Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : 2025-26ನೇ ಸಾಲಿಗೆ ‘ಭವಿಷ್ಯ ನಿಧಿ(PF) ಬಡ್ಡಿದರ’ ಪ್ರಕಟ.!PF interest rate

02/03/2026 3:30 PM

ಮದ್ದೂರು ನಗರಸಭೆ ವ್ಯಾಪ್ತಿಗೆ ಗ್ರಾಮ ಪಂಚಾಯಿತಿಗಳ ಸೇರ್ಪಡೆ ನಿರ್ಧಾರ ಕೈಬಿಡಿ: ಸಿಎಂಗೆ ಪತ್ರ ಬರೆದು HDK ಆಗ್ರಹ

02/03/2026 3:29 PM

BREAKING : ಇರಾನ್’ನಲ್ಲಿ 3 ದಿನದಲ್ಲಿ ಕನಿಷ್ಠ 555 ಮಂದಿ ಯುದ್ಧಕ್ಕೆ ಬಲಿ ; ಇರಾನ್ ರೆಡ್ ಕ್ರೆಸೆಂಟ್ ಮಾಹಿತಿ!

02/03/2026 3:13 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನೀವು ‘ಸ್ವಚ್ಛ ಬೆಂಗಳೂರು’ ಬಯಸುತ್ತೀರಾ? ಹಾಗಿದ್ರೆ ‘ಕ್ಲೀನ್ ಸಿಟಿ’ಗಾಗಿ ಈ ಸಂಖ್ಯೆಗೆ ‘WhatsApp’ ಮಾಡಿ
KARNATAKA

ನೀವು ‘ಸ್ವಚ್ಛ ಬೆಂಗಳೂರು’ ಬಯಸುತ್ತೀರಾ? ಹಾಗಿದ್ರೆ ‘ಕ್ಲೀನ್ ಸಿಟಿ’ಗಾಗಿ ಈ ಸಂಖ್ಯೆಗೆ ‘WhatsApp’ ಮಾಡಿ

By kannadanewsnow0912/06/2025 6:56 PM

ಬೆಂಗಳೂರು: ಬೆಂಗಳೂರು ನಗರ ಸ್ವಚ್ಛ, ಸುಂದರವಾಗಿ ಕಾಣುವ ನಿಟ್ಟಿನಲ್ಲಿ ಪೌರಕಾರ್ಮಿಕರು ಸದಾ ಶ್ರಮವಹಿಸಿ ಕಾರ್ಯನಿರ್ವಹಿಸುತ್ತಾರೆ. ಅದರ ಜೊತೆಗೆ ರಸ್ತೆ ಬದಿ ಬಿಸಾಡುವಂತಹ ಕಸವನ್ನು ತೆರವುಗೊಳಿಸುವ ಸಲುವಾಗಿ ಸ್ವಚ್ಛತಾ ಅಭಿಯಾನಗಳನ್ನು ಕೂಡಾ ಆಯೋಜಿಸಲಾಗುತ್ತದೆ.

ನಗರದಾದ್ಯಂತ ಸ್ವಚ್ಛತಾ ಅಭಿಯಾನಗಳನ್ನು ಆಯೋಜಿಸುವ ಮೂಲಕ ಸಾರ್ವಜನಿಕರು ರಸ್ತೆ ಬದಿ, ಖಾಲಿ ಜಾಗಗಳಲ್ಲಿ ತ್ಯಾಜ್ಯ ಬಿಸಾಡುವಂತಹ ಮನಸ್ಥಿತಿಯಿಂದ ಸ್ವಚ್ಛ ನಗರವನ್ನಾಗಿ ಬದಲಾಯಿಸುವೆಡೆಗೆ ಸಹಕಾರಿಯಾಗಿಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಆಟೋ ಟಿಪ್ಪರ್ ಗಳ ಮೂಲಕ ಪ್ರತಿನಿತ್ಯ ಮನೆ-ಮನೆ ಭೇಟಿ ನೀಡಿ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ಆದರೂ ಕೂಡಾ ನಾಗರಿಕರು ಆಟೋ ಟಿಪ್ಪರ್ ಗಳಿಗೆ ತ್ಯಾಜ್ಯವನ್ನು ನೀಡದೇ ರಾತ್ರಿ ವೇಳೆ ಅಥವಾ ಕೆಲಸಕ್ಕೆ ಹೋಗುವ ಸಮಯದಲ್ಲಿ ರಸ್ತೆ ಬದಿ, ಪಾದಚಾರಿ ಮಾರ್ಗ, ಖಾಲಿ ಸ್ಥಳ ಹಾಗೂ ರಾಜಕಾಲುವೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಡಿ ಹೋಗುತ್ತಾರೆ. ಇದರಿಂದ ನಗರದ ಸೌಂದರ್ಯಕ್ಕೆ ಧಕ್ಕೆಯುಂಟಾಗುತ್ತದೆ.

ಮುಂದುವರಿದು, ತ್ಯಾಜ್ಯ ಬಿಸಾಡುವುದರ ಜೊತೆಗೆ ಕಟ್ಟಡಗಳ ಭಗ್ನಾವಶೇಷಗಳನ್ನು ಕೂಡಾ ರಸ್ತೆ ಬದಿ, ಖಾಲಿ ಜಾಗದಲ್ಲಿ ಸುರಿದು ಹೋಗುತ್ತಾರೆ. ಅದಲ್ಲದೆ ಅನುಪಯುಕ್ತ ವಸ್ತುಗಳನ್ನು ಕೂಡ ಎಲ್ಲೆಂದರಲ್ಲಿ ಬಿಸಾಡಿ ಹೋಗುತ್ತಾರೆ. ಆದ್ದರಿಂದ ಪಾಲಿಕೆಯ 8 ವಲಯಗಳಲ್ಲಿ ಬರುವ ಎಲ್ಲಾ ವಾರ್ಡ್‌ಗಳಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡುವುದನ್ನು ಶಾಶ್ವತವಾಗಿ ತಪ್ಪಿಸಲು ಕ್ರಮವಹಿಸಲಾಗುತ್ತಿದೆ.

ನಗರದಲ್ಲಿ ಕಸ ಸುರಿಯುವ ಸ್ಥಳ (ಬ್ಲಾಕ್ ಸ್ಪಾಟ್) ಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡುವುದು ನಮ್ಮ ಗುರಿಯಾಗಿದ್ದು, ಅದಕ್ಕಾಗಿ ದೂರು ಕೇಂದ್ರ ಸ್ಥಾಪಿಸಿ ಪ್ರತ್ಯೇಕವಾಗಿ ವಾಟ್ಸಪ್ ಸಂಖ್ಯೆಯನ್ನು ನೀಡಲಾಗಿದೆ. ಸದರಿ ವಾಟ್ಸಪ್ ಸಂಖ್ಯೆಗೆ
ಸಂದೇಶದ ಮೂಲಕ ದೂರು ದಾಖಲಿಸಬಹುದಾಗಿದೆ.

ನಗರದಲ್ಲಿ ತ್ಯಾಜ್ಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಅಹವಾಲುಗಳನ್ನು ನೋಂದಾಯಿಸಲು ಈ ಕೆಳಗಿನ ನಾಲ್ಕು ಆಯಾಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.

ತ್ಯಾಜ್ಯಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಸಂಖ್ಯೆ:

* ನಗರದ ಸ್ವಚ್ಛತೆಯ ದೃಷ್ಟಿಯಿಂದ ದೂರು ಕೇಂದ್ರ ಸ್ಥಾಪಿಸಿದ್ದು, ಅದಕ್ಕಾಗಿ ಪ್ರತ್ಯೇಕ ವ್ಯಾಟ್ಸಪ್ ಸಂಖ್ಯೆ 9448197197 ನೀಡಿದ್ದು, ಈ ಸಂಖ್ಯೆಗೆ ಛಾಯಾಚಿತ್ರದೊಂದಿಗೆ ಸಂದೇಶ ಕಳುಹಿಸುವ ಮೂಲಕ ದೂರು ದಾಖಲಿಸಬಹುದು. ಆ ಬಳಿಕ ಸಂಬಂಧಪಟ್ಟ ಅಧಿಕಾರಿಗಳು ನಿಗದಿತ ಅವಧಿಯಲ್ಲಿ ತ್ಯಾಜ್ಯ/ಕಸ ವಿಲೇವಾರಿ ಮಾಡಿ ಸಮಸ್ಯೆ ಬಗೆಹರಿಸಿರುವ ಕುರಿತು ಮಾಹಿತಿ ನೀಡಲಿದ್ದಾರೆ.

* 1533 ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ದೂರು ದಾಖಲಿಸಬಹುದು.

* ಬಿಬಿಎಂಪಿ ಜಾಲತಾಣವಾದ www.bbmp.gov.in ಮುಖಾಂತರವೂ ತ್ಯಾಜ್ಯಕ್ಕೆ ಸಂಬಂಧಿಸಿದಂತೆ ಸಹಾಯ ಪಡೆದುಕೊಳ್ಳಬಹುದು.
* ನಮ್ಮ ಬೆಂಗಳೂರು (ಸಹಾಯಕ 2.0) ಆಪ್ ಮೊಬೈಲ್ ತಂತ್ರಾಂಶದ ಮೂಲಕ ದೂರು ದಾಖಲಿಸಬಹುದು.

‘ಸ್ವಚ್ಛ ಬೆಂಗಳೂರು, ಹಸಿರು ಬೆಂಗಳೂರು” ಗಾಗಿ ಬಿಬಿಎಂಪಿಯು ಸದಾ ಶ್ರಮಿಸುತ್ತಿದ್ದು, ನಾಗರಿಕರು ನಗರದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಪಾಲಿಕೆಯ ಜೊತೆ ಕೈಜೋಡಿಸಲು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಮುಖ್ಯ ಕಾರ್ಯಾಚರಣೆ ಅಧಿಕಾರಿಯಾದ ರಮಾಮಣಿ ರವರು ಮನವಿ ಮಾಡಿದ್ದಾರೆ.

ಅಹಮದಾಬಾದ್ ವಿಮಾನ ದುರಂತ: ಪತಿಯನ್ನು ಭೇಟಿಯಾಗಲು ಲಂಡನ್‌ಗೆ ತೆರಳಿದ್ದ ನವ ವಧು ದುರ್ಮರಣ

ವಿಮಾನದಲ್ಲಿದ್ದ ಗುಜರಾತ್ ಮಾಜಿ ಸಿಎಂ ‘ವಿಜಯ್ ರೂಪಾನಿ’ ಕೊನೆಯ ಫೋಟೋ ವೈರಲ್

Share. Facebook Twitter LinkedIn WhatsApp Email

Related Posts

ಮದ್ದೂರು ನಗರಸಭೆ ವ್ಯಾಪ್ತಿಗೆ ಗ್ರಾಮ ಪಂಚಾಯಿತಿಗಳ ಸೇರ್ಪಡೆ ನಿರ್ಧಾರ ಕೈಬಿಡಿ: ಸಿಎಂಗೆ ಪತ್ರ ಬರೆದು HDK ಆಗ್ರಹ

02/03/2026 3:29 PM2 Mins Read

ಇನ್ನಷ್ಟು ಅನಾಹುತ ಆಗುವ ಮೊದಲು ವಿಶ್ವದ ನಾಯಕರು ಯುದ್ಧ ನಿಲ್ಲಿಸಬೇಕು: ಸಂಸದ ಬಸವರಾಜ ಬೊಮ್ಮಾಯಿ

02/03/2026 2:55 PM2 Mins Read

ಎಲ್ಲ ಸಮುದಾಯಗಳ ಜೊತೆ ಚರ್ಚಿಸಿ ಒಳ ಮೀಸಲಾತಿ ಪರಿಗಣಿಸಿ ನೇಮಕ ಮಾಡಲಿ: ಸಂಸದ ಬೊಮ್ಮಾಯಿ

02/03/2026 2:50 PM1 Min Read
Recent News

BREAKING : 2025-26ನೇ ಸಾಲಿಗೆ ‘ಭವಿಷ್ಯ ನಿಧಿ(PF) ಬಡ್ಡಿದರ’ ಪ್ರಕಟ.!PF interest rate

02/03/2026 3:30 PM

ಮದ್ದೂರು ನಗರಸಭೆ ವ್ಯಾಪ್ತಿಗೆ ಗ್ರಾಮ ಪಂಚಾಯಿತಿಗಳ ಸೇರ್ಪಡೆ ನಿರ್ಧಾರ ಕೈಬಿಡಿ: ಸಿಎಂಗೆ ಪತ್ರ ಬರೆದು HDK ಆಗ್ರಹ

02/03/2026 3:29 PM

BREAKING : ಇರಾನ್’ನಲ್ಲಿ 3 ದಿನದಲ್ಲಿ ಕನಿಷ್ಠ 555 ಮಂದಿ ಯುದ್ಧಕ್ಕೆ ಬಲಿ ; ಇರಾನ್ ರೆಡ್ ಕ್ರೆಸೆಂಟ್ ಮಾಹಿತಿ!

02/03/2026 3:13 PM

ಇನ್ನಷ್ಟು ಅನಾಹುತ ಆಗುವ ಮೊದಲು ವಿಶ್ವದ ನಾಯಕರು ಯುದ್ಧ ನಿಲ್ಲಿಸಬೇಕು: ಸಂಸದ ಬಸವರಾಜ ಬೊಮ್ಮಾಯಿ

02/03/2026 2:55 PM
State News
KARNATAKA

ಮದ್ದೂರು ನಗರಸಭೆ ವ್ಯಾಪ್ತಿಗೆ ಗ್ರಾಮ ಪಂಚಾಯಿತಿಗಳ ಸೇರ್ಪಡೆ ನಿರ್ಧಾರ ಕೈಬಿಡಿ: ಸಿಎಂಗೆ ಪತ್ರ ಬರೆದು HDK ಆಗ್ರಹ

By kannadanewsnow0902/03/2026 3:29 PM KARNATAKA 2 Mins Read

ಬೆಂಗಳೂರು: ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ, ಸೋಮನಹಳ್ಳಿ ಸೇರಿದಂತೆ ವಿವಿಧ ಪ್ರದೇಶಗಳನ್ನು ಸ್ಥಳೀಯರ ಆಶಯಗಳಿಗೆ ವಿರುದ್ಧವಾಗಿ…

ಇನ್ನಷ್ಟು ಅನಾಹುತ ಆಗುವ ಮೊದಲು ವಿಶ್ವದ ನಾಯಕರು ಯುದ್ಧ ನಿಲ್ಲಿಸಬೇಕು: ಸಂಸದ ಬಸವರಾಜ ಬೊಮ್ಮಾಯಿ

02/03/2026 2:55 PM

ಎಲ್ಲ ಸಮುದಾಯಗಳ ಜೊತೆ ಚರ್ಚಿಸಿ ಒಳ ಮೀಸಲಾತಿ ಪರಿಗಣಿಸಿ ನೇಮಕ ಮಾಡಲಿ: ಸಂಸದ ಬೊಮ್ಮಾಯಿ

02/03/2026 2:50 PM

ಕರ್ನಾಟಕದ ಬಡತನ ಸೂಚ್ಯಂಕ : ಯಾದಗಿರಿ ನಂಬರ್ 1, ನಿಮ್ಮ ಜಿಲ್ಲೆ ಎಷ್ಟನೇ ಸ್ಥಾನದಲ್ಲಿದೆ ಚೆಕ್ ಮಾಡಿಕೊಳ್ಳಿ !

02/03/2026 2:25 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.