ಬೆಂಗಳೂರು: ಬಿಜೆಪಿ ಅಧಿಕಾರದಲ್ಲಿದ್ದಾಗ ಕೇಂದ್ರದಿಂದಲೂ ಅನುದಾನ ತಂದಿಲ್ಲ. ತೆರಿಗೆ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂದು 15 ನೇ ಹಣಕಾಸು ಆಯೋಗದ ಅಧ್ಯಕ್ಷರು 11,495 ಕೋಟಿ ರೂ. ಶಿಫಾರಸ್ಸು ಮಾಡಿದರು. ನೀವು ಅಧಿಕಾರದಲ್ಲಿದ್ದಾಗ ಈ ಬಗ್ಗೆಯೂ ಕೇಳಲಿಲ್ಲ ಎಂಬುದಾಗಿ ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರನ್ನು ನಮ್ಮ ರಾಜ್ಯಕ್ಕೆ ಅನ್ಯಾಯ ಮಾಡಬೇಡಿ, ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ಒದಗಿಸಿ ಎಂದು ಮೂರು ಸಾರಿ ಭೇಟಿಯಾಗಿ ಮನವಿ ಮಾಡಿದ್ದರೂ, ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ್ದ ₹5,300 ಕೋಟಿಯಲ್ಲಿ ಒಂದು ರೂಪಾಯಿ ಬರಲಿಲ್ಲ. ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಲಿಲ್ಲ. ನೀವು ಬಿಜೆಪಿಯವರು ಅದರ ಬಗ್ಗೆ ಒಂದೂ ಮಾತೂ ಆಡಲಿಲ್ಲ ಎಂದಿದ್ದಾರೆ.
ಕರ್ನಾಟಕಕ್ಕೆ ಅನ್ಯಾಯವಾಗುತ್ತಿರುವಾಗ ಧ್ವನಿ ಎತ್ತಲಿಲ್ಲ. ಕೇಂದ್ರ ಸರ್ಕಾರದಲ್ಲಿ ನ್ಯಾಯಯುತವಾಗಿ ಬರಬೇಕಾದ್ದನ್ನು ಕೇಳಲೂ ನಿಮ್ಮಿಂದ ಆಗಲಿಲ್ಲ. ರಾಜ್ಯಕ್ಕೆ ಇದರಿಂದ ಸಾಕಷ್ಟು ನಷ್ಟವಾಗಿದೆ. ವಿರೋಧ ಪಕ್ಷ ಇರುವುದು ಭಾಷಣ ಮಾಡಲು ಮಾತ್ರವೇ? ಎಂದು ವಿಧಾನಸಭಾ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ನೀಡಿದ್ದಾರೆ.
ಕೇಂದ್ರ ಸರ್ಕಾರದಲ್ಲಿ Non performing assets 1635000 ಕೋಟಿ ಸಾಲವಿದ್ದು, ಅದರಲ್ಲಿ 2 ಲಕ್ಷ ಕೋಟಿ ವಸೂಲಾಗಿದೆ. ಇನ್ನೂ ಸುಮಾರು 14 ಲಕ್ಷ ಕೋಟಿ ವಸೂಲಾಗಬೇಕು. ಸರ್ಕಾರ ಮತ್ತು ಆರ್ ಬಿ ಐ ನಿರಂತರ ವ್ಯವಸ್ಥೆ. ಸಾಲ ಕೊಟ್ಟ ಮೇಲೆ ವಸೂಲಿ ಮಾಡಬಾರದೆಂಬುದು ಇದೆಯೇ , ಮೋದಿಯವರು ಪ್ರಧಾನಿಯಾಗಿದ್ದು, ಅವರನ್ನು ಈ ಬಗ್ಗೆ ಪ್ರಶ್ನಿಸಬಹುದು ಎಂದರು.
ಆದರೆ ರಾಜಕೀಯ ಉದ್ದೇಶದಿಂದ ಸೋನಿಯಾ ಗಾಂಧಿಯವರ ಹೆಸರನ್ನು ಎಳೆಯುತ್ತಿದ್ದಾರೆ. ರಾಜ್ಯಪಾಲರ ಭಾಷಣದ ಮೇಲೆ ನೀಡಿದ ಉತ್ತರಕ್ಕೆ 12 ಮಂದಿ ಸದಸ್ಯರು ಮತ್ತೊಮ್ಮೆ ಸ್ಪಷ್ಟನೆಯನ್ನು ಕೋರಿದ್ದಾರೆ.
ಬಜೆಟ್ ಗೆ ಸಂಬಂಧಪಟ್ಟ ಮಾಹಿತಿಗಳನ್ನು ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುತ್ತೇನೆ. ಜಿಎಸ್ ಟಿ ಯಲ್ಲಿ ಕರ್ನಾಟಕ 2 ನೇ ಸ್ಥಾನದಲ್ಲಿದೆ. ನಾವು ನೀಡುವ 5 ಲಕ್ಷ ಕೋಟಿ ತೆರಿಗೆಯಲ್ಲಿ ನಮಗೆ ಕೇವಲ 51 ಸಾವಿರ ಕೋಟಿ ಕೇಂದ್ರದಿಂದ ಬರುತ್ತಿದೆ. 15ನೇ ಹಣಕಾಸಿನ ಆಯೋಗದಲ್ಲಿ 5495 ಕೋಟಿ ರೂ. ವಿಶೇಷ ಅನುದಾನದಡಿ ಶಿಫಾರಸ್ಸು ಮಾಡಿದರು ಎಂದರು.
Oxford Universty ಯವರು ಎಲ್ಲಿ ಬರೆಯುತ್ತಾರೆ ಎಂಬುದು ಮುಖ್ಯವಲ್ಲ. Oxford University ಯಲ್ಲಿ ಪ್ರಕಟವಾಗಿರುವುದು ಮುಖ್ಯ. ಅರ್ಹತೆಯಿದ್ದಾಗ ಮಾತ್ರ ಲೇಖನ ಪ್ರಕಟವಾಗಿರುತ್ತದೆ. ಈ ಬಗ್ಗೆ ವಿರೋಧಪಕ್ಷದ ನಾಯಕರ ಹೇಳಿಕೆ ಸರಿಯಿಲ್ಲ. ವಿಧವಾ ವೇತನ, ಶಿಷ್ಯ ವೇತನ ಬಗ್ಗೆ ಸದಸ್ಯರು ಹೇಳಿದ್ದಾರೆ. ಪ್ರಧಾನಿ ಮೋದಿಯವರು ಕಳೆದ 11 ವರ್ಷದಿಂದ ಇಂತಹ ವೇತನಗಳಿಗೆ ಒಂದು ರೂ. ಹೆಚ್ಚು ಮಾಡಿಲ್ಲ. ನಾವು 10 ಸಾವಿರ ಕೋಟಿಗೂ ಹೆಚ್ಚು ಖರ್ಚು ಮಾಡುತ್ತಿದ್ದೇವೆ ಎಂದರು.
ರಾಜ್ಯದಲ್ಲಿ ಪರಿಶಿಷ್ಟ ಜಾತಿಯವರು 17.15% , ಪರಿಶಿಷ್ಟ ಪಂಗಡವರು ಶೇ. 6.95 % ರಷ್ಟು ಒಟ್ಟು ಶೇ.24.1 ಜನರಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳಿಗೆ ಹಣ ಖರ್ಚಾಗಬೇಕು. ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆಯಡಿ ಎಲ್ಲ ಜಾತಿಯವರೂ ಇರುತ್ತಾರೆ. ಅದರಲ್ಲಿ ಶೇ.24.1 ಪರಿಗಣಿಸುತ್ತೇವೆ. ಗೃಹಲಕ್ಷ್ಮಿ, ಶಕ್ತಿ , ಗೃಹಜ್ಯೋತಿ ಯೋಜನೆಗಳ ಬಗ್ಗೆ evaluation ಮಾಡಲಾಗುತ್ತಿದ್ದು, ಇದಕ್ಕೆ ಸಂಬಂಧಪಟ್ಟ ಸಭೆಯಲ್ಲಿ ಎಲ್ಲ ಶಾಸಕರನ್ನು ಕರೆಯಬಹುದಾಗಿದೆ ಎಂದರು.
ರೈತರು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳು, ಮಹಿಳೆಯರು ಮುಖ್ಯವಾಹಿನಿಗೆ ಬರಬೇಕೆಂಬುದು ಸರ್ಕಾರದ ಆಶಯ. 2013ಕ್ಕೂ ಹಿಂದೆ ನಮ್ಮ ನಡಿಗೆ ಕೃಷ್ಣೆ ಕಡೆಗೆ ಕಾರ್ಯಕ್ರಮ ಮಾಡಲಾಗಿತ್ತು. ಅಂದು ಆ ಯೋಜನೆಗೆ 50 ಸಾವಿರ ಕೋಟಿ ನೀಡಿದರೆ ನೀರಾವರಿ ಯೋಜನೆ ಮುಗಿಯುತ್ತವೆ ಎಂಬ ಮಾಹತಿ ಇತ್ತು. ಆದ್ದರಿಂದ ವರ್ಷಕ್ಕೆ 10 ಸಾವಿರ ಕೋಟಿ ನೀಡುತ್ತೇವೆ ಎಂದು ಹೇಳಿದ್ದೆವು. ನಮ್ಮ ಸರ್ಕಾರ 5 ವರ್ಷದಲ್ಲಿ 56 ಸಾವಿರ ಕೋಟಿ ಖರ್ಚು ಮಾಡಿದ್ದೇವೆ ಎಂದರು.
ನೀರಾವರಿ ಕುರಿತು ಪ್ರಣಾಳಿಕೆಯಲ್ಲಿ ತಿಳಿಸಿದ್ದನ್ನು ನಾವು, ಈಡೇರಿಸಲು ಪ್ರಯತ್ನಿಸುತ್ತೇವೆ. ಇದಕ್ಕೆ ಬೇಕಾದ ಭೂಸ್ವಾಧಿನ ಪೂರ್ಣಗೊಳಿಸಲು ಸರ್ಕಾರ ಪ್ರಯತ್ನಿಸುತ್ತದೆ. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ 5000 ಕೋಟಿ ರೂ. ಕೆಕೆಆರ್ ಡಿ ಬಿ ಗೆ ನೀಡಿದ್ದೇವೆ. ಬಿಜೆಪಿಯವರು ಈ ಭಾಗಕ್ಕೆ ಎಷ್ಟು ಅನುದಾನವನ್ನು ನೀಡಿದ್ದಾರೆ ಎಂದು ತಿಳಿಸಲಿ. ಈ ವರ್ಷ 3 ಸಾವಿರ ಕೋಟಿ ಗೂ ಹೆಚ್ಚು ಖರ್ಚು ಮಾಡುತ್ತೇವೆ. ಮುಂದಿನ ವರ್ಷ 5000 ಕೋಟಿ ಅಭಿವೃದ್ಧಿಗೆ ವೆಚ್ಚ ಮಾಡಲು ಪ್ರಯತ್ನಿಸುತ್ತೇವೆ ಎಂದರು.
371 ಜೆ ಕಾನೂನನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಜಾರಿಮಾಡಲಾಯಿತು. ಈ ಭಾಗದಲ್ಲಿ ನೇಮಕಾತಿಗಳು, ಮುಂಬಡ್ತಿಗಳು ನಡೆಯುತ್ತಿವೆ. ಸದಸ್ಯರಿಗೆ ಎಲ್ಲ ಪ್ರಶ್ನೆಗಳಿಗೆ ಸ್ಪಷ್ಟನೆಯನ್ನು ನೀಡಲಾಗಿದೆ. ಆದ್ದರಿಂದ ರಾಜ್ಯಪಾಲರ ಭಾಷಣದ ಮೇಲೆ ವಂದನಾ ನಿರ್ಣಯವನ್ನು ದಯಮಾಡಿ ಅಂಗೀಕರಿಸಲು ಸದಸ್ಯರನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಕೋರಿದರು.
ವಿಧಾನ ಪರಿಷತ್ತೆಂದರೆ ಹಿರಿಯ ಮನೆ ಎಂದು ತಿಳಿದುಕೊಂಡಿದ್ದೇನೆ. ರಾಜಕೀಯವಾಗಿ ಬುದ್ದಿವಂತರಾಗಿದ್ದಾರೆಂದು ತಿಳಿದಿದ್ದೆ. ಇವರ ಜಗಳವನ್ನು ನೋಡಿದರೆ, ನನ್ನ ಅನಿಸಿಕೆ ತಪ್ಪು ಎನಿಸುತ್ತದೆ. 75 ಜನ ಸದಸ್ಯರು ಇರುವ ಈ ಮೇಲ್ಮನೆಯಲ್ಲಿ ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದಾಗಿದೆ. ನಿಮ್ಮ ಹಕ್ಕುಬಾಧ್ಯತೆಗಳನ್ನು ಪರಿಪಾಲಿಸಿ. ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಸರ್ಕಾರದಿಂದ ಪರಿಹಾರ ಪಡೆಯುವಂತಹ ಕೆಲಸವಾಗಬೇಕು. ಸಭಾಪತಿಗಳ ಮಾತಿಗೆ ಗೌರವ ನೀಡುವ ಕೆಲಸವಾಗಬೇಕು. ಸದನದಲ್ಲಿ ಶಿಸ್ತನ್ನು ಪಾಲಿಸುವುದು ಅಗತ್ಯ. ಭಾಷಣ ಮಾಡುವಾಗ ಕೆಲವೊಮ್ಮೆ ದಾರಿತಪ್ಪುವ ಕೆಲಸವಾಗುವಾದಾಗ ಸಭಾಪತಿಗಳು ಎಚ್ಚರಿಸುತ್ತಾರೆ ಎಂದರು.
ಬಿಜೆಪಿ ಅಧಿಕಾರದಲ್ಲಿದ್ದಾಗ ಕೇಂದ್ರದಿಂದಲೂ ಅನುದಾನ ತಂದಿಲ್ಲ. ತೆರಿಗೆ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂದು 15 ನೇ ಹಣಕಾಸು ಆಯೋಗದ ಅಧ್ಯಕ್ಷರು 11,495 ಕೋಟಿ ರೂ. ಶಿಫಾರಸ್ಸು ಮಾಡಿದರು. ನೀವು ಅಧಿಕಾರದಲ್ಲಿದ್ದಾಗ ಈ ಬಗ್ಗೆಯೂ ಕೇಳಲಿಲ್ಲ.
ನಿರ್ಮಲಾ ಸೀತಾರಾಮನ್ ಅವರನ್ನು ನಮ್ಮ ರಾಜ್ಯಕ್ಕೆ ಅನ್ಯಾಯ ಮಾಡಬೇಡಿ, ರಾಜ್ಯಕ್ಕೆ ಬರಬೇಕಾದ… pic.twitter.com/lFquuJZ59E
— Siddaramaiah (@siddaramaiah) March 18, 2025
ರಾಜ್ಯದಲ್ಲಿ ಪ್ರವಾಸಿಗರ ಭದ್ರತೆ, ಸುರಕ್ಷತೆಗೆ ವಿಶೇಷ ಆದ್ಯತೆ: ಗೃಹ ಸಚಿವ ಡಾ.ಜಿ ಪರಮೇಶ್ವರ್
ಮೈಸೂರು, ಕಲಬುರಗಿ ತಲಾ 7 ಕೋಟಿ ವೆಚ್ಚದಲ್ಲಿ ‘ನಿಮ್ಹಾನ್ಸ್’ ಮಾದರಿಯ ಸಂಸ್ಥೆ ಸ್ಥಾಪನೆ: ಸಚಿವ ಶರಣ ಪ್ರಕಾಶ್ ಪಾಟೀಲ್