ಬೆಂಗಳೂರು : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಹಾಗೂ ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರ ಮಗಳು ಆಗಿರುವ ಸೌಮ್ಯ ರೆಡ್ಡಿ ಅವರು ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಆಸ್ತಿಯ ಕುರಿತಂತೆ ಅಫಿಡೆವಿಟ್ ಸಲ್ಲಿಸಿದ್ದಾರೆ.
ಬೆಂಗಳೂರು ದಕ್ಷಿಣ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಬಳಿ 1 ಕೋಟಿ ಚಿರಾಸ್ಥಿ 1. 28 ಕೋಟಿ ಸ್ಥಿರಾಸ್ತಿ ಹೊಂದಿದ್ದು, 5 ಕೆ.ಜಿ ಬೆಳ್ಳಿ 950 ಗ್ರಾಂ ಚಿನ್ನ ಹೊಂದಿದ್ದಾರೆ. ಅಲ್ಲದೆ ಒಂದು ಇನೋವಾ ಕಾರು ಹೊಂದಿದ್ದು, ಕೃಷಿ ಜಮೀನು ಎಲ್ಲಾ ಇಲ್ಲ ಎಂದು ಉಲ್ಲೇಖಸಿದ್ದಾರೆ.
ಬೇಗೂರು ಬಳಿ ಅಪಾರ್ಟ್ಮೆಂಟ್ ಇದೆ. ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ ಸಾಲ 1.5 ಕೋಟಿ ರೂಪಾಯಿ ಸಾಲವಿದ್ದು ಅವರ ವಿರುದ್ಧ 5 FIR ಹಾಗೂ ಒಂದು ಖಾಸಗಿ ದೂರು ದಾಖಲಾಗಿದೆ. ಅಲ್ಲದೆ ಕೋರ್ಟ್ ನಲ್ಲಿ ಒಟ್ಟು 6 ಪ್ರಕರಣಗಳ ವಿಚಾರಣೆ ನಡೆಯುತ್ತಿದೆ ಎಂದು ಅಫಿಡೆವಿಟ್ ನಲ್ಲಿ ಸಲ್ಲಿಸಿದ್ದಾರೆ.