ಕೆಎನ್ಎನ್ಡಿಜಿಟಲ್ಡೆಸ್ಕ್: ರಾಷ್ಟ್ರಕವಿ ಕುವೆಂಪು ವಿರಚಿತ ಜಯ ಭಾರತ ಜನನಿಯ ತನುಜಾತೆ| ಜಯ ಹೇ ಕರ್ನಾಟಕ ಮಾತೆ ಗೀತೆಯನ್ನು 2004ರಲ್ಲಿ ಕುವೆಂಪು ಜನ್ಮ ಶತಮಾನೋತ್ಸವದ ಸಮಯದಲ್ಲಿ ಕರ್ನಾಟಕ ಸರ್ಕಾರ ಈ ಗೀತೆಯನ್ನು ಅಧಿಕೃತ ನಾಡ ಗೀತೆಯನ್ನಾಗಿ ಮಾಡಲು ನಿರ್ಧರಿಸಿತು. ಅಂದ ಹಾಗೇ ಕನ್ನಡದ ಮೊದಲ ನಾಡಗೀತೆ ‘ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು’ ಗೀತೆ ರಚಿಸಿ ಕರ್ನಾಟಕದ ಏಕೀಕರಣ ಚಳವಳಿಗೆ ಮತ್ತಷ್ಟು ಸ್ಫೂರ್ತಿ ತುಂಬಿದ ಹುಯಿಲಗೋಳ ನಾರಾಯಣರಾವ್ ಅವರು ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಹಾಡನ್ನು ” ಬೆಳಗಾವಿಯಲ್ಲಿ ಜರುಗಿದ ಕಾಂಗ್ರೆಸ್ ಅಧಿವೇಶನದಲ್ಲಿ ಸ್ವಾಗತಗೀತೆಯಾಗಿ ಹಾಡಲಾಗಿತ್ತು. ಆಗ ಬಾಲಕಿಯಾಗಿದ್ದ ಗಂಗೂಬಾಯಿ ಹಾನಗಲ್ ಅವರು ಹಾಡಿದ್ದರು.
ಸದ್ಯ ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ ಜೈ ಭಾರತ ಜನನಿಯ ತನುಜಾತೆ..ಗೆ ಮೈಸೂರು ಅನಂತಸ್ವಾಮಿ ಸ್ವರ ಸಂಯೋಜನೆಯ ಧಾಟಿ ಹಾಗೂ ಗಾಯನಕ್ಕೆ 2.30 ನಿಮಿಷ ಕಾಲಮಿತಿ ನಿಗದಿಪಡಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಈ ಕುರಿತು ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಮಹೇಶ್ ಆರ್ ಆದೇಶ ಹೊರಡಿಸಿದ್ದು, ನಾಡಗೀತೆಯನ್ನು ಹಾಡಲುಮೈಸೂರು ಅನಂತಸ್ವಾಮಿ ಅವರ ಧಾಟಿಯನ್ನು ಅಳವಡಿಸಿಕೊಂಡು ನಾಡಗೀತೆಯ ಪೂರ್ಣಪಾಠವನ್ನು ಬಳಸಬೇಕು ಹಾಗೂ ಯಾವುದೇ ಆಲಾಪವಿಲ್ಲದೇ , ಪುನರಾವರ್ತನೇ ಇಲ್ಲದೇ ಎರಡು ನಿಮಿಷ ಮೂವತ್ತು ಸೆಕೆಂಡುಗಳಲ್ಲಿ ( 2.30 ನಿಮಿಷಗಳಲ್ಲಿ ) ಹಾಡಲು ಆದೇಶಿಸಿದೆ.
ರಾಜ್ಯಾದ್ಯಂತ ನಿರ್ಧಿಷ್ಟ ಧಾಟಿಯಲ್ಲಿ ಸೀಮಿತವಧಿಯಲ್ಲಿ ಜನಸಾಮಾನ್ಯರೂ ಕೂಡ ಹಾಡಲು ಅನುಕೂಲವಾಗುವಂತೆ ಪರಿಶೀಲಿಸಲು, ಸಾಹಿತಿಗಳು ಹಾಗೂ ಸುಗಮ ಸಂಗೀತ ಕ್ಷೇತ್ರದ ಕಲಾವಿದರನ್ನೊಳಗೊಂಡಂತೆ , ಪ್ರಸಿದ್ದ ಗಾಯಕಿ ವಿದ್ವಾನ್ ಹೆಚ್ ಆರ್ ಲೀಲಾವತಿ ಇವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿರುತ್ತದೆ.
ಅಂತೆಯೇ ನಾಡಗೀತೆ ಹಾಡುವಾಗ ಅನುಸರಿಸಬೇಕಾದ ರಾಗ ಸಂಯೋಜನೆಯ ಧಾಟಿ ಹಾಗೂ ಕಾಲಾವಧಿಯನ್ನು ನಿರ್ಧರಿಸಿ ಸದರಿ ಸಮಿತಿಯು ದಿನಾಂಕ 16:09:2021 ರಂದು ವರದಿ ಸಲ್ಲಿಸಿರುತ್ತದೆ. ಅದರಂತೆ ಸದರಿ ಪ್ರಸ್ತಾವನೆ ಪರಿಶೀಲಿಸಿದ ಸರ್ಕಾರ ಈ ಆದೇಶ ಹೊರಡಿಸಿದೆ.