ಕೆಎನ್ಎನ್ಡಿಜಿಟಲ್ ಡೆಸ್ಕ್ : ತಂತ್ರಜ್ಞಾನದ ಹೆಚ್ಚಳದೊಂದಿಗೆ, ಆದಾಯವನ್ನ ಹೆಚ್ಚಿಸುವ ಅನೇಕ ಅಪ್ಲಿಕೇಶನ್ʼಗಳು ಅಥವಾ ವೆಬ್ ಸೈಟ್ʼಗಳಿವೆ. ನೀವು ಅವುಗಳ ಸಹಾಯದಿಂದ ಹಣ ಗಳಿಸಬಹುದು. ಅವುಗಳನ್ನ ಬಳಸುವುದರಿಂದ ಕ್ಯಾಶ್ಬ್ಯಾಕ್ ಸಿಗುತ್ತದೆ. ಇನ್ನು ಕೆಲವೇ ಕೆಲವು ಸಮಯ ಕೆಲಸ ಮಾಡಿದ್ರೆ ಆದಾಯವು ಉತ್ಪತ್ತಿಯಾಗುತ್ತೆ ಅಥ್ವಾ ಕಾಯಿನ್ ಬರುತ್ವೆ. ಇದನ್ನ ಇತರ ಖರೀದಿಗಳಿಗೆ ಬಳಸಬಹುದು. ಆದ್ರೆ, ಅವುಗಳಲ್ಲಿ ಯಾವುದು ಸರಿ ಮತ್ತು ನಾವು ಯಾವ ಮುನ್ನೆಚ್ಚರಿಕೆಗಳನ್ನ ತೆಗೆದುಕೊಳ್ಳಬೇಕು ಅನ್ನೋದನ್ನ ನಾವು ತಿಳಿದುಕೊಳ್ಳಬೇಕು.
ಪಾವತಿ ಅಪ್ಲಿಕೇಶನ್.!
ಕೆಲವು ಅಪ್ಲಿಕೇಶನ್ʼಗಳು ಕ್ಯಾಶ್ ಬ್ಯಾಕ್ ನೀಡುತ್ವೆ. ಈ ಅಪ್ಲಿಕೇಶನ್ʼಗಳ ಮೂಲಕ ನೀವು ಯಾವುದೇ ಸರಕುಗಳಿಗೆ ಪಾವತಿಸಿದಾಗ, ನೀವು ಕೆಲವು ರೂಪಾಯಿಗಳ ಕ್ಯಾಶ್ ಬ್ಯಾಕ್ ಅಥವಾ ರಿಯಾಯಿತಿ ಕೂಪನ್ʼಗಳನ್ನು ಪಡೆಯುತ್ತೀರಿ. ಈ ಅಪ್ಲಿಕೇಶನ್ʼಗಳಲ್ಲಿ ಕೆಲವು ವಿಶ್ವಾಸಾರ್ಹವಾಗಿವೆ ಇನ್ನು ಕೆಲವು ಹೊಸ ಮತ್ತು ಅಪರಿಚಿತವಾಗಿರಬಹುದು.