ಕೆಎನ್ಎನ್ ಸಿನಿಮಾ ಡೆಸ್ಕ್: ಮಲೆನಾಡೆಂದರೇ ಅದೆಷ್ಟೋ ಜನರಿಗೆ ಎಲ್ಲಿಲ್ಲದ ಪ್ರೀತಿ. ಮಳೆಗಾಲದ ನಡುವೆ ಹಸಿರ ದೃಶ್ಯವೈಭವ ಕಣ್ ತುಂಬಿಕೊಳ್ಳೋದಕ್ಕಂತೂ ತುಂಬಾನೇ ಇಷ್ಟ ಪಡೋರೇ ಹೆಚ್ಚು. ಹೆಜ್ಜೆ ಹೆಜ್ಜೆಗೂ ಹಸಿರ ಧರೆಯಲ್ಲಿ ಕಣ್ ಮನವನ್ನು ಸೆಳೆಯುವ ಸೊಬಗಂತೂ ಎಲ್ಲರನ್ನೂ ಹಿಡಿದಿಟ್ಟುಕೊಂಡು ಬಿಡುತ್ತದೆ. ಹಾಗಾದ್ರೇ ನೀವು ಮಲೆನಾಡಿನ ದೃಶ್ಯ ವೈಭವ ಕಣ್ ತುಂಬಿಕೊಳ್ಳಬೇಕು ಅಂತ ಅಂದ್ರೇ, ಈ ಕೆಳಗಿನ ವೀಡಿಯೋ ತಪ್ಪದೇ ಮೊದಲು ನೋಡಿ..
ನೋಡಿದ್ರಲ್ವ? ಮಲೆನಾಡಿನ ದೃಶ್ಯ ವೈಭವ ನಿಮ್ಮನ್ನು ಸೆಳೆದಿರಬೇಕು ಅಲ್ವ? ಈ ಮಲ್ನಾಡ್ ಯಾನ ( Malnad Yana ) ಎನ್ನುವಂತದ್ದು ಸಂತೋಷ್ ಸದ್ಗುರು ( Santhosh Sadguru ) ಎಂಬುವರ ಮೊದಲ ವೀಡಿಯೋ ಆಲ್ಪಂ ಸಾಂಗ್. ಬರೋಬ್ಬರಿ 2500 ಮಿ.ಮೀ ಮಳೆಯ ನಡುವೆಯೂ ಮಲೆನಾಡಿನ ರಮಣೀಯ ಪ್ರಕೃತಿಯ ಸೊಬಗನ್ನು ನೋಡುಗರಿಗೆ ಕಣ್ ಮನ ತಣಿಯುವಂತೆ ಸೆರೆ ಹಿಡಿದು ಕೊಟ್ಟಿದ್ದಾರೆ.
ಮಲ್ನಾಡ್ ಯಾನ ವೀಡಿಯೋ ಆಲ್ಬಂ ಸಾಂಗ್ ( MALNAD YANA Official Video Song ) ಅನ್ನು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ, ಸಾಗರದ ವಿವಿಧ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ. ಮಳೆಯ ನಡುವೆಯೂ ಏಕಾಂಗಿಯಾಗಿ ಬೈಕ್ ಸವಾರಿಯಲ್ಲಿ ಸುತ್ತಾಡಿರುವಂತ ಸಂತೋಷ್ ಸದ್ಗುರು, ಪ್ರಕೃತಿಯ ರಮಣೀಯ ದೃಶ್ಯ ವೈಭವವನ್ನು, ಮಲೆನಾಡಿನ ಸೊಬಗಿನ ಸಿರಿಯನ್ನು ನೋಡುಗರ ಮುಂದಿಟ್ಟಿದ್ದಾರೆ.
ಅಂದಹಾಗೇ ಮಲ್ನಾಡ್ ಯಾನ ವೀಡಿಯೋ ಆಲ್ಬಂಗೆ ( Malnad Yana Alubum Video Song ) ವಿಎಂ ಮಂಜುನಾಥ್ ಅವರ ಸಾಹಿತ್ಯವಿದೆ. ಖ್ಯಾತ ಗಾಯಕ ಮಿತ್ರಾ ಹೆಗಡೆ ಧ್ವನಿಯಲ್ಲಿ ಕಿವಿಗೆ ಇಂಪು ನೀಡಿದೆ. ರಘೋತ್ತಮ ಎನ್ ಎಸ್ ಸಂಗೀತ ಮೋಡಿಯಿದೆ. ಸುಮಂತ್ ಶರ್ಮಾ, ಶಂಕರ್ ತಾಳಗುಪ್ಪ ಅವರು ನೋಡುಗರನ್ನು ಹಿಡಿದಿಡುವಂತೆ ಕ್ಯಾಮರಾ ಕಣ್ಣಲ್ಲಿ ಮಲೆನಾಡಿನ ತೆರೆಡಿಟ್ಟಿದ್ದಾರೆ. ಪಿ.ರಾಜ್ ಸಂಕಲ ಈ ಹಾಡಿಗಿದೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ಸಿಂಧೂ ಒಪ್ಪಂದದಡಿ ಭಾರತ ನೀರು ನಿರಾಕರಿಸಿದರೆ ಪಾಕಿಸ್ತಾನ ಯುದ್ಧಕ್ಕೆ ಇಳಿಯುತ್ತದೆ: ಪಾಕ್ ಮಾಜಿ ಸಚಿವ ಬೆದರಿಕೆ
ಬೆಂಗಳೂರಲ್ಲಿ ಅರಣ್ಯ ಇಲಾಖೆಯಿಂದ ಭರ್ಜರಿ ಕಾರ್ಯಾಚರಣೆ: 120 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವು