಿತ್ಸೆ ಮಾಡಿಸುವ ಮೂಲಕ ಅಪರೂಪದ ದಾಖಲೆಗೆ ಕೊಲ್ಲಾಪುರದ ಕನೇರಿ ಮಠದ ಸಿದ್ದಗಿರಿ ಆಸ್ಪತ್ರೆಯ ವೈದ್ಯರು ಪಾತ್ರವಾಗಿದ್ದಾರೆ.
ಹೌದು ಮೆದುಳಿನಲ್ಲಿ ಬೆಳೆದ ಟ್ಯೂಮರ್ ಆಪರೇಷನ್ ಮಾಡಿದ ಸಿದ್ದಗಿರಿ ಆಸ್ಪತ್ರೆ ವೈದ್ಯರು ಗಡ್ಡೆಯನ್ನು ಹೊರ ತೆಗೆದಿದ್ದಾರೆ. ರೋಗಿ ಕೈಗೆ ಕೊಳಲು ಕೊಟ್ಟು ಮೆದುಳು ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಿದ್ದಾರೆ. ಕನ್ಹೆರಿ ಮಠದ ಆಸ್ಪತ್ರೆ ವೈದ್ಯರಿಂದ ಇದೀಗ ಈ ಒಂದು ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ರೋಗಿ ಕೈಗೆ ಕೊಳಲು ಕೊಟ್ಟು ಊದಲು ಹೇಳಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಆಸ್ಪತ್ರೆಯ ನರಶಸ್ತ್ರ ಚಿಕಿತ್ಸಕ ಡಾ. ಶಿವಶಂಕರ್ ಮರಜಕ್ಕೆ ಹಾಗೂ ಅರವಳಿಗೆ ತಜ್ಞ ಪ್ರಕಾಶ ಭರಮಗೌಡ ಅವರು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ವೈದ್ಯ ಲೋಕ ಅಚ್ಚರಿಯಿಂದ ತಮ್ಮತ್ತ ನೋಡುವಂತೆ ಮಾಡಿದ್ದಾರೆ. ರೋಗಿಗೆ ಯಾವುದೇ ತೊಂದರೆ ಆಗದಂತೆ, ಆರಾಮವಾಗಿ ಕೊಳಲು ಊದುತ್ತಾ ಮಲಗಿರುವಾಗಲೇ ಶಸ್ತ್ರಚಿಕಿತ್ಸೆ ಮಾಡಿದ್ದು, ಎಲ್ಲರ ಗಮನ ಸೆಳೆದಿದೆ.
ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ರೋಗಿ ಎಚ್ಚರ ಇರುವಾಗಲೇ ಶಸ್ತ್ರ ಚಿಕಿತ್ಸೆ ನೆರವೇರಿಸಿದ್ದು ಇಡೀ ಏಷಿಯಾದಲ್ಲೆ ಯಾರೂ ಮಾಡಿಲ್ಲ. ಅಂಥ ವಿಶಿಷ್ಟ ದಾಖಲೆಗೆ ನಮ್ಮ ಕನೇರಿ ಮಠದ ಸಿದ್ಧಗಿರಿ ಆಸ್ಪತ್ರೆ ಪಾತ್ರವಾಗಿದೆ. ರೋಗಿಯ ಆತ್ಮವಿಶ್ವಾಸ ಹೆಚ್ಚಿಸುವ ಉದ್ದೇಶದಿಂದ ಕೊಳಲು ಊದುವಾಗ, ಐಸ್ ಕ್ರೀಮ್ ತಿನ್ನುವಾಗ ಆಪರೇಶನ್ ಮಾಡಲಾಗಿದೆ.
ಇನ್ನು ಕೂಲಿ ನಾಲಿ ಮಾಡಿ ಬದುಕು ಸಾಗಿಸುವ ಬಡ ರೋಗಿಗಳ ಶಸ್ತ್ರಚಿಕಿತ್ಸೆಗೆ 1.25 ಲಕ್ಷ ರೂಪಾಯಿಯಲ್ಲೂ ಕಡಿಮೆಗೊಳಿಸಿ, ನಮ್ಮ ನಮ್ಮ ನಿಧಿಯಿಂದ ಹಣ ಹೊಂದಿಸಿ, ಶೇ.50ರಷ್ಟು ಮಾತ್ರ ಬಿಲ್ ತೆಗೆದುಕೊಳ್ಳಲಾಗುತ್ತಿದೆ. ಕಡಿಮೆ ಖರ್ಚಿನಲ್ಲಿ ಹೇಗೆ ಸಾಧ್ಯ.?ನಮ್ಮ ವೈದ್ಯರು ಕಂಪನಿ ಜೊತೆಗೆ ನೇರವಾಗಿ ಅತೀ ಕಡಿಮೆ ಬೆಲೆಯಲ್ಲಿ ಓಷಧಿ ಖರೀದಿಸುತ್ತಾರೆ. ಆಸ್ಪತ್ರೆಯ ಶುಲ್ಕವನ್ನೂ ಹೆಚ್ಚಿಗೆ ತೆಗೆದುಕೊಳ್ಳಲ್ಲ.
ಇನ್ನು ಯಂತ್ರೋಪಕರಣಗಳನ್ನು ದಾನಿಗಳ ಬಳಿಕ ಭೀಕ್ಷೆ ಬೇಡಿ ಬಂದ ಹಣದಿಂದ ಖರೀದಿಸುತ್ತೇವೆ. ಹಾಗಾಗಿ, ನಮ್ಮ ಆಸ್ಪತ್ರೆ ಮೇಲೆ ಯಾವುದೇ ಬ್ಯಾಂಕ್ ಲೋನ್ ಇಲ್ಲ. ಪ್ರತಿ ತಿಂಗಳೂ ಕಂತು ತುಂಬಬೇಕು ಎನ್ನುವ ಚಿಂತೆ ಇಲ್ಲ. ಆದ್ದರಿಂದ ಯಾರೂ ಹಣ ಇಲ್ಲದೇ ಖಾಲಿ ಕೈಯಲಿ ವಾಪಸ್ ಹೋಗಬಾರದೆಂದು ಈ ರೀತಿ ಕಡಿಮೆ ಖರ್ಚಿನಲ್ಲಿ ಆಪರೇಶನ್ ಮಾಡಲು ಸಾಧ್ಯವಾಗುತ್ತಿದೆ ಎಂದು ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.