ಬೆಂಗಳೂರು : ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ನಾಮಪತ್ರ ಸಲ್ಲಿಕೆ ವೇಕೆ ತಮ್ಮ ಅಸ್ತಿಯನ್ನು ಘೋಷಣೆ ಮಾಡಿದ್ದೂ, ಆಫೀಡಿವೇಟ್ ಅಲ್ಲಿ 16 ಕೋಟಿ ರೂ.ಗಳ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕರಂದ್ಲಾಜೆ, 9,23,66,910 ಮೌಲ್ಯದ ಚರಾಸ್ತಿ, 6,78,97,090 ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. 4,06,00,640 ರೂ. ಸಾಲ ಮಾಡಿದ್ದಾರೆ. 1,71,000 ರೂ. ನಗದು ಹೊಂದಿದ್ದಾರೆ. ವಿವಿಧ ಬ್ಯಾಂಕ್‌ಗಳ ಉಳಿತಾಯ ಖಾತೆಗಳಲ್ಲಿ 69,60,976 ರೂ. ಠೇವಣಿ ಹಾಗೂ 10 ರೂ. ಮುಖಬೆಲೆಯ 5,000 ಸಾವಿರ ಶೇರುಗಳನ್ನು ಹೊಂದಿದ್ದಾರೆ.
ಇದೀಗ ಶೋಭಾ ಕರಂದ್ಲಾಜೆ ಆಸ್ತಿಯಲ್ಲಿ ಶೇ.50ರಷ್ಟು ಹೆಚ್ಚಳವಾಗಿದೆ. ಕಳೆದ ಬಾರಿ 10.48 ಕೋಟಿ ರೂ.ಗಳ ಆಸ್ತಿ ಘೋಷಿಸಿಕೊಂಡಿದ್ದ ಇವರು,ಇದೀಗ ಒಟ್ಟು 16 ಕೋಟಿ ರೂ.ಗಳ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ.ಅಲ್ಲದೆ 1 ಕೆ.ಜಿ ಚಿನ್ನದ ಬಿಸ್ಕೆಟ್ ಮಾರುಕಟ್ಟೆ ಮೌಲ್ಯ 68,40,000, ಹಾಗೂ 650 ಗ್ರಾಂ ಚಿನ್ನಾಭರಣ, 1620 ಗ್ರಾಂ ಬೆಳ್ಳಿ ಚಿನ್ನದ ಆಭರಣ ಮತ್ತು ಬೆಳ್ಳಿ ಮೌಲ್ಯ 40,00,000 ರೂ. ಹೋಂಡಾ ಆ್ಯಕ್ಟಿವಾ ಸ್ಕೂಟರ್ ಹೊಂದಿದ್ದಾರೆ.
‘CTET 2024 ನೋಂದಣಿ’ಗೆ ಕೊನೆ ದಿನಾಂಕ ವಿಸ್ತರಣೆ, ಕನ್ನಡ ಸೇರಿ 20 ಭಾಷೆಗಳಲ್ಲಿ ಪರೀಕ್ಷೆ, ಶೀಘ್ರ ಅರ್ಜಿ ಸಲ್ಲಿಸಿ
ಪಿಎಂಎಲ್ ಕಾಯ್ದೆಯಡಿ ಅಕ್ರಮ ಹಣ ವರ್ಗಾವಣೆ ಆರೋಪ ಸಂಬಂಧ ಜಾರಿ ನಿರ್ದೇಶನಾಲಯ ದಾಖಲಿಸಿರುವ ವಿಶೇಷ ಪ್ರಕರಣ 124/2014ರ ವಿವರವನ್ನು ಪ್ರಮಾಣಪತ್ರದಲ್ಲಿ ನೀಡಿದ್ದಾರೆ. ಇವರ ವಿರುದ್ಧ ಒಟ್ಟು ನಾಲ್ಕು ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ. ಇದರಲ್ಲಿ ಎರಡು ಕ್ರಿಮಿನಲ್ ಕೇಸ್, 1 ಮಾನನಷ್ಟ ಪ್ರಕರಣವಾಗಿದೆ.