ಚಳಿಗಾಲದ ಒಣಹವೆ, ಶೀತಲ ಗಾಳಿಯಿಂದ ವಾತಾವರಣದಲ್ಲಿ ಹಲವಾರು ಬದಲಾವಣೆಯಾದಂತೆ, ಇದಕ್ಕೆ ಅನುಗುಣವಾಗಿ ಮನುಷ್ಯನ ದೇಹದಲ್ಲಿಯೂ ಬದಲಾವಣೆಗಳು ಉಂಟಾಗುತ್ತದೆ ಮತ್ತು ಅನೇಕ ಅರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಅವುಗಳೆಂದರೆ ಸಂಧಿಗಳಲ್ಲಿ ನೋವು, ಶೀತ ಮತ್ತು ಕೆಮ್ಮು, ಕಿವಿಯಲ್ಲಿ ಸೋಂಕು ಮುಂತಾದವು. ಕೇವಲ ಚಳಿಗಾಲದಲ್ಲದೇ ಎಲ್ಲಾ ಋತುಗಳಲ್ಲಿ ಕಾಡುವ ಸಾಮಾನ್ಯ ಶೀತದ ಬಗ್ಗೆ ಮುಂದೆ ತಿಳಿಯೋಣ.
ಆಯುರ್ವೇದ ದಲ್ಲಿ ಪದೇ ಪದೇ ಶೀತವಾಗುವುದನ್ನು ಪ್ರತಿಶ್ಯಾಯ ಎಂದು ಕರೆಯುತ್ತಾರ. ಪ್ರತಿಶ್ಯಾಯವು ಪ್ರತಿ ಮತ್ತು ಶ್ಯಾಯ ಎಂಬ ಎರಡು ಪದಗಳಿಂದ ಕೂಡಿದೆ. ಪ್ರತಿ ಎಂದರೆ ಅಭಿಮುಖ ( opposite direction) , ಶ್ಯಾಯ ಎಂದರೆ ಗಮನ / ಹರಿಯುವುದು ಎಂದರ್ಥ.
ಪ್ರತಿಕ್ಷಣಮ್ ಶ್ಯಾಯತೆ ಇತಿ ಪ್ರತಿಶ್ಯಾಯಃ |
ಅಂದರೆ ಯಾವ ರೋಗದಲ್ಲಿ ನಿರಂತರವಾಗಿ ( continuous flow) ಹರಿಯುವಿಕೆ ಇರುತ್ತದೆ ಅದನ್ನು ಪ್ರತಿಶ್ಯಾಯ ಎನ್ನುವರು.
ಇದು ಕೆಲವರಿಗೆ ಚಳಿಗಾಲದಲ್ಲಿ ಅಥವಾ ಒಂದು ನಿರ್ದಿಷ್ಟ ಋತುವಿನಲ್ಲಿ ಬಂದರೆ ಇನ್ನು ಕೆಲವರಿಗೆ ವರ್ಷವಿಡಿ ಈ ಸಮಸ್ಯೆ ಕಾಡುತ್ತಿರುತ್ತದೆ.ಇದನ್ನು ಆಧುನಿಕ ವೈದ್ಯಕೀಯ ಶಾಸ್ತ್ರದಲ್ಲಿ Allergic rhinitis ಎಂದು ಕರೆಯುತ್ತಾರೆ.
ಇದು ನಮ್ಮ ಮೂಗಿನಲ್ಲಿರುವ ಒಳಪದರ ಅಂದರೆ Nasal mucosa ವು ಅಲರ್ಜನ್ ಗಳಿಗೆ ( ಅಲರ್ಜಿಯನ್ನುಂಟು ಮಾಡುವ ವಸ್ತು, ಧೂಳು, ಹೊಗೆ ಇತ್ಯಾದಿ) ಪ್ರತಿಕ್ರಯಿಸುವ ಕ್ರಿಯೆಯಾಗಿದೆ. ಇದರಿಂದ ಪದೇಪದೇ ಸೀನುವುದು ಶೀತ ಮುಂತಾದ ಲಕ್ಷಣಗಳು ಕಾಣಿಸುತ್ತವೆ.
ಕಾರಣಗಳು:
1.ಶೀತವಾದ ಗಾಳಿಯಲ್ಲಿ, ಧೂಳಿನಲ್ಲಿ ಸಂಚರಿಸುವುದು.
2.ಅತಿಶೀತವಾದ ನೀರನ್ನು ಕುಡಿಯುವುದು.
3.ಅತಿಯಾಗಿ ಬಿಸಿಲಿನಲ್ಲಿ ಇರುವುದು.
4.ತಲೆಸ್ನಾನ
5.ಮೂತ್ರ, ಪುರೀಷ ವೇಗಗಳನ್ನು ತಡೆಯುವುದು.
ಲಕ್ಷಣಗಳು :
1.ಮೂಗಿನಿಂದ ದ್ರವ ನೀರಾಗಿ ಸೋರುವುದು.
2.ಪದೇ ಪದೇ ಸೀನುವುದು
3.ತಲೆಭಾರ , ತಲೆನೋವು.
4.ಗಂಟಲು, ತುಟಿ, ಕಣ್ಣುಗಳಲ್ಲಿ ತುರಿಕೆ.
5.ಧ್ವನಿ ಕೆಡುವುದು ( ಕೆಲವು ಬಾರಿ ಮಾತೆ ಹೊರಡುವುದಿಲ್ಲ )
6.ವಾಸನೆಯೇ ಗೊತ್ತಾಗದೆ ಇರುವುದು.
7. ಉಸಿರಾಡುವಾಗ ದುರ್ವಾಸನೆ
8. ಮೂಗು ಕಟ್ಟಿ, ಉಸಿರಾಡದಂತಾಗುವುದು.
ಚಿಕಿತ್ಸಾ ಕ್ರಮಗಳು:
ಮುಖ್ಯವಾಗಿ ರೋಗ ಬರುವುದಕ್ಕೆ ಕಾರಣವಾದವುಗಳನ್ನು ತ್ಯಜಿಸುವುದು.
ಇದು ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿ ಬರುವುದರಿಂದ,ಅದನ್ನು ಹೆಚ್ಚು ಮಾಡುವಂತಹ ಔಷಧಿಗಳನ್ನು ಉಪಯೋಗಿಸುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು.
ಆಯುರ್ವೇದದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧಿಗಳ ಜೊತೆಗೆ ಪಂಚಕರ್ಮ ಚಿಕಿತ್ಸೆಗಳಾದ, ನಸ್ಯ ಕರ್ಮ (ಕ್ರಮ ಬದ್ಧವಾಗಿ ಮೂಗಿನಲ್ಲಿ ಔಷಧಯುಕ್ತ ತುಪ್ಪ /ಎಣ್ಣೆಯನ್ನು ಹಾಕುವುದು) , ವಮನ ( ವಾಂತಿ ಮಾಡಿಸುವುದು) ಮುಂತಾದ ಚಿಕಿತ್ಸೆಗಳಿವೆ.
ಸುಲಭ ಮನೆಮದ್ದುಗಳು
1.15 ರಿಂದ 20 ml ದಿನಕ್ಕೆ ಎರಡು ಬಾರಿ, ಅಮೃತಬಳ್ಳಿಯ ಕಷಾಯ ಕುಡಿಯುವುದು. 2.ಅರಿಶಿಣ ಪುಡಿಯನ್ನು ಹಾಲಿನಲ್ಲಿ ಕುದಿಸಿ ಕುಡಿಯುವುದರಿಂದ ನೆಗಡಿ, ಕೆಮ್ಮು ,ಗಂಟಲು ನೋವು ನಿವಾರಣೆಯಾಗುತ್ತದೆ.
3.ತುಳಸಿ ಎಲೆಯ ಕಷಾಯ ಸೇವನೆ ಮತ್ತು ತುಳಸಿ ಎಲೆಗಳನ್ನು ಬಿಸಿ ನೀರಿನಲ್ಲಿ ಕುದಿಸಿ ಅದರ ಹಬೆ / ಶಾಖ ತೆಗೆದುಕೊಳ್ಳುವುದರಿಂದ ನೆಗಡಿ, ಕೆಮ್ಮು ,ಕಫ ದೂರವಾಗುವವು.
4.ದೊಡ್ಡಪತ್ರೆ ಎಲೆಯ ರಸ ಅರ್ಧ ಚಮಚ ,ಒಂದು ಚಿಟಿಕೆ ಹಿಪ್ಪಲಿ ಪುಡಿ ಮತ್ತು ಸ್ವಲ್ಪ ಜೇನು ತುಪ್ಪವನ್ನು ಸೇವಿಸಿದರೆ ಕೆಮ್ಮಿನಿಂದ ಕೂಡಿದ ಜ್ವರ ವಾಸಿಯಾಗುತ್ತದೆ.
ಉಪದ್ರವಗಳು / Complications :
ಇದನ್ನು ನಿಗದಿತ ಸಮಯದಲ್ಲಿ ಚಿಕಿತ್ಸೆ ಮಾಡದೆ ಬಿಟ್ಟರೆ, ಕಿವುಡುತನ,ಕಣ್ಣಿನ ಸಮಸ್ಯೆಗಳು, ಅಸ್ತಮ ,ವಾಸನೆಗೊತ್ತಗದೆ ಇರುವುದು,
ದುಷ್ಟಪ್ರತಿಶ್ಯಾಯ ಮತ್ತು ಇನ್ನಿತರ ಸಮಸ್ಯೆಗಳು ಬರಬಹುದು.
ಇದು ಜಾಗೃತಿ ಉದ್ದೇಶಕ್ಕಾಗಿ ಮಾತ್ರ, ರೋಗದ ಕಾರಣ ಮತ್ತು ವ್ಯತ್ಯಾಸಗಳು ವ್ಯಕ್ತಿಯ ಆಹಾರ, ವಿಹಾರಗಳ ಮೇಲೆಯೂ ಅವಲಂಬಿತವಾಗಿರುತ್ತವೆ. ನೀವು ಈ ತರಹದ ಸಮಸ್ಯೆಗಳಿಂದ ಬಳಲುತ್ತಿದ್ದರೆ ವೈದರನ್ನು ಸಂಪರ್ಕಿಸಿ ಸೂಕ್ತ ಪರಿಹಾರ ಕಂಡುಕೊಳ್ಳಿ.
ಹೆಚ್ಚಿನ ಆರೋಗ್ಯ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು 8660885793 ವಾಟ್ಸಾಪ್ ಸಂದೇಶವನ್ನು ಕಳುಹಿಸಿ.
(ಕಡ್ಡಾಯವಾಗಿ ವಾಟ್ಸಾಪ್ ಮಾತ್ರ).
ಲೇಖಕರು: ಡಾ. ಪ್ರವೀಣ್ ಕುಮಾರ್, ಆಯುರ್ವೇದ ವೈದ್ಯರು, 8660885793 (ವಾಟ್ಸಾಪ್ ಮಾತ್ರ)
ಪುಸ್ತಕ ಪ್ರಿಯರಿಗೆ ಸಿಹಿಸುದ್ದಿ: ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕಗಳ ಮೇಲೆ ಶೇ.50ರಷ್ಟು ರಿಯಾಯಿತಿ ಘೋಷಣೆ
ತಾಯಿ ,ನಾಲ್ವರು ಸಹೋದರಿಯರ ಹತ್ಯೆ ಪ್ರಕರಣ: ‘ಹಿಂದೂ’ ಆಗಲು ಬಯಸಿದ್ದ ಆರೋಪಿ ಅರ್ಷದ್