ಕೆಎನ್ಎನ್ಡಿಜಿಟಲ್ ಡೆಸ್ಕ್ : ಭಾರತದಲ್ಲಿ ಅನೇಕ ದೇವಾಲಯಗಳಿದ್ದು, ದೇಶದಲ್ಲಿ ದೇವರನ್ನ ಆರಾಧಿಸುವವರ ಸಂಖ್ಯೆಯೂ ಅಧಿಕವಾಗಿದೆ. ಅಂತೆಯೇ, ದೇಶದಲ್ಲಿರುವ ವಿವಿಧ ದೇವಾಲಯಗಳಿಗೆ ವಿಶೇಷ ಸ್ಥಾನವಿದೆ. ಇನ್ನು ಇಲ್ಲಿರುವ ಹಿಂದೂ ದೇವಾಲಯಗಳ ಸಂಖ್ಯೆಯನ್ನ ಲೆಕ್ಕ ಹಾಕುವುದು ಕಷ್ಟ. ಯಾಕಂದ್ರೆ, ಸಂಖ್ಯೆ ಅಷ್ಟೊಂದಿದೆ. ಹೀಗಿದ್ರೂ ಜಗತ್ತಿನ ಅತಿ ದೊಡ್ಡ ಹಿಂದೂ ದೇವಾಲಯ ಭಾರತದಲ್ಲಿಲ್ಲ ಬದಲಾಗಿ ಕಾಂಬೋಡಿಯಾದ ಅಂಕೋರ್ ವಾಟ್’ನಲ್ಲಿದೆ. ಈ ದೇಗುಲದಲ್ಲಿ ವಿಷ್ಣುವನ್ನ ಪ್ರತಿಷ್ಠಾಪಿಸಲಾಗಿದೆ.
ಈ ದೇವಾಲಯವು ವಿಶ್ವದ ಅತಿದೊಡ್ಡ ಹಿಂದೂ ದೇವಾಲಯವಾಗಿದೆ. ಇತಿಹಾಸದ ಪ್ರಕಾರ, ಈ ದೇವಾಲಯವನ್ನ 12ನೇ ಶತಮಾನದಲ್ಲಿ ಸೂರ್ಯ ವರ್ಮ ಎಂಬ ರಾಜನು ನಿರ್ಮಿಸಿದ. ಈ ದೇವಾಲಯವನ್ನ ಹಿಂದೂ ವಾಸ್ತುಶೈಲಿಗಿಂತ ಹೆಚ್ಚಾಗಿ ಖಮೇರ್ ವಾಸ್ತುಶೈಲಿಯಲ್ಲಿ ನಿರ್ಮಿಸಲಾಗಿದ್ದು, ಆದ್ರೆ, ಶಿಲ್ಪಕಲಾ ಕೌಶಲ್ಯ ಹಿಂದೂ ಸಂಪ್ರದಾಯವಾಗಿದೆ. ದೇವಾಲಯದ ನಿರ್ಮಾಣದಲ್ಲಿ ತಮಿಳುನಾಡಿನ ದೇವಾಲಯಗಳ ಶೈಲಿಯನ್ನ ಅಲ್ಲೊಂದು ಇಲ್ಲೊಂದು ಕಡೆ ನೋಡಬಹುದು. ವಿಶಿಷ್ಟ್ಯ ಐತಿಹ್ಯ ಹೊಂದಿರುವ ಈ ದೇವಾಲಯವು ಬಹಳ ಪ್ರಭಾವಶಾಲಿಯಾಗಿದೆ.
ಭಗವಂತ ವಿಷ್ಣುವಿಗೆ ಸಮರ್ಪಿತವಾಗಿರುವ ಈ ದೇವಾಲಯವು 200 ಚದರ ಕಿ.ಮೀ ವಿಸ್ತೀರ್ಣದಲ್ಲಿ ಹರಡಿದ್ದು, ದೇಗುಲ ನಿರ್ಮಿಸಲು ಸುಮಾರು 30 ವರ್ಷಗಳು ಬೇಕಾಯಿತು ಎಂದು ಹೇಳಲಾಗುತ್ತದೆ. ಇನ್ನು ನೀವು ನೀರು ಮೇಲಿನಿಂದ ಕೆಳಕ್ಕೆ ಹರಿಯುವುದನ್ನ ನೋಡಿರ್ತಿರಿ. ಆದ್ರೆ, ಇಲ್ಲಿ ವಿಶೇಷ ಅನ್ನುವಂತೆ ನೀರು ತಳದಿಂದ ಮೇಲಕ್ಕೆ ಹರಿಯುತ್ತದೆ. ಅದಕ್ಕೆ ಕಾರಣವೇನು ಅನ್ನೋ ಸಂಗತಿಯನ್ನ ಇದುವರೆಗೂ ಯಾರಿಂದ್ಲೂ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಇನ್ನು ಈ ದೇವಾಲಯವು ಕಾಂಬೋಡಿಯಾದ ರಾಷ್ಟ್ರಧ್ವಜದಲ್ಲಿ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ.
ಮೇರು ಪರ್ವತವನ್ನ ನೆನಪಿಸುತ್ತೆ.!
ಏತನ್ಮಧ್ಯೆ, ಹಿಂದೂ ಪುರಾಣಗಳಲ್ಲಿ ಉಲ್ಲೇಖಿಸಲಾದ ಮೇರು ಪರ್ವತವನ್ನ ಹೋಲುವ ರೀತಿಯಲ್ಲಿ ಅಂಕೋರ್ ವಾಟ್ ದೇವಾಲಯವನ್ನ ನಿರ್ಮಿಸಲಾಗಿದೆ. ಹಿಮಾಲಯದ ಆಚೆಗಿನ ಮೇರು ಪರ್ವತವು ದೇವತೆಗಳ ವಾಸಸ್ಥಾನವೆಂದು ಪುರಾಣಗಳು ಹೇಳುತ್ತವೆ. ಅದ್ರಂತೆ, ಈ ವಿಷ್ಣು ದೇಗುಲ ಮಧ್ಯದಲ್ಲಿ 213 ಅಡಿ (65 ಮೀ) ಎತ್ತರದ ಗೋಪುರವನ್ನ ಹೊಂದಿದೆ ಮತ್ತು ನಾಲ್ಕು ಕಡೆಗಳಲ್ಲಿ ನಾಲ್ಕು ಚಿಕ್ಕ ಗೋಪುರಗಳನ್ನ ಹೊಂದಿದೆ. ಮುಖ್ಯ ದೇವಾಲಯದ ಸುತ್ತಲೂ ಅನೇಕ ಸಣ್ಣ ದೇವಾಲಯಗಳಿವೆ.
ಈ ದೇವಾಲಯದ ಮತ್ತೊಂದು ವಿಶೇಷತೆಯೆಂದ್ರೆ, ದೇವಾಲಯದ ಸುತ್ತಲೂ ದೊಡ್ಡ ನೀರಿನ ಕಂದಕವಿದೆ. ದೇವಾಲಯದ ಸುತ್ತಲಿನ ಕಂದಕವು 650 ಅಡಿ (200 ಮೀಟರ್) ಅಗಲ ಮತ್ತು 13 ಅಡಿ (ನಾಲ್ಕು ಮೀಟರ್) ಆಳವಾಗಿದೆ ಮತ್ತು ಯಾವಾಗಲೂ ನೀರಿನಿಂದ ತುಂಬಿರುತ್ತದೆ. ಇದರ ಒಟ್ಟು ಸುತ್ತಳತೆ ಐದು ಕಿಲೋಮೀಟರ್ಗಳಿಗಿಂತ ಹೆಚ್ಚು ಎಂಬುದು ಗಮನಾರ್ಹ.
ದೇವಾಲಯದ ಪ್ರವೇಶ ಮಾರ್ಗಗಳು.!
ದೇವಾಲಯವು ಪಶ್ಚಿಮ ಮತ್ತು ಪೂರ್ವ ದಿಕ್ಕುಗಳಲ್ಲಿ ಪ್ರವೇಶದ್ವಾರಗಳನ್ನ ಹೊಂದಿದೆ. ಪ್ರವೇಶದ್ವಾರದಲ್ಲಿ ರಾಜಗೋಪುರಗಳನ್ನ ಸ್ಥಾಪಿಸಲಾಗಿದ್ದು, ಪಶ್ಚಿಮ ದ್ವಾರವನ್ನ ಮುಖ್ಯ ದ್ವಾರವೆಂದು ಪರಿಗಣಿಸಲಾಗುತ್ತದೆ. ಈ ದ್ವಾರದ ಎರಡೂ ಬದಿಗಳಲ್ಲಿ ಸಿಂಹಗಳ ಭವ್ಯವಾದ ಶಿಲ್ಪಗಳಿವೆ. ಮಹಾದ್ವಾರದಿಂದ ಮುಖ್ಯ ದೇವಾಲಯದವರೆಗೆನ ಮಾರ್ಗವನ್ನ ಕಲ್ಲಿನಿಂದ ನಿರ್ಮಿಸಲಾಗಿದೆ. ದೇವಾಲಯದ ಗೋಡೆಯೊಳಗೆ ಅನೇಕ ನೀರಿನ ಕೊಳಗಳಿವೆ ಎಂಬುದು ಗಮನಾರ್. ದೇಗುಲದ ಪಕ್ಕದಲ್ಲಿ, ಸಂಶೋಧಕರು 12ನೇ ಶತಮಾನದಷ್ಟು ಹಿಂದಿನ ದೊಡ್ಡ ಮರಳುಗಲ್ಲಿನ ರಚನೆಯನ್ನ ಗುರುತಿಸಿದ್ದಾರೆ. ವೃತ್ತಾಕಾರದ ರಚನೆ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
‘ಆಹಾರ ರುಚಿಯಾಗಿತ್ತು, ನಾನೇ ತಿಂದೆ ಕ್ಷಮಿಸಿ’ : ಆರ್ಡರ್ ಮಾಡಿದ ವ್ಯಕ್ತಿಗೆ ಮೆಸೇಜ್ ಮಾಡಿದ ಡೆಲಿವರಿ ಬಾಯ್ !!
ಚಂದ್ರು ಎಲ್ಲಿದ್ದೀಯ ಬಾರೋ: ಅಣ್ಣನ ಮಗನನ್ನು ನೆನೆದು ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ‘ಶಾಸಕ ಎಂ.ಪಿ ರೇಣುಕಾಚಾರ್ಯ’