Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಲೇಖನಿಯನ್ನೇ ಶಕ್ತಿಯಾಗಿಸಿಕೊಂಡಿದ್ದ ಪತ್ರಕರ್ತ, ಸಾಮಾಜಿಕ ಹೋರಾಟಗಾರ ಓಂಕಾರ್ ಎಸ್ ವಿ ತಾಳಗುಪ್ಪ ವಿಧಿವಶ

15/04/2026 9:44 AM

US ಜೊತೆಗಿನ ಮಾಲ್ಡೀವ್ಸ್ ಸಂಬಂಧ ಬಿರುಕು:ಅಮೆರಿಕ ರಾಯಭಾರಿ ಜೊತೆಗಿನ ಮುಯಿಝು ಭೇಟಿ ಕೊನೆ ಕ್ಷಣದಲ್ಲಿ ರದ್ದು!

15/04/2026 9:43 AM

SHOCKING : ಚಿಕಿತ್ಸೆಯ ಹೆಸರಿನಲ್ಲಿ ಮಾರಕ ಇಂಜೆಕ್ಷನ್: ಒಂದೇ ಆಸ್ಪತ್ರೆ ಸೂಜಿಯಿಂದ 331 ಮುಗ್ಧ ಮಕ್ಕಳಿಗೆ `HIV’ ಪಾಸಿಟಿವ್!

15/04/2026 9:43 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಳಗಾವಿ ಸುವರ್ಣ ವಿಧಾನಸೌಧ ಸಭಾಧ್ಯಕ್ಷರ ನೂತನ ಪೀಠದ ವಿಶೇಷತೆ ಏನುಗೊತ್ತಾ? ಇಲ್ಲಿದೆ ಮಾಹಿತಿ
KARNATAKA

ಬೆಳಗಾವಿ ಸುವರ್ಣ ವಿಧಾನಸೌಧ ಸಭಾಧ್ಯಕ್ಷರ ನೂತನ ಪೀಠದ ವಿಶೇಷತೆ ಏನುಗೊತ್ತಾ? ಇಲ್ಲಿದೆ ಮಾಹಿತಿ

By kannadanewsnow0909/12/2024 3:37 PM

ಬೆಳಗಾವಿ ಸುವರ್ಣಸೌಧ : ಸಂವಿಧಾನದಲ್ಲಿ ಸದನಕ್ಕೆ ಬಹಳ ಉನ್ನತ ಸ್ಥಾನವನ್ನು ನೀಡಲಾಗಿದೆ. ಅಂತಹ ಸದನವನ್ನು ಮುನ್ನಡೆಸುವ ಜವಾಬ್ದಾರಿ ಹೊಂದಿರುವ ಸಭಾಧ್ಯಕ್ಷರ ಹುದ್ದೆ ಸಹ ಒಂದು ಸಂವಿಧಾನಾತ್ಮಕ ಹುದ್ದೆಯಾಗಿದೆ. ಅಂತಹ ಹುದ್ದೆ ಅಲಂಕರಿಸುವ ಸಭಾಧ್ಯಕ್ಷರು ಆಸೀನರಾಗುವ ಪೀಠ ಸಹ ಅಷ್ಟೇ ಪ್ರಾಮುಖ್ಯತೆ ಹೊಂದಿರಬೇಕು ಎಂಬ ಉದ್ದೇಶದಿಂದ ಬೆಂಗಳೂರಿನ ವಿಧಾನಸೌಧದ ಪೀಠದ ಮಾದರಿಯಲ್ಲಿಯೇ ಬೆಳಗಾವಿಯಲ್ಲಿನ ಸುವರ್ಣ ವಿಧಾನಸೌಧದಲ್ಲಿನ ವಿಧಾನಸಭೆಯ ಸಭಾಂಗಣದಲ್ಲಿರುವ ಸಭಾಧ್ಯಕ್ಷರ ಪೀಠವನ್ನು ತಯಾರಿಸಿ ಅಳವಡಿಸಲಾಗಿದೆ ಎಂದು ವಿಧಾನಸಭೆ ಸಭಾಧ್ಯಕ್ಷ ಯು.ಟಿ ಖಾದರ್ ಅವರು ಬಣ್ಣಿಸಿದರು.

ವಿಧಾನಸೌಧವನ್ನು ಕಟ್ಟಿಸಿದ ದಿ. ಕೆಂಗಲ್ ಹನುಮಂತಯ್ಯನವರು ಸಭಾಧ್ಯಕ್ಷ ಪೀಠದ ಬಗ್ಗೆ ಒಂದು ಮಹೋನ್ನತ ಪರಿಕಲ್ಪನೆ ಹೊಂದಿದ್ದರು. ಈ ಪೀಠವನ್ನು ವಿಶಿಷ್ಟವಾಗಿ ರೂಪಿಸಬೇಕೆಂದು ಅವರು ಯೋಜಿಸಿದ್ದರು, ಅದರಂತೆ ಅವರು ನಮ್ಮ ಇತಿಹಾಸದಲ್ಲಿ ರಾಜ್ಯವನ್ನು ಬಹಳ ಕಾಲ ಉತ್ತಮವಾಗಿ ಆಡಳಿತ ನಡೆಸಿದ ರಾಷ್ಟçಕೂಟರು ಹಾಗೂ ಹೊಯ್ಸಳರು ಹೊಂದಿದ್ದ ರಾಷ್ಟ್ರ ಲಾಂಛನಗಳನ್ನು ಅದರಲ್ಲಿ ಅಳವಡಿಸಿಕೊಳ್ಳಬೇಕೆಂಬ ಚಿಂತನೆ ನಡೆಸಿ, ಈ ಉದ್ದೇಶಕ್ಕಾಗಿಯೇ ಶಿವಮೊಗ್ಗದಲ್ಲಿ ಲಭ್ಯವಿದ್ದ ಉತ್ತಮ ಗುಣಮಟ್ಟದ ಬೀಟೆ ಮರ ಆಯ್ಕೆ ಮಾಡಿ, ಅಲ್ಲಿನ ಗುಡಿಗಾರರಿಗೆ ತಮ್ಮ ಕನಸಿನ ಚಿಂತನೆಗಳನ್ನು ವಿವರಿಸಿ, ಅದೇ ರೀತಿಯಲ್ಲಿಯೇ ಪೀಠ ಮೂಡಿಬರುವಂತೆ ಮುತುವರ್ಜಿ ವಹಿಸಿದ್ದರು. ರಾಷ್ಟçಕೂಟರು ಹೊಂದಿದ್ದ ಗಂಡಭೇರುಂಡ ಚಿಹ್ನೆಯನ್ನು ಪೀಠದಲ್ಲಿ ಅಳವಡಿಸಿದ್ದರು. ಗಂಡಭೇರುಂಡ ಚಿಹ್ನೆಯನ್ನು ರಾಷ್ಟçಕೂಟರು ತಮ್ಮ ಅಧಿಕಾರ ಹಾಗೂ ಶಕ್ತಿ ಸಾಮರ್ಥ್ಯದ ಪ್ರತೀಕವಾಗಿ ಹಾಗೂ ದೈವಿಕ ರಕ್ಷಣೆ ಹೊಂದಿರುವ ಪ್ರತೀಕವಾಗಿ ಉಪಯೋಸಿದ್ದರು. ಅದೇ ಲಾಂಛನವನ್ನು ಈ ಪೀಠದಲ್ಲಿ ಅದರ ಪ್ರತಿರೂಪವಾಗಿ ಕೆತ್ತಲಾಗಿದೆ.

ವಿಶಾಲವಾದ ಸಾಮ್ರಾಜ್ಯವನ್ನು ಹೊಂದಿದ್ದ ಹಾಗೂ ಬಹುಕಾಲ ಉತ್ತಮವಾಗಿ ಆಳಿದ ಹೊಯ್ಸಳರು ಸಹ ಶರಭ ಅಂದರೆ ಸಿಂಹದ ಲಾಂಛನ ಹೊಂದಿದ್ದರು. ಸಿಂಹವು ಶೌರ್ಯದ ಪ್ರತೀಕವಾಗಿದ್ದು, ಅದನ್ನೂ ಸಹ ಪೀಠದ ಎರಡೂ ಬದಿಗಳಲ್ಲಿ ಕೆತ್ತಲಾಗಿದೆ. ಅದೇ ರೀತಿ ಪೀಠದ ಮೇಲ್ಭಾಗದಲ್ಲಿ ಸೂರ್ಯಕಾಂತಿ ಹೂವಿನ ಚಿತ್ತಾರವನ್ನು ಕೆತ್ತಲಾಗಿದ್ದು, ಇದು ಸಭಾಧ್ಯಕ್ಷರಿಗೆ ಒಂದು ರೀತಿಯ ಮೇಲ್ಛಾವಣಿಯಂತೆ ರೂಪಿಸಲಾಗಿದೆ. ಪೀಠದ ಮುಂಭಾಗದ ಮೇಲೆ ಸೂರ್ಯ ಮತ್ತು ಚಂದ್ರರ ಚಿಹ್ನೆಗಳನ್ನು ಕೆತ್ತಲಾಗಿದ್ದು, ಸೂರ್ಯ ಮತ್ತು ಚಂದ್ರರ ಚಿಹ್ನೆಯ ಅಮರತ್ವವನ್ನು ಪ್ರತಿರೂಪಿಸುವಂತಹ ಚಿಹ್ನೆಯನ್ನು ಕೆತ್ತಲಾಗಿದೆ. ಪೀಠದ ಮೇಲ್ಭಾಗದ ಎರಡೂ ಬದಿಗಳಲ್ಲಿ ಮಾವಿನ ಕಾಯಿ ರೂಪವನ್ನು ಕೆತ್ತಲಾಗಿದ್ದು, ನಮ್ಮ ದೇಶದಲ್ಲಿ ಮಾವಿನ ಕಾಯಿಗೆ ವೈಜ್ಞಾನಿಕ ಹಾಗೂ ಧಾಮಿಕವಾಗಿ ಬಹಳ ಪ್ರಾಮುಖ್ಯತೆ ನೀಡಲಾಗಿದೆ. ಮಾವಿನ ಕಾಯಿ ಬೆಳವಣಿಗೆಯ ದ್ಯೋತಕವಾಗಿದ್ದು, ಈ ಹಿನ್ನೆಲೆಯಲ್ಲಿ ಮಾವಿನ ಕಾಯಿ ಪ್ರತಿರೂಪವನ್ನು ಕೆತ್ತಲಾಗಿದೆ.

ಹೀಗೆ ನಮ್ಮ ದೇಶದ ಇತಿಹಾಸ ಹಾಗೂ ಧಾರ್ಮಿಕತೆಯ ಚಿಹ್ನೆಗಳ ಮಿಶ್ರಣ ರೂಪದಲ್ಲಿರುವ ಈ ಕೆತ್ತನೆಗಳನ್ನು ಬೀಟೆ ಮರದಲ್ಲಿ ಬೆಂಗಳೂರಿನ ವಿಧಾನಸೌಧದ ಪೀಠವನ್ನು ತಯಾರಿಸಿ ಅಳವಡಿಸಲಾಗಿದ್ದು, ಇದೇ ಉದ್ದೇಶದಿಂದ ಬೆಳಗಾವಿಯಲ್ಲಿಯ ಸುವರ್ಣ ವಿಧಾನಸೌಧದಲ್ಲಿನ ವಿಧಾನಸಭೆ ಸಭಾಂಗಣದ ಸಭಾಧ್ಯಕ್ಷರ ಪೀಠವನ್ನು ತಯಾರಿಸಿ ನೂತನವಾಗಿ ಅಳವಡಿಸಲಾಗಿದೆ ಎಂದು ಸಭಾಧ್ಯಕ್ಷ ಯು.ಟಿ. ಖಾದರ್ ವಿವರಿಸಿದರು.

BREAKING: ಲೋಕಸಭೆ, ರಾಜ್ಯಸಭೆ ಕಲಾಪ ನಾಳೆಗೆ ಮುಂದೂಡಿಕೆ | Lok Sabha, Rajya Sabha adjourned

ಬೆಂಗಳೂರು ಜನತೆ ಗಮನಕ್ಕೆ: ನಾಳೆ ಈ ಏರಿಯಾಗಳಲ್ಲಿ ‘ಕರೆಂಟ್ ಇರಲ್ಲ’ | Power Cut

Share. Facebook Twitter LinkedIn WhatsApp Email

Related Posts

ಲೇಖನಿಯನ್ನೇ ಶಕ್ತಿಯಾಗಿಸಿಕೊಂಡಿದ್ದ ಪತ್ರಕರ್ತ, ಸಾಮಾಜಿಕ ಹೋರಾಟಗಾರ ಓಂಕಾರ್ ಎಸ್ ವಿ ತಾಳಗುಪ್ಪ ವಿಧಿವಶ

15/04/2026 9:44 AM2 Mins Read

ಬೆಂಗಳೂರಲ್ಲಿ ಹೃದಯ ವಿದ್ರಾವಕ ಘಟನೆ; 17 ವರ್ಷದ ಮಗಳನ್ನು ಕೊಂದು ತಾಯಿಯೂ ಆತ್ಮಹತ್ಯೆ

15/04/2026 9:27 AM1 Min Read

ALERT : ಒಂದು ಲೀಟರ್ `ಕೂಲ್ ಡ್ರಿಂಕ್ಸ್’ನಲ್ಲಿ ಎಷ್ಟು ಸಕ್ಕರೆ ಇರಲಿದೆ ಗೊತ್ತಾ? ಇಲ್ಲಿದೆ ಮಾಹಿತಿ

15/04/2026 9:13 AM2 Mins Read
Recent News

ಲೇಖನಿಯನ್ನೇ ಶಕ್ತಿಯಾಗಿಸಿಕೊಂಡಿದ್ದ ಪತ್ರಕರ್ತ, ಸಾಮಾಜಿಕ ಹೋರಾಟಗಾರ ಓಂಕಾರ್ ಎಸ್ ವಿ ತಾಳಗುಪ್ಪ ವಿಧಿವಶ

15/04/2026 9:44 AM

US ಜೊತೆಗಿನ ಮಾಲ್ಡೀವ್ಸ್ ಸಂಬಂಧ ಬಿರುಕು:ಅಮೆರಿಕ ರಾಯಭಾರಿ ಜೊತೆಗಿನ ಮುಯಿಝು ಭೇಟಿ ಕೊನೆ ಕ್ಷಣದಲ್ಲಿ ರದ್ದು!

15/04/2026 9:43 AM

SHOCKING : ಚಿಕಿತ್ಸೆಯ ಹೆಸರಿನಲ್ಲಿ ಮಾರಕ ಇಂಜೆಕ್ಷನ್: ಒಂದೇ ಆಸ್ಪತ್ರೆ ಸೂಜಿಯಿಂದ 331 ಮುಗ್ಧ ಮಕ್ಕಳಿಗೆ `HIV’ ಪಾಸಿಟಿವ್!

15/04/2026 9:43 AM

ಫಸ್ಟ್ ನೈಟ್ ನಲ್ಲೇ ಶಾಕ್ ಕೊಟ್ಟ ನವವಧು: ’90 ಲಕ್ಷ ಕೊಟ್ಟರೆ ಮಾತ್ರ ಮುಖ ತೋರಿಸುವೆ’ ಎಂದು ಪಟ್ಟು : ಪತಿಯ ಇಡೀ ಕುಟುಂಬವನ್ನೇ ಜೀವಂತ ದಹಿಸಲು ಯತ್ನ!

15/04/2026 9:34 AM
State News
KARNATAKA

ಲೇಖನಿಯನ್ನೇ ಶಕ್ತಿಯಾಗಿಸಿಕೊಂಡಿದ್ದ ಪತ್ರಕರ್ತ, ಸಾಮಾಜಿಕ ಹೋರಾಟಗಾರ ಓಂಕಾರ್ ಎಸ್ ವಿ ತಾಳಗುಪ್ಪ ವಿಧಿವಶ

By kannadanewsnow0915/04/2026 9:44 AM KARNATAKA 2 Mins Read

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ತಾಳಗುಪ್ಪದ ಮಣ್ಣಿನಲ್ಲಿ ಹುಟ್ಟಿ, ಅನ್ಯಾಯದ ವಿರುದ್ಧ ಗುಡುಗುತ್ತಿದ್ದ ಆ ಧ್ವನಿ ಇಂದು ಮೌನವಾಗಿದೆ. ಪತ್ರಕರ್ತರಾಗಿ,…

ಬೆಂಗಳೂರಲ್ಲಿ ಹೃದಯ ವಿದ್ರಾವಕ ಘಟನೆ; 17 ವರ್ಷದ ಮಗಳನ್ನು ಕೊಂದು ತಾಯಿಯೂ ಆತ್ಮಹತ್ಯೆ

15/04/2026 9:27 AM

ALERT : ಒಂದು ಲೀಟರ್ `ಕೂಲ್ ಡ್ರಿಂಕ್ಸ್’ನಲ್ಲಿ ಎಷ್ಟು ಸಕ್ಕರೆ ಇರಲಿದೆ ಗೊತ್ತಾ? ಇಲ್ಲಿದೆ ಮಾಹಿತಿ

15/04/2026 9:13 AM

BIG NEWS : ರಾಜ್ಯ ಸರ್ಕಾರಿ ನೌಕರರ ವಿರುದ್ಧ ಸಾಬೀತಾದ ಆರೋಪಕ್ಕೆ ‘ಯಾವ ಶಿಕ್ಷೆ’? ಇಲ್ಲಿದೆ ಮಾಹಿತಿ

15/04/2026 9:09 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.