ಶಿವಮೊಗ್ಗ: ಕಾಳಜಿವಹಿಸಿ, ಕರ್ತವ್ಯ ನಿಷ್ಠೆ ತೋರಿ, ರೋಗಿಗಳ ಆರೈಕೆ, ಸೇವೆ ಮಾಡಬೇಕಾಗಿದ್ದಂತ ಸರ್ಕಾರಿ ವೈದ್ಯ ಮಾಡಿದ್ದು ಮಾತ್ರ ಮಹಾ ಎಡವಟ್ಟು. ಇದರ ಪರಿಣಾಮ ಮಹಿಳೆ ಅನುಭವಿಸಿದ್ದಂತೂ ಯಮಯಾತನೆ. ವೈದ್ಯರ ಸಣ್ಣ ತಪ್ಪಿಗಾಗಿ ಲಕ್ಷ ಲಕ್ಷ ಖರ್ಚು ಮಾಡಿದ ಬಡ ಮಹಿಳೆಯ ಗೋಳಿ ಕಥೆ ಮುಂದೆ ನೀವೇ ಓದಿ.
ಮೇ.15ರಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಮಾಸೂರು ಗ್ರಾಮದ ಮಹಿಳೆಯೊಬ್ಬರು ಹೆರಿಗಾಗಿ ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಹೆರಿಗೆ ಮಾಡಿಸಿದ್ದು ವೈದ್ಯ ಡಾ.ನಾಗೇಂದ್ರಪ್ಪ. ಆದರೆ ಹೆರಿಗೆ ವೇಳೆಯಲ್ಲಿ ಮಾಡಿರೋ ಎಡವಟ್ಟಿಗೆ ಆ ಮಹಿಳೆ ಅನುಭವಿಸಿದ್ದು ನರಕಯಾತನೆ.
ಹೌದು ಹೆರಿಗೆ ಮಾಡಿಸಿ ರಕ್ತ ಸ್ರಾವ ಆಗುತಿದ್ದರೂ ಲೆಕ್ಕಿಸದೆ ಹೊಲಿಗೆ ಹಾಕಿ ಇದೇ ಡಾ.ನಾಗೇಂದ್ರಪ್ಪ ಕಳಿಸಿದ್ದಾರೆ. ಹೀಗೆ ಹೆರಿಗೆ ನಂತರ ಮನೆಗೆ ತೆರಳಿದಂತ ಹಸುಗೂಸಿನ ಬಾಣಂತಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ತಕ್ಷಣ ಅದೇ ಡಾ.ನಾಗೇಂದ್ರಪ್ಪ ಅವರ ಬಳಿಗೆ ಕುಟುಂಬಸ್ಥರು ಕರೆದುಕೊಂಡು ಹೋಗಿದ್ದಾರೆ.
ಕನಿಷ್ಠ ಸೌಜನ್ಯಕ್ಕೂ ಪರೀಕ್ಷೆ ಮಾಡದ ವೈದ್ಯ ಡಾ.ನಾಗೇಂದ್ರಪ್ಪ, ಇದಕ್ಕೂ ನನಗೂ ಸಂಬಂಧವಿಲ್ಲ. ಹೋಗಿ ಹೋಗಿ ಅಂತ ಉಡಾಫೆ ಉತ್ತರ ನೀಡಿದ್ದಾರೆ. ಬಾಣಂತಿ ತಾಯಿಗೆ ಹೊಟ್ಟೆ ನೋವು ಜಾಸ್ತಿ ಆದ ಕಾರಣ, ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದಾರೆ.
ಪರೀಕ್ಷೆ ಮಾಡಿದಂತ ವೈದ್ಯರಿಗೆ ಡಾ.ನಾಗೇಂದ್ರಪ್ಪ ಎಡವಟ್ಟು ಪತ್ತೆಯಾಗಿದೆ. ಅದೇ ಹೆರಿಗೆ ವೇಳೆಯಲ್ಲಿ ರಕ್ತಸ್ರಾವ ಆದಾಗ, ಅದನ್ನು ಕ್ಲೀನ್ ಮಾಡಿ ಹೊಲಿಗೆ ಹಾಕಬೇಕಿತ್ತು. ಆದರೆ ಹಾಗೆ ಮಾಡದೇ ರಕ್ತಸ್ರಾವ ಒಳಗೆ ಆಗುತ್ತಿದ್ದರೂ, ಆಗಿದ್ದರೂ ಹಾಗೆ ಹೊಲಿಗೆ ಹಾಕಿ ಎಡವಟ್ಟು ಮಾಡಿ ಬಾಣಂತಿ ಕಳುಹಿಸಿದ್ದೇ ಹೊಟ್ಟೆ ನೋವಿಗೆ ಕಾರಣವಾಗಿದೆ.
ಖಾಸಗಿ ಆಸ್ಪತ್ರೆಯಲ್ಲಿ ಡಾ.ನಾಗೇಂದ್ರಪ್ಪ ಮಾಡಿದ ಸಣ್ಣ ಎಡವಟ್ಟಿಗೆ ಲಕ್ಷ ಲಕ್ಷ ಖರ್ಚು ಮಾಡಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಂದಿದ್ದಾರೆ. ವೈದ್ಯ ಡಾ.ನಾಗೇಂದ್ರಪ್ಪ ಮಾಡಿದ ಎಡವಟ್ಟು, ತಾನು ಅನುಭವಿಸಿದ ನೋವು, ಬಡತನದಲ್ಲೂ ಲಕ್ಷ ಲಕ್ಷ ಖರ್ಚು ಮಾಡಿ ಚಿಕಿತ್ಸೆ ಪಡೆದ್ದದ್ದನ್ನು ಬಾಣಂತಿ ಮಹಿಳೆ ಸುದ್ದಿ ಸಾಗರಕ್ಕೆ ಕರೆ ಮಾಡಿ ತಿಳಿಸಿರುತ್ತಾರೆ. ತಮಗೆ ಡಾ.ನಾಗೇಂದ್ರಪ್ಪ ಅವರಿಂದ ಆದ ತೊಂದರೆಗೆ ನ್ಯಾಯ ಕೊಡಿಸುವಂತೆ ಕೋರಿದರು. ತಪ್ಪಿತಸ್ಥ ವೈದ್ಯನಿಗೆ ತಕ್ಕ ಶಿಕ್ಷೆ ಕೊಡಿಸುವಂತೆ ಅಲವತ್ತು ಕೊಂಡರು.
ತಕ್ಷಣವೇ ನೊಂದ ಮಹಿಳೆಗೆ ನ್ಯಾಯ ಕೊಡಿಸಬೇಕು ಅಂತ ಡಾ.ನಾಗೇಂದ್ರಪ್ಪಗೆ ಕರೆ ಮಾಡಿ ಕೇಳಿದ್ರೇ, ನಾನು ಮಾಡೇ ಇಲ್ಲ. ನನ್ನ ತಪ್ಪೇ ಅಲ್ಲ ಅಂತ ಉಡಾಫೆ ಉತ್ತರ ನೀಡಿದ್ದಾರೆ. ಹಾಗಾದರೆ ಇದಕ್ಕೆ ಹೊಣೆ ಯಾರು.? ಟಿಹೆಚ್ಓನಾ.? ಡಿಹೆಚ್ಓನಾ.? ಇಲ್ಲ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಅವರ.? ಅಥವಾ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರಾವ್ ಅವರ.?
ಹೆರಿಗೆ ಮಾಡಿಸಿ, ಹೊಟ್ಟೆಗೆ ಹೊಲಿಗೆ ಹಾಕಿದ ಡಾ.ನಾಗೇಂದ್ರಪ್ಪ ಅವರೇ ನೀವು ಅಲ್ಲದೇ ಈ ಎಡವಟ್ಟಿಗೆ ಬೇರಾರು ಅಲ್ಲ. ಹೊಲಿಗೆ ಹಾಕೋ ಸಂದರ್ಭದಲ್ಲಿ ಮುನ್ನೆಚ್ಚರಿಕೆ ವಹಿಸಿದ್ರೆ ಒಬ್ಬ ಬಡ ಮಹಿಳೆ ಇಷ್ಟು ಕಷ್ಟ ಪಡೋ ಪ್ರಮೇಯವೇ ಬರುತ್ತಿರಲಿಲ್ಲ. ನೀವು ಮಾಡಿದ ಎಡವಟ್ಟಿಗೆ ಬಾಣಂತಿ ತಾಯಿ ನರಕಯಾತನೆ ಅನುಭವಿಸುವಂತೆ ಆಯ್ತು.
ಅಲ್ಲ ಇದಕ್ಕೂ ನನಗೂ ಸಂಬಂಧ ಇಲ್ಲ ಅಂತೀರಲ್ಲ ನಿಮಗೆ ಕಿಂಚಿತ್ತೂ ನಿಮ್ಮ ತಪ್ಪಿನ ಬಗ್ಗೆ ಅರಿವಿಲ್ವ.? ಹೀಗೆನಾ ನೀವು ಹೆರಿಗೆ ಮಾಡಿಸೋ ಪರಿ ಅಂತ ಸುದ್ದಿ ಸಾಗರದ ಮೂಲಕ ಸಾಗರ ಜನತೆ ಆಕ್ರೋಶ ಹೊರ ಹಾಕಿದ್ದಾರೆ.
ನಾಗೇಂದ್ರಪ್ಪ ವೈದ್ಯರೆ ನೀವು ಸಾಗರದ ಹೆರಿಗೆ ಆಸ್ಪತ್ರೆಯಲ್ಲಿ ನೀವು ಒಳ್ಳೆಯ ಕೆಲಸ ಮಾಡಿದ್ದೀರಿ. ಆದರೆ ಒಂದು ಜೀವ ಹೊದರೇ ಅದಲ್ಲವೂ ವ್ಯರ್ಥ. ಸೋ ಇನ್ಮುಂದಾದರೂ ಸರಿಯಾಗಿ ಕರ್ತವ್ಯ ನಿರ್ವಹಿಸಿ, ನಿಮ್ಮ ಕೆಲಸ ಮಾಡಿ ಎನ್ನುವುದು ಸಾಗರ ಜನತೆಯ ಪರವಾಗಿ ನಮ್ಮ ಕಳಕಳಿ ಮನವಿಯಾಗಿದೆ.
ವರದಿ: ಉಮೇಶ್ ಮೊಗವೀರ, ಸಾಗರ
ʻಪ್ರಧಾನ ಮಂತ್ರಿ’ ಸ್ಥಾನಕ್ಕೆ ‘ನರೇಂದ್ರ ಮೋದಿ’ ರಾಜೀನಾಮೆ : ಈಗ ದೇಶದ ಉಸ್ತುವಾರಿ ಪ್ರಧಾನಿ ಯಾರು?