ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಮಾಡಿದ್ದು, ಈ ಪೈಕಿ ಇಂದು ಮಹದೇವಪುರ ವಿಭಾಗದ ಹೂಡಿ, ಟಿಝಡ್ ಅಪಾರ್ಟ್ಮ್ಂಟ್ ಹಾಗೂ ಕೆ.ಆರ್.ಪುರ ವಿಭಾಗದ ಗಾಯತ್ರಿ ಲೇಔಟ್ ನಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗಿದೆ.
ಮಹದೇವಪುರ ವಿಭಾಗ
ಮಹದೇವಪುರ ವಿಭಾಗ ವೈಟ್ ಫೀಲ್ಡ್ ಉಪ ವಿಭಾಗದಲ್ಲಿ ಬರುವ ಟಿ.ಝಡ್ ಅಪಾರ್ಟ್ಮ್ಂಟ್ ನ 70 ಮೀಟರ್ ಉದ್ದದ ಕಾಂಪೌಂಡ್ ಗೋಡೆ ಹಾಗೂ ಭದ್ರತಾ ಸಿಬ್ಬಂದಿಯ ಕೊಠಡಿಯನ್ನು ತೆರವುಗೊಳಿಸಲಾಗಿದೆ.
ಹೂಡಿ ಉಪ ವಿಭಾಗದ ದಿಯಾ ಸ್ಕೂಲ್ ಕಾಂಪೌಂಡ್ ಗೋಡೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಾಗಿದ್ದ ಮಳೆ ನೀರುಗಾಲುವೆಯ ತೆರವು ಕಾರ್ಯಾಚರಣೆಯನ್ನು ನಡೆಸಲಾಗಿದೆ. ಅದರಂತೆ, ದಿಯಾ ಸ್ಕೂಲ್ ನ 25 ಮೀಟರ್ ಉದ್ದದ ಕಾಂಪೌಂಡ್ ಗೋಡೆ, ದಿಯಾ ಸ್ಕೂಲ್ ನ ಹತ್ತಿರವಿದ್ದ 3 ಶೆಡ್(1 ಫಿಶ್ ಸ್ಟಾಲ್, 2 ಗ್ಯಾರೇಜ್ ಶೆಡ್)ಗಳ ಮುಂಭಾಗದ ಗೋಡೆಯ ಭಾಗವನ್ನು ತೆರವುಗೊಳಿಸಲಾಗಿದೆ.
ಮುಂದಿನ ಲೋಕಸಭಾ, ವಿಧಾನಸಭಾ ಚುನಾವಣೆಯಲ್ಲಿ ‘ಕಾಂಗ್ರೆಸ್ ಪಕ್ಷ’ ಅಡ್ರೆಸ್ ಗೆ ಇರೋದಿಲ್ಲ – ಯಡಿಯೂರಪ್ಪ
ವೈಟ್ ಫೀಲ್ಡ್ ರಿಂಗ್ ರಸ್ತೆ ಬದಿಯಿರುವ ಬಗಿನಿ ಹೋಟೆಲ್ ಮುಂಭಾಗದ ರಾಜಣ್ಣ ಗೌಡ್ರು ಹೋಟೆಲ್ 8 X 15 ಮೀಟರ್ ನ ಗೋಡೆಯನ್ನು ತೆರವುಗೊಳಿಸಲಾಗಿದೆ. ಇನ್ನು ಬಗಿನಿ ಹೋಟೆಲ್ ನಿಂದಲೂ ಒತ್ತುವರಿಯಾಗಿದ್ದು, ಒತ್ತುವರಿಯ ಭಾಗದಲ್ಲಿ ಗ್ಲಾಸ್ ಅಳವಡಿಸಿದ್ದು, ಬಗಿನಿ ಹೋಟೆಲ್ ನವರೇ ಸ್ವತಹ ತೆರವುಗೊಳಿಸುವುದಾಗಿ ತಿಳಿಸಿರುತ್ತಾರೆ. ಈ ಸಂಬAಧ ಕೂಡಲೆ ತೆರವುಗೊಳಿಸಲು ಹೋಟೆಲ್ ಮಾಲೀಕರಿಗೆ ಅಧಿಕಾರಿಗಳು ಸೂಚನೆ ನೀಡಿರುತ್ತಾರೆ. ವೈಟ್ ಫೀಲ್ಡ್ ರಿಂಗ್ ರಸ್ತೆಯ ಮತ್ತೊಂದು ಭಾಗದಲ್ಲಿ ಸುಮಾರು 20 ಅಡಿ ಜಾಗದಲ್ಲಿದ್ದು ಶೀಟಿನ 2 ಶೆಡ್ ಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ.
ಕೆ.ಆರ್.ಪುರ ವಿಭಾಗ
ಕೆ.ಆರ್.ಪುರ ವಿಭಾಗ ಬಸವನಪುರ ವಾರ್ಡ್ ಗಾಯಿತ್ರಿ ಲೇಔಟ್ ನಲ್ಲಿ ಇಂದು ಕೂಡಾ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಮುಂದುವರಿಸಲಾಗಿದ್ದು, ಸುಮಾರು 60 ಮೀಟರ್ ಉದ್ದದ ನೀರು ಗಾಲುವೆಯ ಸ್ಥಳದಲ್ಲಿ ನಿರ್ಮಿಸಿದ್ದ 6 ಆರ್.ಸಿ.ಸಿ ವಸತಿ ಕಟ್ಟಡಗಳ ಗೋಡೆ ಭಾಗ ಹಾಗೂ ಕಾಂಪೌಂಡ್ ಗೋಡೆಯನ್ನು ತೆರವುಗೊಳಿಸಲಾಗಿದೆ.
ಮೊದಲಿಗೆ, 3 ಅಂತಸ್ತಿನ ವಸತಿ ಕಟ್ಟಡ(G + 3)ದ ನೆಲಮಹಡಿಯ ಗೋಡೆ ಭಾಗ ಹಾಗೂ ಕಾಂಪೌಂಡ್ ಗೋಡೆಯನ್ನು ತೆರವುಗೊಳಿಸಲಾಗಿದ್ದು, ಉಳಿದ ಮೇಲ್ಬಾಗದ ಗೋಡೆಯನ್ನು ಸಿಬ್ಬಂದಿಗಳ ಮೂಲಕ ತೆರವುಗೊಳಸಲಾಗುತ್ತದೆ. ಇನ್ನುಳಿದ 5 ವಸತಿ ಕಟ್ಟಡಗಳ ಗೋಡೆ ಭಾಗ ಹಾಗೂ ಕಾಂಪೌಂಡ್ ಗೋಡೆ ಭಾಗವನ್ನು ತೆರವುಗೊಳಿಸಲಾಗಿದೆ.
ತೆರವು ಕಾರ್ಯಾಚರಣೆಯ ವೇಳೆ ಪಾಲಿಕೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಮಾರ್ಷಲ್ಗಳು ಉಪಸ್ಥಿತರಿದ್ದರು.
BIGG NEWS : ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ರಾಹುಲ್ ಗಾಂಧಿ ಆಹ್ವಾನಿಸಿಲ್ಲ : ಗುಬ್ಬಿ ಶಾಸಕ ಶ್ರೀನಿವಾಸ್ ಸ್ಪಷ್ಟನೆ