ಕೆಎನ್ಎನ್ಡಿಜಿಟಲ್ ಡೆಸ್ಕ್ : ಮಹೀಂದ್ರಾ ಮತ್ತು ಮಹೀಂದ್ರಾ ಅಧ್ಯಕ್ಷರಾದ ಆನಂದ್ ಮಹೀಂದ್ರ ಅವರು ಮೈಕ್ರೋಬ್ಲಾಗಿಂಗ್ ಪ್ಲಾಟ್ಫಾರ್ಮ್ ಟ್ವಿಟರ್’ನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಇನ್ನು ಆನಂದ್ ಮಹೀಂದ್ರಾ ತಮ್ಮ ಟ್ವೀಟ್ಗಳಿಗಾಗಿ ಮುಖ್ಯಾಂಶಗಳಲ್ಲಿ ಉಳಿದಿದ್ದು, ಅವ್ರ ಇತ್ತೀಚಿನ ಟ್ವೀಟ್ ಭಾರತದ ನಕ್ಷೆಯನ್ನ ಬಳಕೆದಾರರೊಂದಿಗೆ ಹಂಚಿಕೊಂಡಿದ್ದಾರೆ. ಈ ನಕ್ಷೆಯಲ್ಲಿ, ಭಾರತದ ವಿವಿಧ ರಾಜ್ಯಗಳಲ್ಲಿ ಯಾವ ರಾಜ್ಯದಲ್ಲಿ ಎಷ್ಟು ಶೇಕಡಾ ಜನರು ಕಾರುಗಳನ್ನ ಹೊಂದಿದ್ದಾರೆ ಅನ್ನೋದನ್ನ ತೋರಿಸಲಾಗಿದೆ.
ಅಂದ್ಹಾಗೆ, ಈ ನಕ್ಷೆಯಲ್ಲಿ ತೋರಿಸಿರುವ ಡೇಟಾವು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2019-2021 ಆಧರಿಸಿದೆ. ನಕ್ಷೆಯಲ್ಲಿ ನೀಡಿರುವ ಅಂಕಿ ಅಂಶವನ್ನ ನೋಡಿದ್ರೆ, ದೇಶದ ಸರಾಸರಿ 7.5 ಪ್ರತಿಶತ ಮನೆಗಳು ಖಂಡಿತವಾಗಿಯೂ ಕಾರನ್ನ ಹೊಂದಿವೆ ಎಂದು ತಿಳಿದಿದೆ. ಯಾವ ರಾಜ್ಯದಲ್ಲಿ ಎಷ್ಟು ಶೇಕಡಾ ಕಾರು ಮಾಲೀಕರು ಇದ್ದಾರೆ. ಇನ್ನು ಆನಂದ್ ಮಹೀಂದ್ರಾ ಜನರು ಇದರ ಬಗ್ಗೆ ಏನು ಯೋಚಿಸುತ್ತಾರೆ ಎಂದು ಕೇಳಿದ್ದಾರೆ.
ಆನಂದ್ ಮಹೀಂದ್ರಾ ಅವರ ಟ್ವೀಟ್ಗೆ ಪ್ರತಿಕ್ರಿಯಿಸಿದ ವ್ಯಕ್ತಿಯೊಬ್ಬರು, ಸಾರ್ವಜನಿಕ ಸಾರಿಗೆ ಉತ್ತಮವಾಗಿರುವಲ್ಲಿ ಕಾರು ಮಾಲೀಕರ ಸಂಖ್ಯೆ ಕಡಿಮೆ ಎಂದು ನನಗೆ ಅನಿಸುತ್ತದೆ ಎಂದು ಬರೆದಿದ್ದಾರೆ. ಸಾರ್ವಜನಿಕ ಸಾರಿಗೆಯು ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ ಮುಂತಾದ ಇತರ ರಾಜ್ಯಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಜನರು ಹೇಳಿದರು. ಮತ್ತೊಂದೆಡೆ, ಅರುಣಾಚಲ ಪ್ರದೇಶದಂತಹ ಗುಡ್ಡಗಾಡು ಪ್ರದೇಶಗಳಲ್ಲಿ ಸಾರ್ವಜನಿಕ ಸಾರಿಗೆಯ ಕೊರತೆಯಿದೆ, ಇದರಿಂದಾಗಿ ಅಂತಹ ಪ್ರದೇಶಗಳಲ್ಲಿ ಕಾರುಗಳನ್ನ ಹೊಂದಿರುವವರ ಸಂಖ್ಯೆಯೂ ಹೆಚ್ಚಾಗಿದೆ.
What are your conclusions when you see this map? I’m curious… pic.twitter.com/DD4lz2Lrzx
— anand mahindra (@anandmahindra) December 27, 2022
ಅಂದ್ಹಾಗೆ, ಆನಂದ್ ಮಹೀಂದ್ರಾ ಅವರ ಈ ಟ್ವೀಟ್ 1.9 ಮಿಲಿಯನ್ ವೀಕ್ಷಣೆಗಳು, 2015 ರಿಟ್ವೀಟ್ಗಳು, 380 ಕೋಟ್ ಟ್ವೀಟ್ಗಳು ಮತ್ತು 22.5K ಲೈಕ್ಗಳನ್ನು ಪಡೆದುಕೊಂಡಿದೆ. ಅದ್ರಂತೆ, ಈ ನಕ್ಷೆ ಅನ್ವಯ, ಬಿಹಾರದಲ್ಲಿ ಕೇವಲ 2 ಪ್ರತಿಶತದಷ್ಟು ಮನೆಗಳಲ್ಲಿ ಮಾತ್ರ ಕಾರು ಇದೆ ಎಂಬುದು ಸ್ಪಷ್ಟವಾಗುತ್ತದೆ. ಆದ್ರೆ, ಗೋವಾ ಹೆಚ್ಚಿನ ಕಾರು ಮಾಲೀಕರು ವಾಸಿಸುವ ರಾಜ್ಯವಾಗಿದೆ. ಯಾಕಂದ್ರೆ, ಈ ಅಂಕಿ ಅಂಶವು ಗೋವಾದ 45.2 ಪ್ರತಿಶತದಷ್ಟು ಮನೆಗಳಲ್ಲಿ ಕಾರುಗಳಿವೆ ಎಂದು ತೋರಿಸುತ್ತದೆ. ಉಳಿದ ರಾಜ್ಯಗಳ ಸ್ಥಿತಿ ಹೇಗಿದೆ.? ಎಂಬುದನ್ನ ಮೇಲೆ ನೀಡಿರುವ ಚಿತ್ರದಲ್ಲಿ ನೀವು ಸ್ಪಷ್ಟವಾಗಿ ನೋಡಬಹುದು.
BIGG NEWS : ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಜನರ ಸೇವಕರು, ನ್ಯಾಯಾಂಗವೂ ಯೋಚಿಸಬೇಕು ; ಕಿರಣ್ ರಿಜಿಜು
BIGG NEWS : ನಾಡಿದ್ದು ಕರ್ನಾಟಕಕ್ಕೆ ಕೇಂದ್ರ ಗೃಹ ಸಚಿವರ ಆಗಮನ : ರಾಜ್ಯದಲ್ಲಿ ಮೂರು ದಿನ ‘ಅಮಿತ್ ಷಾ’ ಸಂಚಲನ
BIGG NEWS : ವಿಧಾನಸಭೆಯಲ್ಲಿ ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ ವಿಧೇಯಕ ಅಂಗೀಕಾರ