ಕೆಎನ್ ಎನ್ ನ್ಯೂಸ್ ಡೆಸ್ಕ್ : ಚಳಿಗಾಲ ಬಂತು ಅಂದರೆ ಆರೋಗ್ಯದ ಮೇಲೆ ಎಷ್ಟು ನಿಗಾ ವಹಿಸಿದ್ರೂ ಸಾಲದು. ಚಳಿ ಜಾಸ್ತಿಯಾಗುತ್ತಿದ್ದಂತೆ ಅನಾರೋಗ್ಯದ ಸಮಸ್ಯೆ ಕಾಡುತ್ತದೆ.
ಅದರಲ್ಲೂ ಈಗ ಹವಾಮಾನ ಬದಲಾವಣೆಯಿಂದ ದೇಹಕ್ಕೆ ಮತ್ತಷ್ಟು ರೋಗಗಳು ಆವರಿಸಿಕೊಳ್ಳುತ್ತದೆ. ವೃದ್ಧರು ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಅವಶ್ಯಕ. ನೆಗಡಿ, ಕೆಮ್ಮು, ವೈರಲ್ ಜ್ವರಗಳು ಕಾಡುತ್ತದೆ.
ಈಗ ವಿವಿಧ ದೇಶಗಳಲ್ಲಿ ಕೋವಿಡ್ ಸೋಂಕು ಉಲ್ಬಣಗೊಳ್ಳುತ್ತಿದೆ. ಈ ನಡುವೆ ವೈರಲ್ ಜ್ವರದ ಭೀತಿ ಕೂಡಾ ಜನರಿಗೆ ಎದುರಾಗಿದೆ. ಅದರಲ್ಲೂ ಶಾಲೆಗೆ ಹೋಗುವ ಮಕ್ಕಳಿದ್ದರೆ ಒಬ್ಬರಿಂದ ಮತ್ತೊಬ್ಬರಿಗೆ ಸೋಂಕು ಹರಡುವ ಅಪಾಯವಿದೆ.
ವೈರಲ್ ಜ್ವರದ ಲಕ್ಷಣಗಳು
ದೇಹದ ಉಷ್ಣತೆಯು 99 ಡಿಗ್ರಿ ಫ್ಯಾರನ್ಹೀಟ್ನಿಂದ 103 ಡಿಗ್ರಿ ಫ್ಯಾರನ್ಹೀಟ್ವರೆಗೆ ಇರುತ್ತದೆ. ವೈರಲ್ ಜ್ವರವು ಸಾಮಾನ್ಯ ಶೀತ, ಕೆಮ್ಮು, ತಲೆನೋವು, ಶೀತ, ನಡುಕ, ನಿರ್ಜಲೀಕರಣ, ಸ್ನಾಯು ನೋವು, ಆಲಸ್ಯ, ಹಸಿವಿನ ಕೊರತೆಯಂತಹ ಲಕ್ಷಣಗಳನ್ನು ಸಹ ಹೊಂದಿದೆ.
ವೈರಲ್ ಜ್ವರಕ್ಕೆ ಕಾರಣವೇನು?
ವೈರಲ್ ಜ್ವರವು ಸೋಂಕಿನಿಂದ ಮತ್ತು ವೈರಸ್ನಿಂದ ಬರುತ್ತದೆ. ದೇಹವು ಸಾಂಕ್ರಾಮಿಕ ವೈರಸ್ ವಿರುದ್ಧ ಹೋರಾಡಿದಾಗ ದೇಹದ ಉಷ್ಣತೆ ಹೆಚ್ಚಾಗುತ್ತದೆ. ನೀವು ವೈರಲ್ ಸೋಂಕಿಗೆ ಒಳಗಾದ ವ್ಯಕ್ತಿಯ ಅಕ್ಕಪಕ್ಕದಲ್ಲಿದ್ದರೆ, ನೀವು ಕೂಡಾ ಜ್ವರಕ್ಕೆ ತುತ್ತಾಗುವ ಅಪಾಯ ಎದುರಿಸುತ್ತೀರಿ. ಅವರು ಕೆಮ್ಮುವಾಗ ಅಥವಾ ಸೀನುವಾಗ ನೀವು ಪಕ್ಕದಲ್ಲಿದ್ದರೆ, ಉಸಿರಾಟದ ಮೂಲಕ ವೈರಸ್ ನಿಮ್ಮನ್ನು ಪ್ರವೇಶಿಸುತ್ತದೆ. ನೆಗಡಿ ಮತ್ತು ಜ್ವರ ಹೀಗೆ ಬರುತ್ತವೆ. ಆಹಾರ ಮತ್ತು ಪಾನೀಯಗಳ ಮೂಲಕವೂ ವೈರಸ್ ಹರಡುತ್ತದೆ. ನೊರೊವೈರಸ್ ಮತ್ತು ಎಂಟ್ರೊವೈರಸ್ ಕೂಡಾ ಇದೇ ರೀತಿಯದ್ದು. ಇದಲ್ಲದೆ, ಕೀಟಗಳು ಕಚ್ಚಿದಾಗ, ಅವು ನಮ್ಮ ದೇಹದಲ್ಲಿ ಸೋಂಕನ್ನು ಉಂಟುಮಾಡುತ್ತವೆ.
ವೈರಲ್ ಜ್ವರ ತಡೆಗಟ್ಟುವುದು ಹೇಗೆ?
ಹೆಚ್ಚಿನ ಸಂದರ್ಭಗಳಲ್ಲಿ ವೈರಲ್ ಸೋಂಕುಗಳಿಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇರುವುದಿಲ್ಲ. ಬ್ಯಾಕ್ಟೀರಿಯಾದ ಸೋಂಕು ಆದರೆ, ಆಂಟಿಬಯೋಟೆಕ್ ಕೆಲಸ ಮಾಡುತ್ತದೆ. ಆದರೆ ಅವರು ವೈರಲ್ ಸೋಂಕುಗಳಿಗೆ ಇದು ಸಾಲುವುದಿಲ್ಲ. ಆದ್ದರಿಂದ, ವೈದ್ಯರು ರೋಗಲಕ್ಷಣಗಳ ಆಧಾರದ ಮೇಲೆ ಚಿಕಿತ್ಸೆ ನೀಡುತ್ತಾರೆ. ಜ್ವರ, ನೆಗಡಿ ಮತ್ತು ಕೆಮ್ಮಿಗೆ ಸೂಕ್ತ ಔಷಧಗಳನ್ನು ನೀಡಲಾಗುತ್ತದೆ.