ಕೆಎನ್ಎನ್ಡಿಜಿಟಲ್ ಡೆಸ್ಕ್ : ಸಧ್ಯ ಟೀಂ ಇಂಡಿಯಾ ದುಬೈನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ 2022ರಲ್ಲಿ ಭಾಗವಹಿಸಿದೆ. ಈ ಪಂದ್ಯಾವಳಿಯಲ್ಲಿ ರೋಹಿತ್, ವಿರಾಟ್ ಮತ್ತು ರಾಹುಲ್ ಅವರಂತಹ ಆಟಗಾರರು ಆಡುತ್ತಿದ್ದಾರೆ. ಈ ಆಟಗಾರರ ಅಭಿಮಾನಿಗಳ ಸಂಖ್ಯೆ ಕೋಟಿಗಳಲ್ಲಿದೆ. ಅದ್ರಂತೆ, ಪ್ರತಿ ವರ್ಷ ಈ ಆಟಗಾರರು ಕೋಟಿಗಟ್ಟಲೆ ಸಂಪಾದಿಸುತ್ತಾರೆ. ಆದ್ರೆ, ಈ ಆಟಗಾರರ ವಿದ್ಯಾರ್ಹತೆ ಏನು ಅನ್ನೋದು ನಿಮಗೆ ತಿಳಿದಿದೆಯೇ? ನಾವು ಪ್ರಸ್ತುತ ಆಟಗಾರರ ಬಗ್ಗೆ ಮಾತನಾಡೋದಾದ್ರೆ, ಅಶ್ವಿನ್ ಟೀಂ ಇಂಡಿಯಾದಲ್ಲಿರುವ ಅತ್ಯಂತ ವಿದ್ಯಾವಂತ ಆಟಗಾರ. ಇನ್ನೂ ಪಾಂಡ್ಯ ಕಡಿಮೆ ವಿದ್ಯಾಬ್ಯಾಸ ಮಾಡಿದ್ದಾರೆ. ಈ ಲೇಖನದಲ್ಲಿ, ನಿಮ್ಮ ನೆಚ್ಚಿನ ಆಟಗಾರರ ಶೈಕ್ಷಣಿಕ ಅರ್ಹತೆ ಏನು? ಅನ್ನೋದನ್ನ ನಾವು ನಿಮಗೆ ಹೇಳಲಿದ್ದೇವೆ.
ಟೀಂ ಇಂಡಿಯಾ ಆಟಗಾರರ ಹೆಸರು ಮತ್ತು ಶಿಕ್ಷಣ.!
ರೋಹಿತ್ ಶರ್ಮಾ (ನಾಯಕ) : ರೋಹಿತ್ ಶರ್ಮಾ 2022ರ ಏಷ್ಯಾಕಪ್ನಲ್ಲಿ ಭಾರತ ತಂಡದ ನಾಯಕರಾಗಿದ್ದಾರೆ. ಇನ್ನು ಕ್ರಿಕೆಟ್ನ ಎಲ್ಲಾ ಸ್ವರೂಪಗಳಲ್ಲಿ ಬೌಲರ್ಗಳನ್ನ ಛಿದ್ರಗೊಳಿಸುವಲ್ಲಿ ಪರಿಣತಿ ಹೊಂದಿರುವ ಶರ್ಮಾ, ಕೇವಲ 10 ನೇ ಪಾಸ್ ಆಗಿದ್ದಾರೆ. ತಮ್ಮ ಕ್ರಿಕೆಟ್ ವೃತ್ತಿಜೀವನವನ್ನ ಮುಂದುವರಿಸಲು, ರೋಹಿತ್ ಶರ್ಮಾ 10ನೇ ತರಗತಿಯಲ್ಲಿ ಉತ್ತೀರ್ಣರಾದ ನಂತ್ರ ಅಧ್ಯಯನವನ್ನ ತೊರೆದು ಪೂರ್ಣ ಸಮಯವನ್ನೂ ಅಭ್ಯಾಸಕ್ಕಾಗಿ ಮೀಸಲಿಟ್ಟರು ಅನ್ನೋದು ವಿಶೇಷ.
ವಿರಾಟ್ ಕೊಹ್ಲಿ : ರೋಹಿತ್ ಶರ್ಮಾ ಅವರಂತೆ, ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಹೆಚ್ಚು ಅಧ್ಯಯನ ಮಾಡಿಲ್ಲ. ಆದಾಗ್ಯೂ, ವಿರಾಟ್ ಕೊಹ್ಲಿ ರೋಹಿತ್ ಶರ್ಮಾ ಅವರಿಗಿಂತ ಹೆಚ್ಚು ವಿದ್ಯಾವಂತರಾಗಿದ್ದಾರೆ. ಹೌದು, ಕೊಹ್ಲಿ 12ನೇ ತರಗತಿಯವರೆಗೆ ಓದಿದ್ದಾರೆ. ಕೊಹ್ಲಿ ಡಿಗ್ರಿ ಪಡೆಯಲು ಎಂದಿಗೂ ಕಾಲೇಜು ಮೆಟ್ಟಿಲು ಹತ್ತಲಿಲ್ಲ. ಯಾಕಂದ್ರೆ, ಅವ್ರ ಗಮನ ಕ್ರಿಕೆಟ್ ಮೇಲಿತ್ತು.
ಕೆ.ಎಲ್. ರಾಹುಲ್ ; ಟೀಮ್ ಇಂಡಿಯಾದ ಇನ್ನೊಬ್ಬ ಸ್ಫೋಟಕ ಬ್ಯಾಟ್ಸ್ಮ್ಯಾನ್, ಕೆಎಲ್ ರಾಹುಲ್ ಬಿಕಾಂ ಪದವಿದಾರರಾಗಿದ್ದಾರೆ. ಹೌದು ರಾಹುಲ್, ಬೆಂಗಳೂರಿನ ಶ್ರೀ ಭಗವಾನ್ ಮಹಾವೀರ್ ಜೈನ್ ಕಾಲೇಜಿನಲ್ಲಿ B.Com ಮಾಡಿದ್ದಾರೆ.
ಸೂರ್ಯ ಕುಮಾರ್ ಯಾದವ್ ; ಟೀಮ್ ಇಂಡಿಯಾದ ಹೊಸ ಕ್ರಿಕೆಟ್ ಸೆನ್ಸೇಷನ್ ಮತ್ತು ಸ್ಕೈ ಎಂದು ಕರೆಯಲ್ಪಡುವ ಸೂರ್ಯ ಮುಂಬೈನ ಪಿಲಾಯ್ ಸ್ಕೂಲ್ ಆಫ್ ಆರ್ಟ್ಸ್ʼನಲ್ಲಿ B.Com ಮಾಡಿದ್ದಾರೆ.
ರಿಷಭ್ ಪಂತ್ ; ಕೆಎಲ್ ರಾಹುಲ್ ಮತ್ತು ಸೂರ್ಯ ಕುಮಾರ್ ಯಾದವ್ ಅವರಂತೆ, ಪಂತ್ ಕೂಡ ಬಿಕಾಂ ಪಾಸ್ ಆಗಿದ್ದಾರೆ. ಪಂತ್ ಅವರು ದೆಹಲಿ ವಿಶ್ವವಿದ್ಯಾಲಯದ ಶ್ರೀ ವೆಂಕಟೇಶ್ವರ ಕಾಲೇಜಿನಿಂದ ಬಿಕಾಂ ಉತ್ತೀರ್ಣರಾಗಿದ್ದಾರೆ.
ದೀಪಕ್ ಹೂಡಾ ; ಕ್ರಿಕೆಟಿಗ ದೀಪಕ್ ಹೂಡಾ ಕೂಡ ಒಬ್ಬ ಪದವೀಧರರಾಗಿದ್ದು, ಕಲಾ ವಿಭಾಗದಲ್ಲಿ ಪದವಿಯನ್ನ ಪಡೆದಿದ್ದಾರೆ.
ದಿನೇಶ್ ಕಾರ್ತಿಕ್ ; ಡಿಕೆ ಅಂತಾನೇ ಖ್ಯಾತಿ ಪಡೆದಿರುವ ಕ್ರಿಕೆಟಿಗ ಕಾರ್ತಿಕ್ 12 ನೇ ತರಗತಿ ಪಾಸ್ ಮಾಡಿದ್ದಾರೆ. ನಂತ್ರ ತಮ್ಮ ಪೂರ್ಣ ಸಮಯವನ್ನೂ ಕ್ರಿಕೆಟಿಗಾಗಿ ಮೀಸಲಿಟ್ಟರು.
ಹಾರ್ದಿಕ್ ಪಾಂಡ್ಯ ; ಏಷ್ಯಾ ಕಪ್ನಲ್ಲಿ ದೂಳೆಬ್ಬಿಸಿ ಸಧ್ಯ ಕ್ರಿಕೆಟ್ ಪ್ರೇಮಿಗಳ ಫೆವರೇಟ್ ಆದಾ ಟೀಮ್ ಇಂಡಿಯಾದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ 9ನೇ ತರಗತಿವರೆಗೆ ಮಾತ್ರ ಓದಿದ್ದಾರೆ.
ರವೀಂದ್ರ ಜಡೇಜಾ ; ಸರ್ ಎಂದೇ ಜನಪ್ರಿಯರಾಗಿರುವ ರವೀಂದ್ರ ಜಡೇಜಾ ಡಿಗ್ರಿ ಪಡೆದಿದ್ದು, ಪದವೀಧರರಾಗಿದ್ದಾರೆ.
ರವಿಚಂದ್ರನ್ ಅಶ್ವಿನ್ ; ಅಶ್ವಿನ್ ಈ ಪ್ರಸ್ತುತ ತಂಡದ ಅತ್ಯಂತ ವಿದ್ಯಾವಂತ ಆಟಗಾರರಲ್ಲಿ ಒಬ್ಬರು. ಅಶ್ವಿನ್ ಚೆನ್ನೈನ ಎಸ್ಎಸ್ಎನ್ ಕಾಲೇಜ್ ಆಫ್ ಎಂಜಿನಿಯರಿಂಗ್ನಿಂದ ಐಟಿಯಲ್ಲಿ ಬಿಟೆಕ್ ಪದವಿ ಪಡೆದಿದ್ದಾರೆ.
ಯಜುವೇಂದ್ರ ಚಹಲ್ ; ಚಹಲ್ ಹರಿಯಾಣದ ಮಹಾತ್ಮಾ ಗಾಂಧಿ ಆರೋಗ್ಯ ವಿಜ್ಞಾನ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ.
ರವಿ ವಿಷ್ಣೋಯ್ ; ಟೀಂ ಇಂಡಿಯಾದ ಆಟಗಾರ ರವಿ ಕೇವಲ 10ನೇ ಪಾಸಾಗಿದ್ದಾರೆ.
ಭುವನೇಶ್ವರ್ ಕುಮಾರ್ ; ಭುವಿ ಅಲಿಯಾಸ್ ಭುವನೇಶ್ವರ್ ಕುಮಾರ್, ಟೀಮ್ ಇಂಡಿಯಾದ ವೇಗದ ದಾಳಿಯನ್ನು ನಿಭಾಯಿಸುವವರು, ಮೀರತ್ ನ ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ.
ಅರ್ಷ್ದೀಪ್ ಸಿಂಗ್ ; ಟೀಮ್ ಇಂಡಿಯಾದ ಹೊಸ ವೇಗದ ಬೌಲರ್ ಅರ್ಷ್ದೀಪ್ ಸಿಂಗ್ ಪದವೀಧರರಾಗಿದ್ದಾರೆ.
ಆವೇಶ್ ಖಾನ್ ; ಅವೇಶ್ ಖಾನ್ ಕೂಡ ಬಿಕಾಂ ಪಾಸ್ ಆಗಿದ್ದಾರೆ. ಅವೇಶ್ ಇಂದೋರ್ನ ರಾಣಾಯ್ಸನ್ಸ್ ಕಾಲೇಜ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ಟ್ನಿಂನಿಂದ ಬಿಕಾಂ ತೇರ್ಗಡೆಯಾಗಿದ್ದಾರೆ.