ಕೊರ್ಬಾ (ಛತ್ತೀಸ್ಗಢ): ಛತ್ತೀಸ್ಗಢದ ಕೊರ್ಬಾ ಜಿಲ್ಲೆಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮದ್ಯದ ಅಮಲಿನಲ್ಲಿದ್ದ ವೈದ್ಯನೊಬ್ಬ ಮಹಿಳಾ ರೋಗಿಯೊಬ್ಬರಿಗೆ ಥಳಿಸಿದ್ದಾರೆ.
ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದೀಗ ಆಸ್ಪತ್ರೆ ಆಡಳಿತ ಮಂಡಳಿ ವೈದ್ಯರ ವಿರುದ್ಧ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ತಡರಾತ್ರಿ ತಾಯಿ ಸುಖಮತಿ ಅವರ ಆರೋಗ್ಯ ಹದಗೆಟ್ಟಿದ್ದರಿಂದ ಆಕೆ ಮಗ ಆಟೋ ರಿಕ್ಷಾದಲ್ಲೇ ಆಸ್ಪತ್ರೆಗೆ ಕರೆತಂದಿದ್ದಾನೆ. ಮಹಿಳೆಯನ್ನು ಪರೀಕ್ಷಿಸಲು ಬಂದ ಆಕೆಯ ಕೆನ್ನೆಗೆ ಬಾರಿಸುವುದು, ತಲೆ ಕೂದಲು ಹಿಡಿದು ಎಳೆದಾಡಿರುವುದು ಕಂಡು ಬಂದಿದೆ. ವೈದ್ಯ ಕಂಠಪೂರ್ತಿ ಕುಡಿದು ಮಹಿಳೆಗೆ ಥಳಿಸಿರುವುದು ತಿಳಿದುಬಂದಿದೆ.
#WATCH छत्तीसगढ़: कोरबा में कथित तौर पर नशे की हालत में एक डॉक्टर द्वारा मरीज को पीटने का वीडियो वायरल हुआ। (09.11) pic.twitter.com/WeNpAU0naL
— ANI_HindiNews (@AHindinews) November 10, 2022
ಈ ವಿಚಾರ ತಮ್ಮ ಗಮನಕ್ಕೆ ಬಂದಿದ್ದು, ವೈದ್ಯರ ವಿರುದ್ಧ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ವೈದ್ಯಕೀಯ ಕಾಲೇಜು ಆಸ್ಪತ್ರೆಯ ಡೀನ್ ಡಾ.ಅವಿನಾಶ್ ಮೆಶ್ರಾಮ್ ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದ್ದು, ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
BREAKING NEWS: ಗುಜರಾತ್ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ,
BREAKING NEWS: ಗುಜರಾತ್ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ,