ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಗ್ರಾಹಕರು ನಿರಂತರವಾಗಿ ಸ್ಮಾರ್ಟ್‌ಫೋನ್’ಗಳ ಧಾವಂತದಲ್ಲಿದ್ದಾರೆ. ರಾತ್ರಿ ಮಲಗುವಾಗಲೂ ಸ್ಮಾರ್ಟ್‌ಫೋನ್’ಗಳನ್ನ ಹತ್ತಿರ ಇಟ್ಟುಕೊಳ್ಳುವವರು ಅನೇಕರಿದ್ದಾರೆ. ರಾತ್ರಿ ಕರೆ ಬಂದರೆ ಅದಕ್ಕೆ ಉತ್ತರಿಸಲು ಎದ್ದು ಮೇಜಿನ ಬಳಿ ಹೋಗಬೇಕಿಲ್ಲ, ನಿದ್ದೆ ಕೆಡುವುದಿಲ್ಲ ಅನ್ನೋದು ಅವರ ವಾದ. ಆದ್ರೆ, ಮೊಬೈಲ್ ಬಳಕೆದಾರರಿಗೆ ರಾತ್ರಿ ವೇಳೆ ಮೊಬೈಲ್ ಇಟ್ಟುಕೊಳ್ಳುವುದು ಅಥವಾ ತಲೆದಿಂಬಿನ ಕೆಳಗೆ ಫೋನ್ ಇಟ್ಟುಕೊಂಡು ಮಲಗುವುದರಿಂದ ಅನೇಕ ಅನಾಹುತಗಳು ಸಂಭವಿಸುತ್ತವೆ ಎಂಬುದು ತಿಳಿದಿರುವುದಿಲ್ಲ. ನೀವು ಈ ಅನಾನುಕೂಲಗಳನ್ನ ತಪ್ಪಿಸಲು ಬಯಸಿದರೆ ನೀವು ಮಲಗುವ ಸಮಯದಲ್ಲಿ ಸ್ಮಾರ್ಟ್‌ಫೋನ್’ನ್ನ 3 ರಿಂದ 4 ಅಡಿ ದೂರದಲ್ಲಿ ಇಟ್ಟುಕೊಳ್ಳಬೇಕು. ಫೋನ್ ಹತ್ತಿರ ಇಟ್ಟುಕೊಳ್ಳುವುದರಿಂದ ಆಗುವ ಹಾನಿಗಳೇನು ಗೊತ್ತಾ.?
ನಿದ್ರಾ ಭಂಗ : ಸ್ಮಾರ್ಟ್‌ಫೋನ್’ಗಳಿಂದ ನೀಲಿ ಬೆಳಕು ಮೆಲಟೋನಿನ್ ಉತ್ಪಾದನೆಯನ್ನ ಅಡ್ಡಿಪಡಿಸುತ್ತದೆ. ನಿದ್ರೆಯ ಗುಣಮಟ್ಟವನ್ನ ಕಡಿಮೆ ಮಾಡುತ್ತದೆ. ಇದಲ್ಲದೇ, ಫೋನ್ ನೋಟಿಫಿಕೇಶನ್ ಮತ್ತು ಅಲರ್ಟ್’ಗಳು ನಿದ್ರೆಗೆ ಭಂಗ ತರಬಹುದು.
ಸ್ಪೋಟದ ಅಪಾಯ : ಸ್ಮಾರ್ಟ್‌ಫೋನ್ ದಿಂಬಿನ ಕೆಳಗೆ ಇಡುವುದರಿಂದ ಶಾಖದ ಶೇಖರಣೆಗೆ ಕಾರಣವಾಗಬಹುದು. ಇದು ಫೋನ್ ಅತಿಯಾಗಿ ಬಿಸಿಯಾಗಲು ಕಾರಣವಾಗುತ್ತದೆ, ಸ್ಪೋಟದ ಅಪಾಯವನ್ನ ಹೆಚ್ಚಿಸುತ್ತದೆ. ಇದಲ್ಲದೇ ಫೋನ್ ನೋಟಿಫಿಕೇಶನ್’ಗಳ ಕಂಪನವು ನಿಮ್ಮನ್ನು ಎಚ್ಚರಗೊಳಿಸುತ್ತದೆ. ಇದು ಮಾನಸಿಕ ಅಂತಕಕ್ಕೂ ಕಾರಣವಾಗುತ್ತದೆ.
ಮಾನಸಿಕ ಒತ್ತಡ : ಸ್ಮಾರ್ಟ್‌ಫೋನ್’ನ ನಿರಂತರ ಬಳಕೆಯು ಮಾನಸಿಕ ಒತ್ತಡ ಮತ್ತು ಆತಂಕಕ್ಕೆ ಕಾರಣವಾಗಬಹುದು. ರಾತ್ರಿಯಲ್ಲಿ ಫೋನ್ ನಿಮ್ಮೊಂದಿಗೆ ಇಟ್ಟುಕೊಳ್ಳುವುದರಿಂದ ನಿಮ್ಮ ಮನಸ್ಸಿಗೆ ಸಂಪೂರ್ಣ ವಿಶ್ರಾಂತಿ ಸಿಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನೀವು ನೀವು ದಿನವಿಡೀ ಒತ್ತಡದಲ್ಲಿರುತ್ತೀರಾ.
ಆರೋಗ್ಯ ಸಮಸ್ಯೆಗಳು : ಸ್ಮಾರ್ಟ್‌ಫೋನ್’ಗೆ ಹತ್ತಿರವಾಗಿ ದೀರ್ಘಕಾಲ ಉಳಿಯುವುದರಿಂದ ಕಣ್ಣು ಉರಿ, ತಲೆನೋವು, ಕಿವಿ ನೋವು ಉಂಟಾಗುತ್ತದೆ. ರಾತ್ರಿಯಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ದೂರವಿಡುವುದು ನಿಮ್ಮ ನಿದ್ರೆಯನ್ನ ಸುಧಾರಿಸುವುದು ಮಾತ್ರವಲ್ಲದೆ ನಿಮ್ಮ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ ಉತ್ತಮ ನಿದ್ರೆ ಮತ್ತು ಆರೋಗ್ಯಕ್ಕಾಗಿ ನಿಮ್ಮ ಹಾಸಿಗೆಯಿಂದ ದೂರವಿರುವುದು ಉತ್ತಮ.
BREAKING : ಕ್ವಾರ್ಟರ್ ಫೈನಲ್’ನಲ್ಲಿ ಸೋತು ಕಣ್ಣೀರಿಡುತ್ತಾ ‘ಒಲಿಂಪಿಕ್ಸ್’ನಿಂದ ನಿರ್ಗಮಿಸಿದ ಬಾಕ್ಸರ್ ‘ನಿಶಾ ದಹಿಯಾ’
ಕರ್ನಾಟಕ ಸೇರಿ ಕೆಲ ರಾಜ್ಯಗಳಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರ ಕಡೆಗಣನೆ: HDD ಬೇಸರ
BREAKING: ಬೆಳಗಾವಿಯಲ್ಲಿ ಘೋರ ದುರಂತ: ದೇವಸ್ಥಾನ ಸ್ವಚ್ಛಗೊಳಿಸುವಾಗ ವಿದ್ಯುತ್ ಸ್ಪರ್ಶಿಸಿ ಇಬ್ಬರು ದುರ್ಮರಣ