ಬೆಂಗಳೂರು: ಇಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗದ ಬೆಂಗಳೂರು ನಗರ-2, ಕೋಲಾರ-1, ಕಲಬುರಗಿ-1, ದಾವಣಗೆರೆ-1, ತುಮಕೂರು-1, ಬಾಗಲಕೋಟೆ-1 ಮತ್ತು ವಿಜಯಪುರ-1 ಜಿಲ್ಲಾ ಲೋಕಾಯುಕ್ತ ಪೊಲೀಸ್ ಠಾಣೆಗಳಲ್ಲಿ ಒಟ್ಟು 8 ಸರ್ಕಾರಿ ಅಧಿಕಾರಿಗಳು ತಮ್ಮ ಬಲ್ಲ ಆದಾಯದ ಮೂಲಗಳಿಗಿಂತ ಹೆಚ್ಚು ಅಸಮತೋಲನ ಆಸ್ತಿಯನ್ನು ಹೊಂದಿದ್ದ ಬಗ್ಗೆ ಪ್ರಕರಣಗಳು ದಾಖಲಾಗಿರುತ್ತವೆ. ಇಂದಿನ ಲೋಕಾಯುಕ್ತ ದಾಳಿಯಲ್ಲಿ ಭ್ರಷ್ಟ ಅಧಿಕಾರಿಗಳ ಬಳಿ ಸಿಕ್ಕ ಅಕ್ರಮ ಆಸ್ತಿ ಪಾಸ್ತಿ ಎಷ್ಟು ಅಂತ ಮುಂದೆ ಪುಲ್ ಡೀಟೆಲ್ಸ್ ಇದೆ ಓದಿ.
ಈ ದಿನ ದಿನಾಂಕ: 06.03.2025 ರಂದು ಆರೋಪಿತ ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ ಮನೆ, ಕಛೇರಿ ಹಾಗೂ ಸಂಬಂಧಿಕರ ಮನೆಗಳು ಸೇರಿದಂತೆ ಒಟ್ಟು 40 ಸ್ಥಳಗಳಲ್ಲಿ ಏಕ ಕಾಲಕ್ಕೆ ಶೋಧನಾ ಕಾರ್ಯ ಕೈಗೊಂಡಿದ್ದು, ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಅಸಮತೋಲನ ಆಸ್ತಿ ಹೊಂದಿದ್ದ ಬಗ್ಗೆ ಮಾಹಿತಿ ತಿಳಿದುಬಂದಿರುತ್ತದೆ.
1) ಟಿ. ಡಿ. ನಂಜುಂಡಪ್ಪ, ಮುಖ್ಯ ಅಭಿಯಂತರರು, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ, ಗ್ರಾಮೀಣಾಭಿವೃದ್ಧಿ ಭವನ, ಆನಂದ ರಾವ್ ಸರ್ಕಲ್, ಬೆಂಗಳೂರು.
ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 7 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ.
(ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 9 ನಿವೇಶನಗಳು, 3 ವಾಸದ ಮನೆಗಳು, ರೂ. 1,20,00,000 ಬೆಲೆಬಾಳುವ ಕೃಷಿ ಜಮೀನು, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 7,46,47,466/-
(ಆ) ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 4,40,000/- ನಗದು, ರೂ. 56,05,487/- ಬೆಲೆ ಬಾಳುವ ಚಿನ್ನಾಭರಣಗಳು, ರೂ 39,30,000/- ಬೆಲೆ ಬಾಳುವ ವಾಹನಗಳು ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 99,75,487/-
(ಇ) ಒಟು ಆಸ್ತಿ ಮೌಲ್ಯ- ರೂ. 8,46,22,953/-
2) ಹೆಚ್. ಬಿ. ಕಲ್ಲೇಶಪ್ಪ, ಕಾರ್ಯಪಾಲಕ ಅಭಿಯಂತರರು, ಬಿಬಿಎಂಪಿ, ಬೆಂಗಳೂರು.
ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 6 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ.
(ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 2 ನಿವೇಶನಗಳು, 3 ವಾಸದ ಮನೆಗಳು, 2 ಎಕರೆ ಕೃಷಿ ಜಮೀನು. ಎಲ್ಲಾ ಸೇರಿ ಒಟ್ಟು ಮೌಲ್ಯ ರೂ. 4,97,34,000/-
(ಆ) ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 32,92,700/- ನಗದು, ರೂ 15,10,963/- ಬೆಲೆ ಬಾಳುವ ಚಿನ್ನಾಭರಣಗಳು, ರೂ. 35,15,000/- ಬೆಲೆಬಾಳುವ ವಾಹನಗಳು, ರೂ. 70,00,000/- ಬೆಲೆಬಾಳುವ ಇತರೆ ಗೃಹೋಪಯೋಗಿ ವಸ್ತುಗಳು(ನಿಶ್ಚಿತ ಠೇವಣಿ ಸೇರಿ) ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 1,53,18,663/-
(ಇ) ಒಟು ಆಸ್ತಿ ಮೌಲ್ಯ- ರೂ 6,50,52,663/-
3) ನಾಗರಾಜ್ ಜಿ, ಸಹಾಯಕ ಕಾರ್ಯಪಾಲಕ ಅಭಿಯಂತರರು(ವಿ), ಬೆಸ್ಕಾಂ, ಕೆ.ಎಸ್.ಎಸ್.ಐ.ಡಿ.ಸಿ ಕಟ್ಟಡ, ರಾಜಾಜಿನಗರ, ಬೆಂಗಳೂರು.
ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 3 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡAತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ.
(ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 2 ನಿವೇಶನ, 1 ವಾಸದ ಮನೆ, 10-30 ಎಕರೆ ಕೃಷಿ ಜಮೀನು. ಎಲ್ಲಾ ಸೇರಿ ಒಟ್ಟು ಮೌಲ್ಯ ರೂ. 1,57,87,000/-
(ಆ) ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 6,00,000/- ನಗದು, ಮತ್ತು ರೂ. 1,98,000/- ಹಳೆಯ ನೋಟುಗಳು, ರೂ 20,00,000/- ಬೆಲೆ ಬಾಳುವ ಚಿನ್ನಾಭರಣಗಳು, ರೂ. 21,00,000/- ಬೆಲೆ ಬಾಳುವ ವಾಹನಗಳು, ರೂ. 12,00,000/- ಬೆಲೆಬಾಳುವ ಇತರೆ ಗೃಹೋಪಯೋಗಿ ವಸ್ತುಗಳು ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 60,98,000/-
(ಇ) ಒಟು ಆಸ್ತಿ ಮೌಲ್ಯ- ರೂ 2,18,85,000/-
4) ಜಗನ್ನಾಥ, ಯೋಜನಾ ಜಾರಿ ಘಟಕ, ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ, ಕೆ. ಆರ್. ಸರ್ಕಲ್, ಬೆಂಗಳೂರು.
ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 6 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ.
(ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 2 ನಿವೇಶನಗಳು, 2 ವಾಸದ ಮನೆಗಳು, 48 ಎಕರೆ ಕೃಷಿ ಜಮೀನು. ಎಲ್ಲಾ ಸೇರಿ ಒಟ್ಟು ಮೌಲ್ಯ ರೂ. 2,85,00,000/-
(ಆ) ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 1,90,000/- ನಗದು, ರೂ 72,00,000/- ಬೆಲೆ ಬಾಳುವ ಚಿನ್ನಾಭರಣಗಳು, ರೂ. 19,20,000/- ಬೆಲೆಬಾಳುವ ವಾಹನಗಳು, ರೂ. 27,00,000/- ಬ್ಯಾಂಕ್ ಉಳಿತಾಯ, ರೂ. 50,00,000/- ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಹಾಗೂ ವಿವಾಹ ಖರ್ಚು. ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 1,70,10,000/-
(ಇ) ಒಟು ಆಸ್ತಿ ಮೌಲ್ಯ- ರೂ 4,55,10,000/-
5) ಡಾ. ನಾಗರಾಜ್. ಜೆ. ಎಸ್, ಜಿಲ್ಲಾ ಅಂಕಿತ ಅಧಿಕಾರಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ, ದಾವಣಗೆರೆ ಜಿಲ್ಲೆ.
ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 5 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ.
(ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 1 ನಿವೇಶನ, 4 ವಾಸದ ಮನೆಗಳು, 3 ಎಕರೆ ಕೃಷಿ ಜಮೀನು. ಎಲ್ಲಾ ಸೇರಿ ಒಟ್ಟು ಮೌಲ್ಯ ರೂ. 4,49,02,100/-
(ಆ) ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 1,17,900/- ನಗದು, ರೂ 94,20,075/- ಬೆಲೆ ಬಾಳುವ ಚಿನ್ನಾಭರಣಗಳು, ರೂ. 38,18,000/- ಬೆಲೆಬಾಳುವ ವಾಹನಗಳು, ರೂ. 32,00,000/- ಇತರೆ ಮತ್ತು ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು. ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 1,65,55,975/-
(ಇ) ಒಟು ಆಸ್ತಿ ಮೌಲ್ಯ- ರೂ 6,14,58,075/-
6) ಡಾ. ಜಗದೀಶ್. ಪಿ, ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್, ಪ್ರಾಥಮಿಕ ಆರೋಗ್ಯ ಕೇಂದ್ರ, ತಾವರೆಕೆರೆ, ಶಿರಾ ತಾಲ್ಲೂಕು, ತುಮಕೂರು ಜಿಲ್ಲೆ.
ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 6 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ.
(ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 5 ನಿವೇಶನ, 4 ವಾಸದ ಮನೆ, 14-30 ಎಕರೆ ಕೃಷಿ ಜಮೀನು, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ. 1,96,24,000/-
(ಆ) ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 1,15,380/- ನಗದು, ರೂ 87,56,000/- ಬೆಲೆ ಬಾಳುವ ಚಿನ್ನಾಭರಣಗಳು, ರೂ. 18,25,500/- ಬೆಲೆಬಾಳುವ ವಾಹನಗಳು, ರೂ. 8,00,000/- ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು. ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 1,14,96,880/-
(ಇ) ಒಟು ಆಸ್ತಿ ಮೌಲ್ಯ- ರೂ 3,11,20,880/-
7) ಮಲ್ಲಪ್ಪ ಸಾಬಣ್ಣ ದುರ್ಗದ್, ಎಫ್.ಡಿ.ಎ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ, ಬಾಗಲಕೋಟೆ ಜಿಲ್ಲೆ.
ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 3 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ.
(ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 4 ನಿವೇಶನಗಳು, 3 ವಾಸದ ಮನೆಗಳು, 13 ಎಕರೆ ಕೃಷಿ ಜಮೀನು. ಎಲ್ಲಾ ಸೇರಿ ಒಟ್ಟು ಮೌಲ್ಯ ರೂ. 9415000/-
(ಆ) ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 16,354/- ನಗದು, ರೂ 2,56,530/- ಬೆಲೆ ಬಾಳುವ ಚಿನ್ನಾಭರಣಗಳು, ರೂ. 80,50,000/- ಬೆಲೆಬಾಳುವ ವಾಹನಗಳು, ರೂ. 14,87,682/- ಬೆಲೆಬಾಳುವ ಇತರೆ ಗೃಹೋಪಯೋಗಿ ವಸ್ತುಗಳು. ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 98,10,566/-
(ಇ) ಒಟು ಆಸ್ತಿ ಮೌಲ್ಯ- ರೂ 1,92,25,566/-
8) ಶಿವಾನಂದ ಶಿವಶಂಕರ ಕೆಂಬಾವಿ, ಪ್ರಥಮ ದರ್ಜೆ ಸಹಾಯಕರು, ಕರ್ನಾಟಕ ಗೃಹ ಮಂಡಳಿ, ವಿಜಯಪುರ.
ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 4 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ.
(ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 3 ವಾಸದ ಮನೆಗಳು, 4 ಎಕರೆ ಕೃಷಿ ಜಮೀನು. ಎಲ್ಲಾ ಸೇರಿ ಒಟ್ಟು ಮೌಲ್ಯ ರೂ. 2,21,00,000/-
(ಆ) ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 15,08,000/- ನಗದು, ರೂ 26,22,600/- ಬೆಲೆ ಬಾಳುವ ಚಿನ್ನಾಭರಣಗಳು, ರೂ. 57,00,000/- ಬೆಲೆಬಾಳುವ ವಾಹನಗಳು, ರೂ. 45,00,000/- ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು.. ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 1,43,30,600/-
(ಇ) ಒಟು ಆಸ್ತಿ ಮೌಲ್ಯ- ರೂ 3,64,30,600/-
ವರದಿ: ವಸಂತ ಬಿ ಈಶ್ವರಗೆರೆ
BREAKING: ವಿಧಾನಸಭೆಯಲ್ಲಿ ಬೆಂಗಳೂರು ಅರಮನೆ ಭೂ ಬಳಕೆ ಮತ್ತು ನಿಯಂತ್ರಣ ವಿಧೇಯಕ 2025 ಅಂಗೀಕಾರ
ನೂತನ ವಿವಿ ವಿಲೀನ ಮಾಡಲು ಮುಂದಾಗಿದ್ದೇವೆ, ಸಂಪೂರ್ಣವಾಗಿ ವಜಾ ಮಾಡುತ್ತಿಲ್ಲ: ಡಿಸಿಎಂ ಡಿಕೆಶಿ ಸ್ಪಷ್ಟನೆ
GOOD NEWS : ಇನ್ಮುಂದೆ ಹರಟೆ ಹೊಡೆಯಲು ಶಾಸಕರಿಗೂ ‘ಕ್ಲಬ್’ ವ್ಯವಸ್ಥೆ : ಸ್ಪೀಕರ್ ಯುಟಿ ಖಾದರ್ ಹೇಳಿಕೆ