ಝೈದ್ ಖಾನ್ ನಾಯಕನಾಗಿ ನಟಿಸಿರೋ ಬನಾರಸ್ ಸಿನಿಮಾ ಬಿಡುಗಡೆಯಾಗಿದ್ದು, ಪ್ರಕ್ಷಕರ ಮನಗೆದ್ದಿದೆ. ಕರ್ನಾಟಕವೂ ಸೇರಿದಂತೆ, ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ಕೇಳಿ ಬರುತ್ತಿದೆ.
‘ಮಕ್ಕಳ ಕಣ್ಣೀರು ನನ್ನ ಸಿಟ್ಟಿಗೆ ಕಾರಣವಾಯಿತು’ : ರಮೇಶ್ ಕುಮಾರ್ ವಿರುದ್ಧದ ಹೇಳಿಕೆಗೆ ‘HDK’ ವಿಷಾದ
ಅದರಲ್ಲೂ ಝೈದ್ ಖಾನ್ ನಟಯನ್ನು ಕಂಡು ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.ಇದೀಗ ಝೈದ್ ಖಾನ್ ಅವರಿಗೆ ಬಾಲಿವುಡ್ ನಿಂದ ಆಫರ್ ಬಂದಿದೆ. ಬಾಲಿವುಡ್ ಖ್ಯಾತ ನಿರ್ದೇಶಕರು ಝೈದ್ ಖಾನ್ ಗಾಗಿ ಸಿನಿಮಾ ಮಾಡಲು ಮುಂದಾಗಿದ್ದಾರೆ.
ಇದೊಂದು ಬಿಗ್ ಬಜೆಟ್ ಸಿನಿಮಾ ಇದಾಗಿದೆ. ಇದರಲ್ಲಿ ಝೈದ್ ಖಾನ್ ಜೋಡಿಯಾಗಿ ಖ್ಯಾತ ನಟಿಯೊಬ್ಬಳು ಸ್ಕ್ರೀನ್ ಶೇರ್ ಮಾಡಿದ್ದಾರೆ.
ಈ ಅವಕಾಶವನ್ನು ಝೈದ್ ಸೇರಿದಂತೆ ಯಾವ ನಾಯಕನೂ ನಿರಾಕರಿಸಲು ಸಾಧ್ಯವಿರಲಿಲ್ಲ. ಆದರೂ ಕೂಡಾ ಝೈದ್ ಅದನ್ನು ನಿರಾಕರಿಸಿದ್ದಾರೆ. ಅದಕ್ಕೆ ಕಾರಣವಾಗಿರೋದು ಅವರೊಳಗೆ ಹಾಸುಹೊಕ್ಕಾಗಿರುವ ಕನ್ನಡತನ!
‘ಮಕ್ಕಳ ಕಣ್ಣೀರು ನನ್ನ ಸಿಟ್ಟಿಗೆ ಕಾರಣವಾಯಿತು’ : ರಮೇಶ್ ಕುಮಾರ್ ವಿರುದ್ಧದ ಹೇಳಿಕೆಗೆ ‘HDK’ ವಿಷಾದ
ಝೈದ್ ಖಾನ್ರನ್ನು ಸಂಪರ್ಕಿಸಿದ್ದ ಆ ನಿರ್ದೇಶಕರು ವಿವರಿಸಿದ್ದೆಲ್ಲವೂ ಝೈದ್ಗೆ ಇಷ್ಟವಾಗಿತಂತೆ. ಆದರೆ ಆ ಚಿತ್ರ ಹಿಂದಿಯಲ್ಲಿ ಮಾತ್ರವೇ ತಯಾರಾಗುತ್ತದೆಂಬ ವಿಚಾರ ಮಾತ್ರ ಝೈದ್ ಅವರಿಗೆ ಹಿಡಿಸಿರಲಿಲ್ಲ. ಅವರು ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ತಯಾರು ಮಾಡುವಂತೆ ಕೇಳಿಕೊಂಡಿದ್ದರು. ಅದಕ್ಕೆ ಯಾವುದೇ ಒಪ್ಪಿಗೆ ನೀಡಿಲ್ಲ.
ಆಗ ಝೈದ್ ಖಾನ್ `ನೀವು ನನ್ನನ್ನು ಅಪ್ರೋಚ್ ಮಾಡಲು ಕಾರಣವಾಗಿರೋದು ಬನಾರಸ್ ಚಿತ್ರ. ಅದು ಪ್ರಧಾನವಾಗಿ ತಯಾರಾಗಿರೋದು, ಗೆದ್ದಿರೋದು ಕನ್ನಡಿಗರಿಂದಲೇ. ನಾನು ಯಾವ ಕಾರಣಕ್ಕೂ ಕನ್ನಡ ಚಿತ್ರರಂಗವನ್ನು ಬಿಟ್ಟು ಹೋಗಲು ಸಿದ್ಧನಿಲ್ಲ’ ಎಂಬಂಥಾ ನಿಖರ ಉತ್ತರ ನೀಡಿ ಆ ಬಿಗ್ ಆಫರ್ ಅನ್ನು ತಿರಸ್ಕರಿಸಿದ್ದಾರಂತೆ. ಝೈದ್ ಖಾನ್ ಕನ್ನಡಪ್ರೇಮವನ್ನು, ಕನ್ನಡ ಚಿತ್ರರಂಗದ ಮೇಲೆ ಅವರಿಟ್ಟಿರುವ ಅಭಿಮಾನವನ್ನು ಮೆಚ್ಚಲೇಬೇಕು.