ಕೆಎನ್ ಎನ್ ನ್ಯೂಸ್ ಡೆಸ್ಕ್ : ಇಂದಿನ ದಿನಗಳಲ್ಲಿ ಜೀರ್ಣಶಕ್ತಿ ಸಮಸ್ಯೆ ಒಂದಲ್ಲ ಒಂದು ಬಾರಿ ಪ್ರತಿಯೊಬ್ಬರಿಗೂ ಕಾಡುತ್ತದೆ. ಅದರಲ್ಲೂ ನೈಟ್ ಶಿಪ್ಟ್ನಲ್ಲಿ ಕೆಲಸ ಮಾಡುವವರಿಗಂತೂ ಅಜೀರ್ಣ, ಗ್ಯಾಸ್ಟ್ರಿಕ್, ಆಸಿಡಿಟಿ, ಬೊಜ್ಜು ಈ ರೀತಿಯ ಸಮಸ್ಯೆ ಸಾಮಾನ್ಯವಾಗಿ ಕಾಡುತ್ತಿರುತ್ತದೆ.
ಅದಕ್ಕೆ ಮುಖ್ಯವಾಗಿ ಆಹಾರ ಸೇವನೆಯೇ ಕಾರಣವಾಗುತ್ತದೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರ ಆಹಾರ ಸರಿಯಾಗಿದ್ದರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಾಗಾದರೆ ನೈಟ್ ಶಿಪ್ಟ್ನಲ್ಲಿರುವವರು ಯಾವ ರೀತಿ ಆಹಾರ ಪದ್ಧತಿಯನ್ನು ಕಾಪಾಡಿಕೊಳ್ಳಬಹುದು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
ಕೆಫಿನ್ ಆಹಾರಗಳಿಂದ ದೂರವಿರಿ
ಕೆಲವರಿಗೆ ಕೆಲಸ ಮಾಡಲು ಎನರ್ಜಿ ಬರುವುದೇ ಕಾಫಿ, ಟೀಯಂತಹ ಕೆಫಿನ್ಯುಕ್ತ ಪದಾರ್ಥವನ್ನು ಸೇವನೆ ಮಾಡಿದಾಗಲೆ. ದಿನಕ್ಕೆ ಒಂದು ಅಥವಾ ಎರಡು ಬಾರಿ ಕುಡಿದರೆ ತೊಂದರೆಯಿಲ್ಲ. ಆದರೆ ರಾತ್ರಿ ವೇಳೆ ಹೆಚ್ಚು ಸೇವನೆ ಮಾಡಿದರೆ ಆರೋಗ್ಯಕ್ಕೆ ಕುತ್ತು ಬರುವುದು ಪಕ್ಕಾ.
ತಲೆ ನೋವು, ನಿರ್ಜಲೀಕರಣ, ಹೊಟ್ಟೆಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಕೆಫಿನ್ ಸೇವನೆಯನ್ನು ಕಡಿಮೆ ಮಾಡುವುದು ಒಳಿತು.
ಸರಿಯಾದ ಸಮಯಕ್ಕೆ ಆಹಾರ ಸೇವನೆ ಇರಲಿ
ರಾತ್ರಿಯಿಡೀ ನಿದ್ದೆಗೆಡುವ ಕಾರಣ ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡುವುದು ಮುಖ್ಯವಾಗುತ್ತದೆ. ಏಕೆಂದರೆ ರಾತ್ರಿಯ ವೇಳೆ ಚಯಾಪಚತ ಕ್ರಿಯೆ ನಿಧಾನವಾಗಿರುವುದರಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ.
ದೈಹಿಕ ಚಟುವಟಿಕೆ
ವ್ಯಾಯಾಮ ದೇಹಕ್ಕೆ ಅತೀ ಅಗತ್ಯವಾದುದು. ನೈಟ್ ಶಿಪ್ಟ್ ಮಾಡುವಾಗಲೂ ಅಷ್ಟೇ ಇಡೀ ರಾತ್ರಿ ಕುಳಿತುಕೊಳ್ಳುವ ಕಾರಣ ದೇಹದಲ್ಲಿ ಬೊಜ್ಜು ಬೆಳೆಯಬಹುದು. ಹೀಗಾಗಿ ಹಗಲಿನಲ್ಲಿ ಕನಿಷ್ಠ ಒಂದು ಗಂಟೆಯಾದರೂ ವ್ಯಾಯಾಮ ಮಾಡಿ. ಇದರಿಂದ ದೇಹವನ್ನೂ ಆರೋಗ್ಯವಾಗಿ ಇರಿಸಿಕೊಳ್ಳಬಹುದು