ಕೆಎನ್ ಎನ್ ಡಿಜಿಟಲ್ ನ್ಯೂಸ್: ದೀಪಾವಳಿ ಬಂತು ಅಂದರೆ ಸಾಕು ಬೆಳಕಿನ ಹಬ್ಬದ ಸಂಭ್ರಮ. ಎಲ್ಲೆಲ್ಲೂ ಬೆಳಕು ರಾರಾಜಿಸುತ್ತದೆ. ಪ್ರತಿಯೊಬ್ಬರ ಮನೆಯಲ್ಲೂ ಹಣದ ಮೂಲಕ ದೀಪ ಹಚ್ಚಿ ಇಡುತ್ತಾರೆ.
BIGG NEWS: ನಾಳೆ ಪುನೀತ್ ರಾಜಕುಮಾರ್ ಗೆ `ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ : ವಿಧಾನಸೌಧ ಮುಂಭಾಗದ ರಸ್ತೆ ಬ್ಲಾಕ್
ಕಾರ್ತಿಕ ಮಾಸದಲ್ಲಿ ಹಗಲು ಕಡಿಮೆ, ರಾತ್ರಿ ಹೆಚ್ಚು. ರಾತ್ರಿಯ ಅವಧಿ ಹೆಚ್ಚಾಗಿರುವ ಈ ಮಾಸದಲ್ಲಿ ಕತ್ತಲು ಕೂಡ ಜಾಸ್ತಿಯೇ ಇರುತ್ತೆ. ಕತ್ತಲನ್ನು ಕಳೆಯಲು ಬೆಳಕು ಬೇಕು. ಬೆಳಕು ಬೆಳಗಲು ಸಾಧನವೊಂದು ಬೇಕು. ಹಗಲಾದರೆ ಸೂರ್ಯನಿರುತ್ತಾನೆ. ಅದೇ ರಾತ್ರಿ? ಈಗೇನೋ ವಿದ್ಯುದ್ದೀಪಗಳಿವೆ. ಹಿಂದೆಲ್ಲಾ? ಹಣತೆಯ ದೀಪಗಳೇ ಬೆಳಕಿನ ಮೂಲಗಳಾಗಿದ್ವು. ಈ ಕಾರಣದಿಂದ ಹುಟ್ಟಿಕೊಂಡಿದ್ದೇ ಕಾರ್ತಿಕ ದೀಪ. ಇದಕ್ಕೆ ಜೊತೆಯಾಗಿ ಚಳಿ ಕೂಡ ವೀಪರಿತವಾಗಿರುತ್ತದೆ.
BIGG NEWS: ನಾಳೆ ಪುನೀತ್ ರಾಜಕುಮಾರ್ ಗೆ `ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ : ವಿಧಾನಸೌಧ ಮುಂಭಾಗದ ರಸ್ತೆ ಬ್ಲಾಕ್
ಹವಾಮಾನದಲ್ಲಿ ಬಿಸಿಯ ಪ್ರಮಾಣ ತಗ್ಗಿರುತ್ತೆ. ಇದ್ರಿಂದ ಆರೋಗ್ಯದಲ್ಲಿ ಬದಲಾವಣೆಯಾಗುವ ಸಾಧ್ಯತೆಗಳು ಹೆಚ್ಚಿರುತ್ತೆ. ಹೀಗಾಗೇ ಈ ಮಾಸದಲ್ಲಿ ನಿತ್ಯ ಸಂಜೆ ಮನೆಯ ಮುಂದೆ ದೀಪಗಳನ್ನು ಹಚ್ಚುವುದರಿಂದ ಶುಭವಾಗುತ್ತೆ ಅಂತಾ ನಮ್ಮ ಶಾಸ್ತ್ರಗಳಲ್ಲಿ ಉಲ್ಲೇಖವಿದೆ.
BIGG NEWS: ನಾಳೆ ಪುನೀತ್ ರಾಜಕುಮಾರ್ ಗೆ `ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ : ವಿಧಾನಸೌಧ ಮುಂಭಾಗದ ರಸ್ತೆ ಬ್ಲಾಕ್
ಹಾಗಾದ್ರೆ ಈ ಮಾಸದಲ್ಲಿ ದೀಪ ಹಚ್ಚೋದು ಹೇಗೆ ಅಂತಿದ್ದೀರಾ? ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ. ಕಾರ್ತಿಕ ಮಾಸದಲ್ಲಿ ಎಳ್ಳೆಣ್ಣೆ ಅಥವಾ ಹಸುವಿನ ತುಪ್ಪದಿಂದ ದೀಪವನ್ನು ಹಚ್ಚೋದು ಪುಣ್ಯಪ್ರದ ಎನ್ನಲಾಗುತ್ತೆ. ಇಂತಹ ದೀಪಗಳನ್ನು ಹಚ್ಚೋದ್ರಿಂದ ಶುಭಫಲಗಳುಂಟಾಗುತ್ತವೆ.
ಎಳ್ಳೆಣ್ಣೆ-ತುಪ್ಪದ ದೀಪ ಹಚ್ಚುವುದರ ಫಲಗಳು -ಕಣ್ಣುಗಳಿಗೆ ಆಹ್ಲಾದತೆ ಉಂಟಾಗುತ್ತೆ. -ದೃಷ್ಟಿ ದೋಷಗಳು ದೂರವಾಗುತ್ತವೆ. -ಚಳಿಯ ವಾತಾವರಣದಿಂದ ಕಾಡುವ ಶ್ವಾಸಕೋಶ ವ್ಯಾಧಿಗಳು ದೂರವಾಗುತ್ತವೆ. -ಚಳಿಗಾಲದಲ್ಲಿ ಹೆಚ್ಚುವ ಕ್ರಿಮಿಕೀಟಗಳು ನಶಿಸುತ್ತವೆ.