ವಿಧಾನಪರಿಷತ್ : ನಗರದ ಸಿಗ್ನಲ್ ಗಳಲ್ಲಿ ಭಿಕ್ಷುಕರ ಹಾವಳಿ ಹೆಚ್ಚಾಗಿದೆ. ಈ ವಿಚಾರವಾಗಿ ಉತ್ತರಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ; ಇನ್ನು ಎರಡು ಮೂರು ತಿಂಗಳಲ್ಲಿ ಸಮಸ್ಯೆ ಬಗೆಹರಿಸಲಾಗುತ್ತಿದೆ ಎಂದರು.
ವಿಧಾನಪರಿಷತ್ ಕಲಾಪದಲ್ಲಿ ದೇವೇಗೌಡ ಅವರು ಈ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಈ ಪ್ರಶ್ನಾವಳಿಗೆ ಉತ್ತರಿಸಿದ ಅವರು, ಬಿಕ್ಷುಕರ ಹಾವಳಿ ಹೆಚ್ಚಾಗಿರುವುದನ್ನು ಸಚಿವರು ಒಪ್ಪಿದ್ದಾರೆ.
BIGG NEWS: ಬಿಎಸ್ ವೈ ವಿರುದ್ಧ ಸೂಕ್ತ ತನಿಖೆಯಾಗಲಿ; ಸತ್ಯಾಂಶ ಹೊರಬರಬೇಕು- ಸಂತೋಷ್ ಹೆಗ್ಡೆ
ಈ ಕುರಿತು ಕ್ರಮ ಕೈಗೊಂಡಿವುದನ್ನು ವಿವರಸಿರುವ ಅವರು, ಕರ್ನಾಟಕ ಭಿಕ್ಷಾಟನೆ ನಿಷೇಧ ಅಧಿನಿಯಮ 1975 ರ ಪ್ರಕಾರ ಭಿಕ್ಷಾಟನೆ ನಿಷೇಧ ಮಾಡಲಾಗಿತ್ತು. ಭಿಕ್ಷಾಟನೆಯಲ್ಲಿ ತೊಡಗಿರುವ 18 ವರ್ಷ ಮೇಲ್ಪಟ್ಟ ಮಹಿಳೆಯರು ಹಾಗೂ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪುರುಷರನ್ನು ಬಂಧಿಸಲು ಅವಕಾಶವಿಲ್ಲ. ಆದರೆ ಅಂಥವರನ್ನು ಮಹಿಳಾ ಮತ್ತು ಮಕ್ಕಳ ಹಿತರಕ್ಷಣಾ ಸಮಿತಿಗೆ ಒಪ್ಪಿಸಲಾಗುತ್ತದೆ.
ಇನ್ನು ಒಂದು ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷೆ ಬೇಡುತ್ತಿರುವುದು ಕಂಡು ಬಂದರೆ ಸಾರ್ವಜನಿಕರು 10581 ಅಥವಾ 9482300400 ನಂಬರ್ ಗೆ ಕರೆ ಮಾಡಬಹುದು. ಈಗಾಗಲೇ ಭಿಕ್ಷಾಟನೆ ಮಾಡುತ್ತಿರುವವರನ್ನು ಬಂಧಿಸಲು ಹಾಗೂ ರಕ್ಷಿಸಲು ೮ ಟಾಸ್ಕ್ ಪೋರ್ಸ್ ರಚನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ರು.