ಕೆಎನ್ ಎನ್ ನ್ಯೂಸ್ ಡೆಸ್ಕ್ : ಸಾಮಾನ್ಯವಾಗಿ ಮನೆಕಟ್ಟುವಾಗ ಪ್ರತಿಯೊಬ್ಬರು ವಾಸ್ತು ನೋಡೇ ನೋಡುತ್ತಾರೆ. ಮನೆಯಲ್ಲಿ ವಾಸ್ತು ಸರಿ ಇದ್ದರೆ ಎಲ್ಲವೂ ಸರಿ ಇದ್ದ ಹಾಗೆ.ಒಂದು ವೇಳೆ ವಾಸ್ತಿನಲ್ಲಿ ಸ್ವಲ್ಪ ದೋಷ ಕಂಡಬಂದ್ರೂ ನಾನಾ ಸಮಸ್ಯೆಗಳು ಎದುರಿಸಬೇಕಾಗುತ್ತದೆ ಎಂದಬ ನಂಬಿಕೆ ಜನರಲ್ಲಿದೆ. ಅಷ್ಟೇ ಅಲ್ಲದೆ ವಾಸ್ತು ಪಾಲಿಸುವುದರಿಂದ ಧನಾತ್ಮಕ ಶಕ್ತಿ ಉಳಿದು ಋಣಾತ್ಮಕ ಶಕ್ತಿ ಸಂಪೂರ್ಣವಾಗಿ ದೂರವಾಗುತ್ತದೆ. ಮನೆಯಲ್ಲಿ ಸುಖ ಸಂತೋಷ ಸಿಗುತ್ತದೆ ಎಂಬ ನಂಬಿಕೆ ನಾನಾ ಕಾಲದಿಂದಲೂ ಇದೆ.
BIGG NEWS: ಚಿಕ್ಕಬಳ್ಳಾಪುರದಲ್ಲಿ ಭೀಕರ ಸರಣಿ ರಸ್ತೆ ಅಪಘಾತ; ಇಬ್ಬರ ದುರ್ಮರಣ; ಗರ್ಭಿಣಿ ಸೇರಿ ಮೂವರಿಗೆ ಗಾಯ
ಇನ್ನು ವಾಸ್ತು ಪ್ರಕಾರ ಕೆಲವರು ಮನೆಯಲ್ಲಿ ವಾಸ್ತು ಗಿಡ, ಕುದುರೆ ಫೋಟೋ ಮತ್ತು ಮುಖ್ಯವಾಗಿ ಬುದ್ಧನ ಪ್ರತಿಮೆ ಕೂಡ ಇಟ್ಟುಕೊಂಡಿರುತ್ತಾರೆ. ಮನೆಯಲ್ಲಿ ಬುದ್ಧನ ಪ್ರತಿಮೆ ಇದ್ದರೆ ಮನೆ ಹಾಗೂ ಮನಸ್ಸು ಶಾಂತವಾಗಿರುತ್ತದೆ ಎಂದು ಹೇಳುತ್ತಾರೆ. ಆದರೆ ಮುಖ್ಯವಾಗಿ ನಾವು ತಿಳಿದುಕೊಳ್ಳಬೇಕಾಗಿದ್ದು ಯಾವ ದಿಕ್ಕಿನಲ್ಲಿ ಬುದ್ದನ ಪ್ರತಿಮೆ ಇಡಬೇಕು ಎಂದು. ಹಾಗಾದ್ರೆ ಬನ್ನಿ ವಾಸ್ತು ಪ್ರಕಾರ ಏನು ಹೇಳುತ್ತಾರೆ ತಜ್ಞರು.
̇
*ಮನೆಯ ಮುಂಬಾಗಿಲ ಬಳಿ ಬುದ್ಧನ ಪ್ರತಿಮೆ ಇಡುವುದು ಒಳ್ಳೆಯದು. ಇದರಿಂದ ಬುದ್ಧನ ಪ್ರತಿಮೆ ಹೊರಗಿನಿಂದ ಬರುವ ನಕಾರಾತ್ಮಕ ಶಕ್ತಿಯನ್ನು ನಿಲ್ಲಿಸುತ್ತದೆ. ಆದರೆ ಪ್ರತಿಮೆ ನೆಲದಿಂದ 3-4 ಅಡಿ ಎತ್ತರ ಇರಬೇಕು.
* ಬುದ್ಧನ ಪ್ರತಿಮೆಯನ್ನು ಲಿವಿಂಗ್ ಹಾಲ್ನ ಪಶ್ಚಿಮ ದಿಕ್ಕಿನಲ್ಲಿ ಇಡುವುದು ಉತ್ತಮ. ಇದು ಶಾಂತಿಯನ್ನು ಸೃಷ್ಟಿಸುತ್ತದೆ. ಬುದ್ಧನ ಪ್ರತಿಮೆಯನ್ನು ಕ್ಲೀನ್ ಟೇಬಲ್ ಅಥವಾ ಶೆಲ್ಫ್ ಮೇಲೆ ಇರಿಸಿ. ಲಿವಿಂಗ್ ರೂಮಿನಲ್ಲಿ ಬುದ್ಧನ ಪ್ರತಿಮೆಯನ್ನು ಇಡುವುದರಿಂದ ಶಾಂತಿ ಸಿಗುತ್ತದೆ.
*ಮನೆ ಮುಂದಿನ ತೋಟದಲ್ಲಿ ಕೂಡಾ ಇಡಬಹುದು. ಮನೆ ಸುತ್ತಮುತ್ತ ಸ್ವಲ್ಪ ಸ್ಥಳ ಇದ್ದರೆ ಸಾಕು ಅನೇಕರು ಸಸ್ಯಗಳನ್ನು ಬೆಳೆಸಲು ಇಷ್ಟಪಡುತ್ತಾರೆ. ಹಾಗೇ ಬುದ್ಧನ ಪ್ರತಿಮೆಯನ್ನು ಈ ಸಸ್ಯಗಳು, ಅಂದರೆ ಮನೆ ಮುಂದಿನ ಸಣ್ಣ ತೋಟದಲ್ಲಿ ಕೂಡಾ ಇಡಬಹುದು. ಧ್ಯಾನ ಮಾಡುತ್ತಿರುವ ಬುದ್ಧನ ಪ್ರತಿಮೆಯನ್ನು ಮನೆಗೆ ತರುವುದು ಒಳ್ಳೆಯದು.
* ಅನೇಕರು ಪೂಜಾ ಕೋಣೆಯಲ್ಲಿ ಬುದ್ಧನನ್ನು ಪೂಜಿಸುತ್ತಾರೆ. ಇದು ಉತ್ತಮ ಧನಾತ್ಮಕ ಶಕ್ತಿಯನ್ನು ಸಹ ತರುತ್ತದೆ. ಅದೇ ರೀತಿ ನೀವು ಬುದ್ಧನ ಪ್ರತಿಮೆಯನ್ನು ಧ್ಯಾನದ ಸ್ಥಳದಲ್ಲಿ ಇರಿಸಿದರೆ ಅದು ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
* ನಿಮ್ಮ ಮಕ್ಕಳು ಓದಿನಲ್ಲಿ ಆಸಕ್ತಿ ತೋರದಿದ್ದರೆ, ಅವರ ಕೋಣೆಯಲ್ಲಿ ಒಂದು ಸಣ್ಣ ಬುದ್ಧನ ಪ್ರತಿಮೆ ತಂದು ಇಡಿ. ಇದರಿಂದ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚುತ್ತದೆ.