ಕೆಎನ್ ಎನ್ ನ್ಯೂಸ್ ಡೆಸ್ಕ್ : ಇಂದಿನ ದಿನದಲ್ಲಿ ಪ್ರತಿಯೊಬ್ಬರು ಇರುವ ಮನೆಯನ್ನ ಸ್ಮಾರ್ಟ್ ಆಗಿ ಇಟ್ಟುಕೊಳ್ಳಲು ನೋಡ್ತಾರೆ.. ಆದರೆ, ನಾವು ಖರೀದಿಸುವ ಫ್ಲ್ಯಾಟ್ ಅಥವಾ ಅಪಾರ್ಟ್ಮೆಂಟ್ ಅಥವಾ ನಾವೇ ನಿರ್ಮಿಸಿದ ಮನೆಯನ್ನು ಸ್ಮಾರ್ಟ್ ಹೋಂ ಮಾಡುವುದು ಕಷ್ಟವೇನಲ್ಲ.
Winter Hair Care :ಚಳಿಗಾಲದಲ್ಲಿ ಕೂದಲು ಉದರಲು ಕಾರಣ ಹಾಗೂ ಪರಿಹಾರಗಳೇನು? ಇಲ್ಲಿವೆ ಸಿಂಪಲ್ ಟಿಪ್ಸ್
ಸ್ಮಾರ್ಟ್ ಹೋಂ ಎಂದರೆ ದುಬಾರಿ ಖರ್ಚಿನ ಬಾಬತ್ತು ಎಂದು ದೂರ ಸರಿಯಬೇಡಿ. ಸ್ಮಾರ್ಟ್ ಹೋಂ ಎನ್ನುವುದು ಕೇಳಲಷ್ಟೇ ದುಬಾರಿ. ಕೆಲವು ಸಾವಿರ ರೂಪಾಯಿಗಳಿಗೆ ದೊರಕುವ ಕೆಲವೊಂದು ಸ್ಮಾರ್ಟ್ ಸಾಧನಗಳನ್ನು ಅಳವಡಿಸಿಯೂ ನಿಮ್ಮ ಮನೆಗೆ ಸ್ಮಾರ್ಟ್ ಹೋಂ ಟಚ್ ನೀಡಬಹುದು. ಅಲೆಕ್ಸಾ, ಗೂಗಲ್ ಹೋಂ, ಸ್ಮಾರ್ಟ್ ಬಲ್ಬ್, ಸ್ಮಾರ್ಟ್ ಕ್ಯಾಮೆರಾ, ಸೆನ್ಸಾರ್ ಸಾಧನಗಳ ನೆರವಿನಿಂದ ನಿಮ್ಮ ಮನೆಯನ್ನು ಸ್ಮಾರ್ಟ್ ಆಗಿಸಬಹುದು.
ಮನೆಗೆ ಸ್ಮಾರ್ಟ್ ಸ್ಪೀಕರ್ ಅಳವಡಿಸಿ
ಮನೆಯ ಮುಖ್ಯ ಕೊಠಡಿಯಲ್ಲಿ ಒಂದು ಸ್ಮಾರ್ಟ್ ಸ್ಪೀಕರ್ ಇರಲಿ. ಅಲೆಕ್ಸಾ ಪ್ಲೇ ಮ್ಯೂಸಿಕ್, ಹೇ ಗೂಗಲ್ ವೆದರ್ ಫಾರ್ಕಾಸ್ಟ್ ನೀಡು ಎಂದೆಲ್ಲ ಆ ಸ್ಪೀಕರಲ್ಲಿ ಮಾತನಾಡಬಹುದು. ವಿವಿಧ ಕೊಠಡಿಗಳಲ್ಲಿ ಹಲವು ಸ್ಮಾರ್ಟ್ ಸ್ಪೀಕರ್ಗಳನ್ನಿಟ್ಟು ವಾಕಿಟಾಕಿ ರೀತಿಯೂ ಬಳಸಬಹುದು. ಅಡುಗೆ ರೆಡಿ ಎಂದು ಅಡುಗೆ ಮನೆಯಲ್ಲಿಯೇ ಅಮ್ಮ ಹೇಳಿದರೆ ಆ ಧ್ವನಿ ಸ್ಟಡಿ ರೂಂನಲ್ಲಿರುವ ಸ್ಪೀಕರ್ ಮೂಲಕ ಮಕ್ಕಳಿಗೂ ಕೇಳಿಸಬಹುದು. ಗೂಗಲ್ ಹೋಂ ಮಿನಿ, ಅಲೆಕ್ಸಾ ಸ್ಪೀಕರ್ಗಳು ನಿಮಗೆ ಸೂಕ್ತವಾಗಬಹುದು.
Winter Hair Care :ಚಳಿಗಾಲದಲ್ಲಿ ಕೂದಲು ಉದರಲು ಕಾರಣ ಹಾಗೂ ಪರಿಹಾರಗಳೇನು? ಇಲ್ಲಿವೆ ಸಿಂಪಲ್ ಟಿಪ್ಸ್
ಸ್ಮಾರ್ಟ್ ಬಲ್ಬ್
ಈಗ ಸ್ಮಾರ್ಟ್ ಬಲ್ಬ್ಗಳು ಬಂದಿದ್ದು, ವಿವಿಧ ಬಣ್ಣ, ಗಾತ್ರಗಳಲ್ಲಿ ಲಭ್ಯವಿದೆ. ನಿಮ್ಮ ಸ್ಮಾರ್ಟ್ ಸ್ಪೀಕರ್ ಅಥವಾ ಸ್ಮಾರ್ಟ್ ಸ್ಪೀಕರ್ಗಳ ಮೂಲಕ ಇಂತಹ ಸ್ಮಾರ್ಟ್ ಬಲ್ಬ್ಗಳನ್ನು ನಿರ್ವಹಿಸಬಹುದಾಗಿದೆ. ಈಗ ವರ್ಕ್ ಫ್ರಂ ಹೋಂನಿಂದಾಗಿ ಎಲ್ಲರ ಮನೆಯಲ್ಲಿಯೂ ವೈಫೈ ಇರುವುದು ಸಾಮಾನ್ಯ. ವೈಫೈ ನೆರವಿನಿಂದ ಸ್ಮಾರ್ಟ್ಫೋನ್ ಮೂಲಕ ಇಂತಹ ಸ್ಮಾರ್ಟ್ ಬಲ್ಬ್ಗಳನ್ನು ಸುಲಭವಾಗಿ ನಿರ್ವಹಿಸಬಹುದಾಗಿದೆ.
ಸ್ಮಾರ್ಟ್ ಥರ್ಮೊಸ್ಟಾಟ್
ಸ್ಮಾರ್ಟ್ ಥರ್ಮೊಸ್ಟಾಟ್ ಸಾಧನಗಳ ಮೂಲಕ ಮನೆಯೊಳಗೆ ಏಸಿ ಹೊಂದಾಣಿಕೆ ಮಾಡಿಕೊಳ್ಳಬಹುದು. ಇಂತಹ ಸಾಧನಗಳಲ್ಲಿ ಅಲೆಕ್ಸಾ ಅಥವಾ ಇತರೆ ಸ್ಮಾರ್ಟ್ ಸ್ಪೀಕರ್ಗಳು ಇದ್ದು, ಟಚ್ ಸ್ಕ್ರೀನ್ ಅಥವಾ ಧ್ವನಿ ಸಂದೇಶದ ಮೂಲಕ ಏರ್ ಕಂಡಿಷನ್ ಹೊಂದಾಣಿಕೆ ಮಾಡಿಕೊಳ್ಳಬಹುದು.