ಬೆಂಗಳೂರು : ರಾಮನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಡಿ.ಕೆ ಸುರೇಶ್ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.ಭರ್ಜರಿ ರೋಡ್ ಶೋ ಮೂಲಕ ಆಗಮಿಸಿದ ಡಿಕೆ ಸುರೇಶ್ ರಾಮನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.ಇಂದಿನಿಂದ ನಾಮಪತ್ರ ಸಲ್ಲಿಕೆ ಶುರುವಾಗಿದ್ದು ಮೊದಲ ದಿನವೇ ಡಿಕೆ ಸುರೇಶ್ ನಾಪಮತ್ರ ಸಲ್ಲಿಸಿದ್ದಾರೆ.
ಇದೆ ವೇಳೆ ಸಂಸದ ಡಿಕೆ ಸುರೇಶ್ ಅವರು ತಮ್ಮ ಒಟ್ಟು ಆಸ್ತಿಯ ಮೌಲ್ಯವನ್ನು ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಸಿದ್ದಾರೆ. ಸಂಸದ ಡಿಕೆ ಸುರೇಶ್ ಕುಮಾರ್ 106 ಕೋಟಿ 71 ಲಕ್ಷ 89,791 ರೂ ಅಸ್ತಿಯನ್ನು ಹೊಂದಿದ್ದಾರೆ. ಅಫಿಡೇವೆಟ್ ನಲ್ಲಿ ಕೈ ಸಂಸದ ಡಿಕೆ ಸುರೇಶ್ ತಮ್ಮ ಆಸ್ತಿ ಬಗ್ಗೆ ಘೋಷಿಸಿದ್ದಾರೆ.
ಡಿ ಕೆ ಸುರೇಶ್ ಆಸ್ತಿಯ ಮಾರುಕಟ್ಟೆ ಮೌಲ್ಯ 486 ಕೋಟಿ 33,35, 604 ರೂಪಾಯಿ ಇದ್ದು, ಒಟ್ಟು 150 ಕೋಟಿ 36,76,994 ರೂಪಾಯಿ ಸಾಲವನ್ನು ಡಿಕೆ ಸುರೇಶ ಹೊಂದಿದ್ದಾರೆ ಎಂದು ಆಫೀಡಿವೇಟ್ ಅಲ್ಲಿ ಉಲ್ಲೇಖಸಿದ್ದಾರೆ.
ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣ ವಿಚಾರಣೆಯಲ್ಲಿದೆ ಪತ್ನಿ ಕಾಲಂ ಮುಂದೆ ವಿಚ್ಛೇದನವಾಗಿದೆ ಹೀಗಾಗಿ ಸಂಬಂಧಿಸಿಲ್ಲವೆಂದು ಉಲ್ಲೇಖಿಸಲಾಗಿದೆ. ಪುತ್ರ ಕೇಶಿನ್ ಸುರೇಶ್ ನನಗೆ ಅವಲಂಬಿತನಲ್ಲ ಎಂದು ಉಲ್ಲೇಖಿಸಲಾಗಿದೆ.ಡಿಕೆ ಸುರೇಶ್ ಬಳಿ 1 ಕೆಜಿ 260 ಗ್ರಾಂ ಚಿನ್ನ ಹಾಗೂ ನಾಲ್ಕು ಕೆಜಿ 860 ಗ್ರಾಂ ಬೆಳ್ಳಿ ಮತ್ತು ಬೆಳ್ಳಿಯ ವಸ್ತುಗಳು ಇವೆ ಎಂದು ಉಲ್ಲೇಖಸಿದ್ದಾರೆ.