ಭಾರತೀಯ ಮನೆಗಳಲ್ಲಿ ಚಪಾತಿ ಪ್ರಮುಖ ಆಹಾರವಾಗಿದೆ. ಆದರೆ ಅನೇಕರಿಗೆ ಚಪಾತಿ ಮೃದುವಾಗಿ ಬರುವುದಿಲ್ಲ ಎಂಬ ದೂರು ಇರುತ್ತದೆ. ಚಪಾತಿ ಮಾಡಿದ ಕೆಲವೇ ಸಮಯದ ನಂತರ ಅದು ರಬ್ಬರ್ನಂತೆ ಗಟ್ಟಿಯಾಗುವುದು ಅಥವಾ ಹರಿದು ಹೋಗುವುದು ಸಾಮಾನ್ಯ ಸಮಸ್ಯೆ. ಆದರೆ, ನೀವು ಹಿಟ್ಟು ಕಲಸುವಾಗ ಕೇವಲ ಒಂದು ಚಮಚ ತುಪ್ಪವನ್ನು ಬಳಸಿದರೆ, ಹೋಟೆಲ್ ಶೈಲಿಯ ಅತ್ಯಂತ ಮೃದುವಾದ ಚಪಾತಿಗಳನ್ನು ಮನೆಯಲ್ಲೇ ತಯಾರಿಸಬಹುದು.
ಚಪಾತಿ ಮೃದುವಾಗಿ ಬರಲು ಮತ್ತು ದೀರ್ಘಕಾಲದವರೆಗೆ ಫ್ರೆಶ್ ಆಗಿರಲು ಇಲ್ಲಿವೆ ಕೆಲವು ಉಪಯುಕ್ತ ಸಲಹೆಗಳು:
1. ಹಿಟ್ಟು ಕಲಸುವಾಗ ತುಪ್ಪದ ಬಳಕೆ: ಗೋಧಿ ಹಿಟ್ಟನ್ನು ಕಲಸುವ ಮೊದಲು ಅದಕ್ಕೆ ಒಂದು ಅಥವಾ ಎರಡು ಚಮಚ ಶುದ್ಧ ತುಪ್ಪವನ್ನು ಸೇರಿಸಿ. ಇದು ಹಿಟ್ಟಿಗೆ ಉತ್ತಮ ಪಕದ ನೀಡುತ್ತದೆ ಮತ್ತು ಲಟ್ಟಿಸುವಾಗ ಚಪಾತಿ ಸುಲಭವಾಗಿ ವಿಸ್ತರಿಸಲು ಸಹಾಯ ಮಾಡುತ್ತದೆ. ತುಪ್ಪವು ಚಪಾತಿಗಳಿಗೆ ವಿಶಿಷ್ಟವಾದ ರುಚಿ ಮತ್ತು ಸುಗಂಧವನ್ನು ನೀಡುತ್ತದೆ.
2. ಉಗುರು ಬೆಚ್ಚಗಿನ ನೀರು ಅಥವಾ ಹಾಲು: ಹಿಟ್ಟು ಕಲಸಲು ತಣ್ಣೀರಿನ ಬದಲು ಉಗುರು ಬೆಚ್ಚಗಿನ ನೀರನ್ನು ಬಳಸಿ. ಇನ್ನು ಹೆಚ್ಚಿನ ಮೃದುತ್ವ ಬೇಕಾದಲ್ಲಿ ನೀರಿಗೆ ಸ್ವಲ್ಪ ಹಾಲನ್ನು ಬೆರೆಸಬಹುದು. ಇದು ಹಿಟ್ಟನ್ನು ಹೆಚ್ಚು ನಯವಾಗಿಸುತ್ತದೆ.
3. ಹಿಟ್ಟನ್ನು ನಾದಲು ಸಮಯ ಕೊಡಿ: ಹಿಟ್ಟನ್ನು ಕಲಸಿದ ತಕ್ಷಣ ಚಪಾತಿ ಮಾಡಬೇಡಿ. ಹಿಟ್ಟನ್ನು ಚೆನ್ನಾಗಿ ನಾದಿದ ನಂತರ ಕನಿಷ್ಠ 15 ರಿಂದ 20 ನಿಮಿಷಗಳ ಕಾಲ ಒದ್ದೆ ಬಟ್ಟೆ ಅಥವಾ ತಟ್ಟೆ ಮುಚ್ಚಿ ನೆನೆಯಲು ಬಿಡಿ. ಇದರಿಂದ ಹಿಟ್ಟಿನಲ್ಲಿರುವ ಗ್ಲುಟನ್ ಅಂಶವು ಚಪಾತಿ ಮೃದುವಾಗಲು ಸಹಾಯ ಮಾಡುತ್ತದೆ.
4. ಸರಿಯಾದ ತಾಪಮಾನದಲ್ಲಿ ಬೇಯಿಸಿ: ಚಪಾತಿ ಬೇಯಿಸುವಾಗ ಹಂಚು (ತವಾ) ಸರಿಯಾಗಿ ಕಾದಿರಬೇಕು. ಕಡಿಮೆ ಉರಿಯಲ್ಲಿ ಚಪಾತಿ ಬೇಯಿಸಿದರೆ ಅದು ಗಟ್ಟಿಯಾಗುತ್ತದೆ. ಮಧ್ಯಮ ಅಥವಾ ಹೆಚ್ಚಿನ ಉರಿಯಲ್ಲಿ ಎರಡೂ ಬದಿಗಳನ್ನು ಸರಿಯಾಗಿ ಬೇಯಿಸಿ ನಂತರ ಸ್ವಲ್ಪ ತುಪ್ಪ ಸವರಿದರೆ ಚಪಾತಿ ಪದರ ಪದರವಾಗಿ ಮೃದುವಾಗಿ ಬರುತ್ತದೆ.
5. ಶೇಖರಣೆ ಮಾಡುವ ವಿಧಾನ: ಬೇಯಿಸಿದ ಚಪಾತಿಗಳನ್ನು ಬಿಸಿ ಇರುವಾಗಲೇ ಒಂದು ಕ್ಯಾಸರೋಲ್ ಅಥವಾ ಬಟ್ಟೆಯಲ್ಲಿ ಸುತ್ತಿ ಇಡಿ. ಇದರಿಂದ ಚಪಾತಿಯಲ್ಲಿನ ತೇವಾಂಶ ಉಳಿದು ದೀರ್ಘಕಾಲ ಮೃದುವಾಗಿರುತ್ತದೆ.
ಈ ಸರಳ ಟಿಪ್ಸ್ ಅನುಸರಿಸುವ ಮೂಲಕ ನೀವು ಪ್ರತಿದಿನವೂ ಹೂವಿನಂತಹ ಮೃದುವಾದ ಚಪಾತಿಗಳನ್ನು ಸವಿಯಬಹುದು.
ಶ್ರೇಯಸ್ ಮಂಜು ಜನ್ಮದಿನಕ್ಕೆ ‘ದಿಲ್ದಾರ್’ ಚಿತ್ರತಂಡದಿಂದ ಭರ್ಜರಿ ಗಿಫ್ಟ್: ಆಕ್ಷನ್ ಪ್ಯಾಕ್ಡ್ ಟೀಸರ್ ಔಟ್!








