ಬೆಂಗಳೂರು: 54 ವರ್ಷದ ವ್ಯಕ್ತಿಯೊಬ್ಬರ ಹಣೆಯ ಮೇಲೆ ನಿಂಬೆ ಗಾತ್ರದ “ ಟ್ಯೂಮರ್” ಹೊಂದಿದ್ದ ವ್ಯಕ್ತಿಗೆ ಯಶಸ್ವಿ ಸಂಕೀರ್ಣ ಶಸ್ತ್ರಚಿಕಿತ್ಸೆ ಮೂಲಕ ಫೋರ್ಟಿಸ್ ಆಸ್ಪತ್ರೆ ವೈದ್ಯರ ತಂಡ ತೆಗೆದು ಹಾಕಲಾಗಿದೆ.
ಮುಂಭಾಗದ ಸೈನಸ್‌ನ ಸೋಂಕನ್ನು ಒಳಗೊಂಡಿರುವ ಅಪರೂಪದ ಮತ್ತು ಆಕ್ರಮಣಕಾರಿ ಸ್ಥಿತಿಯಾಗಿರುವ ಪಾಟ್‌ನ ಪಫಿ ಟ್ಯೂಮರ್ ಇದಾಗಿತ್ತು.
ಬನ್ನೇರುಘಟ್ಟ ರಸ್ತೆ ಫೋರ್ಟಿಸ್ ಆಸ್ಪತ್ರೆಯ ಇಎನ್‌ಟಿ, ಕಾಕ್ಲಿಯರ್ ಇಂಪ್ಲಾಂಟ್ ಮತ್ತು ಸ್ಕಲ್ ಬೇಸ್ ಸರ್ಜನ್ ಡಾ. ಸುಶೀನ್ ದತ್ ಮತ್ತು ಓಟೋರಿನೋಲಾರಿಂಗೋಲಜಿ ಸಲಹೆಗಾರ ಡಾ ಅಭಿಷೇಕ್ ಎಸ್. ಅವರ ತಜ್ಞರ ಆರೈಕೆಯಡಿ ಶಸ್ತ್ರಚಿಕಿತ್ಸೆ ನಡೆಸಿ, ಐದು ದಿನಗಳ ನಂತರ ಬಿಡುಗಡೆ ಮಾಡಲಾಯಿತು.
ಡಾ. ಸುಶೀನ್ ಮಾತನಾಡಿ, ಅನಂತಪುರದ ನಿವಾಸಿಯಾದ ಶಾಮ್ (ಹೆಸರು ಬದಲಾಗಿದೆ), ಹಣೆಯ ಮೇಲೆ ದೊಡ್ಡ ಗಾತ್ರದ ಊತ ಕಾಣಿಸಿಕೊಂಡಿದೆ. ಕೇವಲ ಮೂರೂವರೆ ವಾರದಲ್ಲೇ ನಿಂಬೆ ಗಾತ್ರಕ್ಕೂ ಹೆಚ್ಚು ದೊಡ್ಡದಾಗಿ ಬೆಳೆದುಕೊಂಡಿತು. ಆರಂಭದಲ್ಲಿ, ಅವರು ತಮ್ಮ ಹುಬ್ಬುಗಳ ನಡುವೆ ಸಾಮಾನ್ಯ ಊತ ಎಂದು ಭಾವಿಸಿದ್ದರು. ಆದರೆ, ಆ ಊತದಿಂದ ವಿಪರೀತ ನೋವು ಕಾಡಲಾಂಭಿಸಿದೆ. ಸಾಕಷ್ಟು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಈ ಊತ ಕಡಿಮೆಯಾಗಿಲ್ಲ. ಸಮಸ್ಯೆಯ ತೀವ್ರತೆ ಗಮನಿಸಿ ಅವರು ಅಂತಿಮವಾಗಿ ಫೋರ್ಟಿಸ್ ಆಸ್ಪತ್ರೆಗೆ ದಾಖಲಾದರು.
ಇವರ ಪ್ರಕರಣವನ್ನು ಕೂಲಂಕುಷವಾಗಿ ಪರೀಕ್ಷೆ ನಡೆಸಿದ ಬಳಿಕ ಸೋಂಕು ಮೆದುಳಿಗೆ ಹರಡಿರುವ ಬಗ್ಗೆ ನಿರ್ಧರಿಸಲು ಎಂಆರ್‌ಐ (ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್) ಸೇರಿದಂತೆ ಸಂಪೂರ್ಣ ವೈದ್ಯಕೀಯ ಮೌಲ್ಯಮಾಪನವನ್ನು ನಡೆಸಲಾಯಿತು. ಮೆದುಳಿಗಿನ್ನೂ ಹರಡಿರಲಿಲ್ಲ. ಆದರೆ, ಈ ಊತವೂ ಈಗಾಗಲೇ ಸಾಕಷ್ಟು ಸಮಸ್ಯೆಯನ್ನು ನಿರ್ಮಾಣ ಮಾಡಿದ್ದರಿಂದ ಇದನ್ನು ತೆಗೆಯುವುದು ಸವಾಲಿನ ಕೆಲಸವಾಗಿತ್ತು. ನಾವು ಸಂಯೋಜಿತ ವಿಧಾನ (ಮುಕ್ತ ಮತ್ತು ಎಂಡೋಸ್ಕೋಪಿಕ್) ಆರಿಸಿಕೊಂಡೆವು, ಹಣೆಯ ಮೇಲೆ ನಿಖರವಾದ ಛೇದನ ಮಾಡಿ, ಸೋಂಕಿತ ಅಂಗಾಂಶವನ್ನು ಸಂಪೂರ್ಣವಾಗಿ ತೆಗೆದುಹಾಕಿ, ಸೋಂಕು ತೆಳುವಾದ ಪದರವನ್ನು ಮೆದುಳಿನಿಂದ ಬೇರ್ಪಡಿಸಲಾಯಿತು ಎಂದು ಹೇಳಿದರು.
ನಾಳೆ ಲೋಕಸಭೆಯಲ್ಲಿ ‘ವಕ್ಫ್ ತಿದ್ದುಪಡಿ ವಿಧೇಯಕ’ ಮಂಡನೆ | Waqf Amendment Bill 2024
BIG NEWS: ‘RTO ಹುದ್ದೆ’ಗೆ ಆಡಳಿತ ಇಲಾಖೆಯವರ ಲೋಪದೋಷ: ತನಿಖೆಗೆ ‘ಸಾರಿಗೆ ಸಚಿವ ರಾಮಲಿಂಗಾರೆಡ್ಡಿ’ ಆದೇಶ
Good News: ದಕ್ಷಿಣ ಭಾರತದ ಅತಿ ದೊಡ್ಡ ‘ಅಂಗಾಂಗ ಮರು ಪಡೆಯುವ ಕೇಂದ್ರ’ ಬೆಂಗಳೂರಿನಲ್ಲಿ ಸ್ಥಾಪನೆ