ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ಬಸ್ ಟಿಕೆಟ್ ದರವನ್ನು ಶೇ.15ರಷ್ಟು ಹೆಚ್ಚಳಕ್ಕೆ ಸಚಿವ ಸಂಪುಟ ಅನುಮೋದಿಸಿದೆ. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಏನು ಹೇಳಿದ್ರು ಅಂತ ಮುಂದೆ ಓದಿ.
ಈ ಕುರಿತಂತೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸುದ್ದಿಗಾರರೊಂದಿಗೆ ಮಾತನಾಡಿ, ಟಿಕೆಟ್ ದರ ಏರಿಸೋದಕ್ಕೆ ಬಿಎಂಟಿಸಿಯಲ್ಲಿ 2014ರಲ್ಲಿ ದರ ಏರಿಸಿದ್ದು. ಅವತ್ತು ಕೇವಲ 30 ರೂಪಾಯಿ ಡಿಸೇಲ್ ಇತ್ತು. 2020ರಲ್ಲಿ ವಾಯವ್ಯ, ಕಲ್ಯಾಣ ಕರ್ನಾಟಕ ಕೆಎಸ್ ಆರ್ ಟಿಸಿ ದರ ಏರಿಸಲಾಗಿತ್ತು. 2020ರಲ್ಲಿ ಪ್ರತಿದಿನ ಡಿಸೇಲ್ 9.16 ಕೋಟಿ ಖರ್ಚು ಮಾಡ್ತಿದ್ವು. ಈಗ 13 ಕೋಟಿ 21 ಲಕ್ಷ ಖರ್ಚಾಗುತ್ತಿದೆ. ಈ ಮೂಲಕ ಒಂದು ದಿನಕ್ಕೆ 10 ಕೋಟಿ ನಮಗೆ ಖರ್ಚಾಗುತ್ತಿದೆ ಎಂದರು.
ನಾಲ್ಕು ವಿಭಾಗಗಳಿಂದಲೂ ದರ ಹೆಚ್ಚಳದ ಬಗ್ಗೆ ಕಳೆದ ಐದಾರು ತಿಂಗಳಿಂದ ಪ್ರಸ್ತಾಪ ಬಂದಿತ್ತು. ಈಗ ಶೇ.15 ಒಪ್ಪಿಗೆ ಸಿಕ್ಕಿದೆ. ಒಂದು ಸಾವಿರ ಕೋಟಿ ಬರಬಹುದು. ಆದ್ರೆ ನಷ್ಟದ ಪ್ರಮಾಣ ಕಡಿಮೆ ಆಗುತ್ತೆ. ಬಿಜೆಪಿ ಸರ್ಕಾರ 5900 ಕೋಟಿ ಸಾಲ ಬಿಟ್ಟು ಹೋಗಿದ್ದಾರೆ. ಅಷ್ಟು ಸಾಲ ನಮಗೆ ಹೊರೆಯಾಗಿದೆ. ದರ ಹೆಚ್ಚಿಸೋದು ಅನಿವಾರ್ಯ ಆಗಿದೆ ಎಂದು ಹೇಳಿದರು.
ಬಿಜೆಪಿಯವರು ಯಾಕೆ ಸಾಲ ಉಳಿಸಿದ್ದಾರೆ? ಒಂದು ದಿನಕ್ಕೆ 18 ಕೋಟಿ ಸಂಬಳ ಕೊಡೊದಕ್ಕೆ ಬೇಕು. ಪ್ರಧಾನಿ ನರೇಂದ್ರ ಮೋದಿ ಡಿಸೇಲ್ ದರ ಕಡಿಮೆ ಮಾಡಿದ್ರೆ ಹಳೆಯದನ್ನೆ ಮುಂದುವರೆಸೆಸುತ್ತಿದ್ವಿ. ಗ್ಯಾರಂಟಿ ಯೋಜನೆಗಳಿಗೂ ಇದಕ್ಕು ಸಂಬಂಧ ಇಲ್ಲ. ಬಜೆಟ್ ನಲ್ಲಿ ಹಣ ಇಟ್ಟಿದ್ದಾರೆ. ನಾವೀಗ ನೌಕರರಿಗೆ ತಿಂಗಳು ತಿಂಗಳು ಸಂಬಳ ಕೊಡ್ತಿದ್ದೇವೆ. ಸಂಸ್ಥೆ ಉಳಿಸೋದಕ್ಕೆ ಬೆಲೆ ಏರಿಕೆ ಅನಿವಾರ್ಯವಾಗಿದೆ. ಆದಾಯ ಜಾಸ್ತಿ ಮಾಡಿಕೊಳ್ಳಬೇಕು ಇಲ್ಲಾ ಅಂದ್ರೆ ಸಂಸ್ಥೆ ಮುಳುಗಿ ಹೋಗುತ್ತೆ. ಅದಕ್ಕಾಗಿ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಿ ಸಾರಿಗೆ ಬಸ್ಸುಗಳ ಟಿಕೆಟ್ ದರ ಶೇ.15ರಷ್ಟು ಹೆಚ್ಚಳಕ್ಕೆ ಅನುಮೋದಿಸಲಾಗಿದೆ ಎಂದರು.
Crime News: ಸೈಬರ್ ಕ್ರೈಂ ಪೊಲೀಸ್ ಪೇದೆಗೆ ‘ಹನಿಟ್ರ್ಯಾಪ್’, ಪತ್ನಿಯಿಂದ ಲಕ್ಷ ಲಕ್ಷ ಪೀಕಿದ ವಂಚಕರು
ಬಾಹ್ಯಾಕಾಶದಿಂದ ಸ್ಮಾರ್ಟ್ ಫೋನ್ ಮೂಲಕ ‘ಧ್ವನಿ ಕರೆ’ ಸಕ್ರಿಯಕ್ಕೆ ಇಸ್ರೋದಿಂದ ‘ಯುಎಸ್ ಉಪಗ್ರಹ’ ಉಡಾವಣೆ