ನವದೆಹಲಿ : ಆರೋಗ್ಯವಾಗಿ ಇರಬೇಕಂದ್ರೆ ಸರಿಯಾಗಿ ನಿದ್ದೆ ಮಾಡ್ಬೇಕು ಎಂದು ವೈದ್ಯರು ಹೇಳ್ತಾರೆ. ನಿದ್ದೆ ಹೆಚ್ಚಾದ್ರೂ, ಕಮ್ಮಿಯಾದ್ರೂ ತೊಂದರೆ ತಪ್ಪಿದ್ದಲ್ಲ. ಅದ್ರಂತೆ, ಸಧ್ಯ ನಿದ್ದೆಗೆ ಸಂಬಂಧಿಸಿದಂತೆ ಅಧ್ಯಯನವೊಂದು ಆಘಾತಕಾರಿ ಸಂಗತಿಯನ್ನ ಬಹಿರಂಗ ಪಡೆಸಿದೆ.
ಅಧ್ಯಯನದ ಪ್ರಕಾರ, 50 ವರ್ಷಕ್ಕಿಂತ ಮೇಲ್ಪಟ್ಟವರು 5 ಗಂಟೆಗಿಂತ ಹೆಚ್ಚೇ ನಿದ್ದೆ ಮಾಡಬೇಕು. ಅದಕ್ಕಿಂತ ಕಡಿಮೆ ನಿದ್ರೆ ಮಾಡೋದು ಅಪಾಯಕಾರಿಯಾಗಿದ್ದು, ಗಂಭೀರ ಕಾಯಿಲೆಗಳಿಂದ ಬಳಲಬಹುದು ಎಂದು ಹೊಸ ಸಂಶೋಧನೆ ಬಹಿಂಗವಾಗಿದೆ.
ಪ್ಲೋಸ್ ಮೆಡಿಸಿನ್ ಜರ್ನಲ್ನಲ್ಲಿ ಪ್ರಕಟವಾದ ಸಂಶೋಧನೆ ಪ್ರಕಾರ, ಈ ಅಧ್ಯಯನವನ್ನ 25 ವರ್ಷಗಳ ಕಾಲ ನಡೆದ ಮಾಡಲಾಯ್ತು. ಬ್ರಿಟನ್ನ 8 ಸಾವಿರ ಸರ್ಕಾರಿ ನೌಕರರನ್ನ ಸಂಶೋಧನೆಗೆ ಒಳಪಡಿಸಿದಲಾಗಿದ್ದು, ಅವರಿಗೆ 50 ವರ್ಷ ವಯಸ್ಸಿನವರೆಗೆ ಯಾವುದೇ ದೀರ್ಘಕಾಲದ ಕಾಯಿಲೆ ಇರಲಿಲ್ಲ. ಪ್ರತಿ 4 ರಿಂದ 5 ವರ್ಷಗಳಿಗೊಮ್ಮೆ ಮುಂದಿನ 25 ವರ್ಷಗಳವರೆಗೆ ಅವರ ನಿದ್ರೆ ಮತ್ತು ಆರೋಗ್ಯದ ಬಗ್ಗೆ ಮಾಹಿತಿಯನ್ನ ನೀಡುವಂತೆ ವಿಜ್ಞಾನಿಗಳು ಕೇಳಿಕೊಂಡರು.
ಸಂಶೋಧಕರ ಪ್ರಕಾರ, ರಾತ್ರಿಯಲ್ಲಿ 7 ಗಂಟೆಗಳ ಕಾಲ ಮಲಗುವ ಜನರಿಗೆ ಹೋಲಿಸಿದ್ರೆ, ರಾತ್ರಿ 5 ಗಂಟೆಗಳ ಕಾಲ ನಿದ್ರಿಸುವವರಲ್ಲಿ ದೀರ್ಘಕಾಲದ ಕಾಯಿಲೆಗಳ ಅಪಾಯ ಹೆಚ್ಚಿದೆ. 50ನೇ ವಯಸ್ಸಿನಲ್ಲಿ ನಿದ್ರೆಯನ್ನ ಪತ್ತೆಹಚ್ಚಿದ ಜನರು 5 ಗಂಟೆ ಅಥವಾ ಅದಕ್ಕಿಂತ ಕಡಿಮೆ ನಿದ್ರೆ ಮಾಡಿದ್ರೆ, ದೀರ್ಘಕಾಲದ ಕಾಯಿಲೆಗಳ ಅಪಾಯವು 30% ಹೆಚ್ಚಾಗುತ್ತದೆ.ಇನ್ನು ಈ ಅಪಾಯವು 60 ವರ್ಷದವರಲ್ಲಿ 32% ಮತ್ತು 70 ವರ್ಷದವರಲ್ಲಿ 40% ಎಂದು ಹೇಳಲಾಗತ್ತೆ. ಸಾಕಷ್ಟು ನಿದ್ದೆ ಮಾಡದೇ ಇರುವವರ ಸಾವಿನ ಅಪಾಯವೂ 25% ಅಧಿಕ ಎಂಬ ಆಘಾತಕಾರಿ ಅಂಶ ಈ ಸಂಶೋಧನೆಯಿಂದ ತಿಳಿದುಬಂದಿದೆ.
BIGG NEWS : ಬಿಹಾರದಲ್ಲಿ ಮದ್ಯ ಸೇವಿಸಿ ಸಾವನ್ನಪ್ಪಿದವರಿಗೆ ಪರಿಹಾರ ನೀಡಲ್ಲ : ಸಿಎಂ ನಿತೀಶ್ ಕುಮಾರ್