ಚಿತ್ರದುರ್ಗ: ಅಪರಿಚಿತ ಮಹಿಳೆಯೊಂದು ವೀಡಿಯೋ ಕಾಲ್ ಮಾಡಿ ಖಾಸಗಿ ಅಂಗಾಗ ತೋರಿಸಿದರು, ಈ ಹಿನ್ನೆಲೆಯಲ್ಲಿ ನಾನು ತಕ್ಷಣ ಬ್ಲಾಕ್ ಮಾಡಿದೆ ಎಂದು ಚಿತ್ರದುರ್ಗ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಅಪರಿಚಿತ ಮಹಿಳೆಯಿಂದ ವಾಟ್ಸಪ್ನಲ್ಲಿ ವೀಡಿಯೋ ಕಾಲ್ ಬಂದಿತ್ತು. ಕ್ಷೇತ್ರದ ಜನರೋ ಅಥವಾ ಸಂಬಂಧಿಕರೋ ಎಂದು ಕಾಲ್ ರಿಸೀವ್ ಮಾಡಿದ್ದೆ. ಆದರೆ ಅವರ ಭಾಷೆ ನನಗೆ ಅರ್ಥವಾಗಿಲ್ಲ. ಆದರೆ ಈ ರೀತಿ ಆಗಿರುವುದು ನನ್ನ ಗಮನಕ್ಕೆ 2 ಬಾರಿ ಬಂತು ಎಂದು ಹೇಳಿದರು. ಕೂಡಲೇ ನಾನು ನನ್ನ ಪತ್ನಿಗೆ ತಿಳಿಸಿ ತಕ್ಷಣ ಆ ನಂಬರ್ ಅನ್ನು ಬ್ಲಾಕ್ ಮಾಡಿಸಿದೆ.
ನಂತರ ಈ ಬಗ್ಗೆ ಎಸ್ಪಿಗೂ ಮಾಹಿತಿ ನೀಡಿದೆ. ಆದರೆ ತನಿಖೆ ಎಲ್ಲಿವರೆಗೆ ಬಂದಿದೆ ಎನ್ನುವುದನ್ನು ನಾನು ವಿಚಾರಿಸಿಲ್ಲ. ಆದರೆ ಅವರು ತನಿಖೆ ನಡೆಸುತ್ತಿದ್ದಾರೆ ಜೊತೆಗೆ ವೀಡಿಯೋ ಕಾಲ್ ಬಂದ ನಂಬರ್ ಅನ್ನು ಪೊಲೀಸರು ತೆಗೆದುಕೊಂಡಿದ್ದಾರೆ. ಇದು ಒಡಿಶಾ ಅಥವಾ ರಾಜಸ್ಥಾನದಿಂದ ಬಂದ ನಂಬರ್ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.