ನವದೆಹಲಿ : ಸಂಸತ್ತಿನಲ್ಲಿ ಇಂದು ವಿನೋದಮಯ ಘಟನೆ ನಡೆದಿದ್ದು, 5 ವರ್ಷದ ಬಾಲಕಿಯ ಉತ್ತರಕ್ಕೆ ಪ್ರಧಾನಿ ಮೋದಿ ಮನಬಿಚ್ಚಿ ನಕ್ಕಿದ್ದಾರೆ. ಹೌದು, ಪ್ರಧಾನಿ ಮೋದಿ ಅಹನಾ ಫಿರೋಜಿಯಾ ಅನ್ನೋ ಬಾಲಕಿಗೆ “ನಾನು ಏನು ಮಾಡುತ್ತೇನೆ ಅನ್ನೋದು ನಿಮಗೆ ಗೊತ್ತಾ?” ಅಂತಾ ಪ್ರಶ್ನಿಸಿದ್ದಾರೆ. ಆಗ ಪುಟ್ಟ ಬಾಲಕಿ ಕೊಟ್ಟ ಉತ್ತರಕ್ಕೆ ಸ್ವತಃ ಪ್ರಧಾನಿ ಸೇರಿ ಅಲ್ಲಿದ್ದವರೆಲ್ಲಾ ನಗಲು ಪ್ರಾರಂಭಿಸಿದ್ದಾರೆ. ಇಷ್ಟಕ್ಕೂ ಬಾಲಕಿ ಹೇಳಿದ್ದೇನು ಗೊತ್ತಾ?
ವಾಸ್ತವವಾಗಿ, ಬಾಲಕಿ ಅಹನಾ ಫಿರೋಜಿಯಾ ಉಜ್ಜಯಿನಿಯ ಬಿಜೆಪಿ ಸಂಸದ ಅನಿಲ್ ಫಿರೋಜಿಯಾ ಅವ್ರು ಮಗಳು. ಸಂಸತ್ತಿನಲ್ಲಿ ಪ್ರಧಾನಿ ಮೋದಿ ಅವರನ್ನ ಭೇಟಿಯಾಗಲು ಅನಿಲ್ ಇಂದು ತಮ್ಮ ಕುಟುಂಬದೊಂದಿಗೆ ಬಂದಿದ್ದರು. ಆಗ ಅಹನಾಳನ್ನ ಹತ್ತಿರಕ್ಕೆ ಕರೆದ ಮೋದಿ, ನನ್ನ ಹೆಸರೇನು ಗೊತ್ತಾ? ಎಂದಿದ್ದಾರೆ. ಅದಕ್ಕೆ ಅಹನಾ, “ನೀವು ಮೋದಿ ಜಿ.. ನೀವು ಪ್ರತಿದಿನ ಟಿವಿಯಲ್ಲಿ ಬರುತ್ತೀರಿ” ಎಂದಿದ್ದಾರೆ. ನಂತ್ರ ಮಾತು ಮುಂದುವರೆಸಿದ ಪ್ರಧಾನಿ, “ನಾನು ಏನು ಮಾಡುತ್ತಿದ್ದೇನೆಂದು ನಿಮಗೆ ಗೊತ್ತಾ?” ಎಂದರು. ಆಗ ಅಹನಾ, “ನೀವು ಲೋಕಸಭೆ ಟಿವಿಯಲ್ಲಿ ಕೆಲಸ ಮಾಡುತ್ತಿದ್ದೀರಿ” ಎಂದಿದ್ದಾಳೆ. ಇದನ್ನ ಕೇಳಿದ ಪ್ರಧಾನಿ ಮೋದಿ ಮತ್ತು ಅಲ್ಲಿದ್ದ ಇತರರು ನಗಲು ಪ್ರಾರಂಭಿಸಿದ್ದಾರೆ. ಇನ್ನು ಸಂವಾದದಿಂದ ಸಂತುಷ್ಟರಾದ ಪ್ರಧಾನಿ ಮೋದಿ, ಅಹನಾಗೆ ಚಾಕೊಲೇಟ್ ಕೊಟ್ಟು ಖುಷಿಪಟ್ಟರು.
ಅಂದ್ಹಾಗೆ, ಅನಿಲ್ ಫಿರೋಜಿಯಾ ಮಧ್ಯಪ್ರದೇಶದ ಉಜ್ಜಯಿನಿ-ಅಲೋಟ್ ಸಂಸದೀಯ ಕ್ಷೇತ್ರದ ಬಿಜೆಪಿ ಸಂಸದರಾಗಿದ್ದಾರೆ.