ಕೆಎನ್ ಎನ್ ನ್ಯೂಸ್ ಡೆಸ್ಕ್ : ಇಂದಿನ ದಿನದಲ್ಲಿ ಪ್ರತಿನಿತ್ಯ ಗಂಟೆಗಟ್ಟಲೆ ಕೂತಲ್ಲೇ ಕುಳಿತು ಕೆಲಸ ಮಾಡಬೇಕು. ಕೆಲಸದಿಂದಾಗಿ ಕೆಲವರು ಕುರ್ಚಿಯಲ್ಲೇ ಕೂರುತ್ತಾರೆ. ವರ್ಕ್ ಫ್ರಂ ಹೋಂ ಮಾಡುವವರೂ ಮೂರು ಹೊತ್ತು ಕೂತು ಕೆಲಸ ಮಾಡಬೇಕು. ಇದರಿಂದ ಇದು ಬೆನ್ನುನೋವಿಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಪ್ರತಿಯೊಬ್ಬರೂ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
BIGG NEWS: ಇಂದು ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರಿ ಮಳೆ; 18 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ
ಅದರಿಂದ ಮುಕ್ತವಾಗಲು ಕೆಲವೊಬ್ಬರು ಮಾತ್ರೆಗಳ ಮೊರೆ ಹೋದರೆ, ಇನ್ನೂ ಕೆಲವರು ನೋವನ್ನು ಕಡಿಮೆ ಮಾಡಲು ಸ್ಪ್ರೇಗಳನ್ನು ಬಳಸುತ್ತಾರೆ. ಬೆರಳೆಣಿಕೆಯ ಜನರು ಮಾತ್ರ ವ್ಯಾಯಾಮದ ಮೂಲಕ ನೋವನ್ನು ಕಡಿಮೆ ಮಾಡುವ ಪ್ರಯತ್ನ ಮಾಡುತ್ತಾರೆ.
ಬೆನ್ನು ನೋವಿನ ನಿವಾರಣೆಗೆ ಚಿಕಿತ್ಸೆ ಪಡೆಯುತ್ತಾರೆ. ಅದು ಆ ಕ್ಷಣದಲ್ಲಿ ನೋವು ನಿವಾರಣೆ ಆದ್ರೆ ಮತ್ತೆ ನೋವು ಬರುತ್ತದೆ. ಆದರೆ ಓ ನೋವು ಕಡಿಮೆ ಮಾಡಲು ಹೆಚ್ಚಾಗಿ ವ್ಯಾಯಾಮ ಮಾಡುಬೇಕು. ಬೇಗನೆ ನೋವಿನಿಂದ ಹೊರಬರಬಹುದು ಎನ್ನುತ್ತಾರೆ ತಜ್ಞರು. ಹೀಗಾಗಿ ಹೆಚ್ಚಿನವರು ಈ ಚಿಕಿತ್ಸೆಯನ್ನು ಅನುಸರಿಸಲು ಆಸಕ್ತಿ ತೋರಿಸುತ್ತಿದ್ದಾರೆ. ದೀರ್ಘಕಾಲದ ಬೆನ್ನು ನೋವನ್ನು ನಿವಾರಿಸಲು ಇದು ಉತ್ತಮ ಮಾರ್ಗ. ಇತ್ತೀಚಿನ ಅಧ್ಯಯನವು ಈ ಚಿಕಿತ್ಸೆಯು ಇತರ ದೈಹಿಕ ಚಿಕಿತ್ಸಾ ವಿಧಾನಕ್ಕಿಂತ ಹೆಚ್ಚಿನ ಪ್ರಯೋಜನಕಾರಿ ಎಂದು ತೋರಿಸಿದೆ.
BIGG NEWS: ಇಂದು ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರಿ ಮಳೆ; 18 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ
ಹಾಗಾದ್ರೆ ಯಾವ ರೀತಿಯ ವ್ಯಾಯಾಮ ಮಾಡಬೇಕು?
* ಪ್ರತಿನಿತ್ಯ ನಡಿಗೆ ಮಾಡಬೇಕು. ನಿಮ್ಮ ಸೊಂಟದವರೆಗಿನ ದೇಹವನ್ನು ನೀರಿನಲ್ಲಿ ಇರಿಸಿ, ನೀರಿನ ಕಡೆಗೆ ನಡೆಯಿರಿ. ಈ ರೀತಿ ಕೊಳದ ಸುತ್ತಲೂ ನಡೆಯುವಾಗ ನಿಮ್ಮ ತೋಳುಗಳನ್ನು ಕೂಡ ಬೀಸುತ್ತಿರಬೇಕು.
* ಭೂಮಿ ಮೇಲೆ ಜಾಗಿಂಗ್ ಮಾಡಿದಂತೆ, ನೀವು ನೀರಿನಲ್ಲಿ ಕೂಡಾ ಜಾಗಿಂಗ್ ಮಾಡಬಹುದು. ಆಗ ಒಂದು ಕಡೆ ವಾಲಬಾರದು ಅಥವಾ ತೇಲಬಾರದು.
* ಸ್ವಿಮ್ಮಿಂಗ್ ಪೂಲ್ ಮಾಡಬೇಕು. ಪೂಲ್ ಕೆಳಭಾಗವನ್ನು ಕಾಲುಗಳಿಂದ ಒದೆಯಬೇಕು. ನಂತರ ಕಾಲುಗಳಿಗೆ ವಿಶ್ರಾಂತಿ ನೀಡಬೇಕು.