ಕೂಡಲ ಸಂಗಮ: ಇಂದು ಉತ್ತರ ಕನ್ನಡದಲ್ಲಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಏಕವಚನದಲ್ಲೇ ಸಂಸದ ಅನಂತ್ ಕುಮಾರ್ ಹೆಗಡೆ ವಾಗ್ಧಾಳಿ ನಡೆಸಿದ್ದರು. ನೀನು ಬಂದ್ರೆ ಬಾ, ರಾಮಮಂದಿರ ಉದ್ಘಾಟನೆ ಏನೂ ನಿಲ್ಲೋದಿಲ್ಲ ಅಂತ ತಿಳಿಸಿದ್ದರು. ಈ ಬಗ್ಗೆ ಸಿಎಂ ಸಿದ್ಧರಾಮಯ್ಯ ಏನು ಹೇಳಿದ್ರು ಅಂತ ಮುಂದೆ ಓದಿ.
ಈ ಕುರಿತಂತೆ ಕೂಡಲಸಂಗಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವಂತ ಅವರು, ಅದು ಅವರ ಸಂಸ್ಕೃತಿ ಎಂಬುದಾಗಿ ತಿರುಗೇಟು ನೀಡಿದರು.
ಮಂತ್ರಿಯಾಗಿ ಸಂವಿಧಾನ ಬದಲಿಸ್ತೀವಿ ಅಂದ್ರು. ಅವ್ರಿಂದ ನಾವು ಸಂಸ್ಕೃತಿ ಬಯಸೋಕೆ ಆಗುತ್ತಾ.? ಅವರ ಸುಸಂಸ್ಕೃತ್ವ ಅವರ ಹೇಳಿಕೆಯಲ್ಲೇ ತೋರಿಸುತ್ತದೆ ಎಂಬುದಾಗಿ ಸಂಸದ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಸಿಎಂ ಸಿದ್ಧರಾಮಯ್ಯ ವಾಗ್ಧಾಳಿ ನಡೆಸಿದರು.
BIG UPDATE: ‘ಇಂಡಿಯಾ ಮೈತ್ರಿಕೂಟ’ದ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ, ಸಂಚಾಲಕರಾಗಿ ನಿತೀಶ್ ಕುಮಾರ್ ನೇಮಕ
ಲೋಕಸಭಾ ಚುನಾವಣೆ : ನನಗೆ ಯತಿಂದ್ರ ಸಿದ್ದರಾಮಯ್ಯ ಎದುರಾಳಿಯಾದ್ರೆ ಒಳ್ಳೆಯದು : ಪ್ರತಾಪ್ ಸಿಂಹ