ಕೆಎನ್ಎನ್ಡಿಜಿಟಲ್ ಡೆಸ್ಕ್ : ನಮ್ಮ ದೈನಂದಿನ ಜೀವನದಲ್ಲಿ ಚಹಾಕ್ಕೆ ಅಪಾರ ಮಹತ್ವವಿದೆ. ಬೆಳಿಗ್ಗೆ ಹೇಳುತ್ತಲೇ ಚಹಾ ಕುಡಿಯು ಆನೇಕ ಜನರಿದ್ದಾರೆ. ಇನ್ನು ಗಂಟೆಗೊಮ್ಮೆ ಚಹಾ ಕುಡಿಯುವವರೂ ಇದ್ದಾರೆ. ಕೆಲವರಿಗೆ ಚಹಾ ಚಟವಿರುತ್ತೆ. ಇತ್ತೀಚಿನ ದಿನಗಳಲ್ಲಿ ಅನೇಕ ರೀತಿಯ ಚಹಾಗಳು ಮಾಡಲಾಗ್ತಿದ್ದು, ಶುಂಠಿ ಚಹಾ, ಗ್ರೀನ್ ಟೀ, ಮಸಾಲಾ ಚಹಾ, ತಂದೂರಿ ಚಹಾ ಮತ್ತು ಇತ್ಯಾದಿ. ಅದ್ರಂತೆ, ಪ್ರತಿದಿನ ಚಹಾ ಕುಡಿಯುವುದು ನಮ್ಮನ್ನ ಶಾಂತವಾಗಿಡುವುದು ಮಾತ್ರವಲ್ಲದೇ ಅತಿಯಾದ ಒತ್ತಡದಿಂದ ಸ್ವಲ್ಪ ಪರಿಹಾರವನ್ನ ನೀಡುತ್ತದೆ. ಹೆಚ್ಚು ಚಹಾ ಕುಡಿಯುವುದು ಆರೋಗ್ಯಕ್ಕೆ ಅಪಾಯಕಾರಿಯಾದರೂ, ಅನೇಕ ಜನರು ಚಹಾ ಕುಡಿದ ನಂತರ ಇತರ ಆಹಾರಗಳನ್ನ ತಿನ್ನುವ ಅಭ್ಯಾಸವನ್ನು ಹೊಂದಿದ್ದಾರೆ.
ಆದಾಗ್ಯೂ, ಚಹಾ ಕುಡಿದ ನಂತರ, ಕೆಲವು ಆಹಾರ ಪದಾರ್ಥಗಳು ಜೀರ್ಣವಾಗುವುದನ್ನ ತಡೆಯುತ್ವೆ. ದೇಹವು ಆಹಾರದ ಪೌಷ್ಠಿಕಾಂಶದ ಮೌಲ್ಯವನ್ನ ಹೀರಿಕೊಳ್ಳುವುದನ್ನ ತಡೆಯುವ ಅಡೆತಡೆಗಳನ್ನ ಸೃಷ್ಟಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ತಜ್ಞರು ಕೆಲವು ಆಹಾರ ಪದಾರ್ಥಗಳನ್ನ ಚಹಾ ಕುಡಿದ ತಕ್ಷಣ ಸೇವಿಸಬಾರದು ಎಂದು ಹೇಳುತ್ತಾರೆ. ಚಹಾವು ಜೀವಸತ್ವಗಳು ಮತ್ತು ಖನಿಜಗಳ ಹೀರಿಕೊಳ್ಳುವಿಕೆಯಲ್ಲಿ ಹಸ್ತಕ್ಷೇಪ ಮಾಡುತ್ತದೆ ಎಂದು ತೋರಿಸಲಾಗಿದೆ. ಚಾಹದಲ್ಲಿರುವ ಟ್ಯಾನಿನ್’ಗಳು ಗಾಢ ಕಂದು ಬಣ್ಣವನ್ನ ನೀಡುತ್ತವೆ. ಅಂತೆಯೇ, ಹಸಿರು ಚಹಾವು ಕ್ಯಾಟೆಚಿನ್’ಗಳು ಮತ್ತು ಫ್ಲೇವನಾಯ್ಡ್’ಗಳನ್ನ ಹೊಂದಿರುತ್ತದೆ. ಟ್ಯಾನಿನ್’ಗಳ ಹೆಚ್ಚಿನ ಸಾಂದ್ರತೆಯು ಪ್ರೋಟೀನ್ ಮತ್ತು ಕಬ್ಬಿಣದ ಹೀರಿಕೊಳ್ಳುವಿಕೆಯನ್ನ ಪ್ರತಿಬಂಧಿಸುತ್ತದೆ. ಅಂತಹ ಸಮಯದಲ್ಲಿ ಪ್ರೋಟೀನ್’ಗಳನ್ನು ಸೇವಿಸಿದ ನಂತ್ರ ಚಹಾವನ್ನ ಕುಡಿಯಬೇಡಿ.
ಹಸಿ ತರಕಾರಿಗಳನ್ನು ಸೇವಿಸಿದ ನಂತರವೂ ಚಹಾ ಕುಡಿಯದಿರುವುದು ಉತ್ತಮ ಎಂದು ಹೇಳಲಾಗುತ್ತದೆ. ಎಲೆ ತರಕಾರಿಗಳಲ್ಲಿರುವ ಗೊಯಿಟ್ರೋಜೆನ್’ಗಳು ಥೈರಾಯ್ಡ್’ನಿಂದ ಅಯೋಡಿನ್ ಹೀರಿಕೊಳ್ಳುವುದನ್ನ ತಡೆಯುತ್ತದೆ ಮತ್ತು ಅಯೋಡಿನ್ ಕೊರತೆಯನ್ನ ಉಂಟುಮಾಡುತ್ತದೆ. ಹಸಿ ತರಕಾರಿಗಳನ್ನ ಸೇವಿಸಿದ ನಂತರವೂ ಚಹಾವನ್ನು ತಪ್ಪಿಸಬೇಕು. ಏಕದಳ ಧಾನ್ಯಗಳು ಮತ್ತು ಸಿರಿಧಾನ್ಯಗಳು ಫೈಟೇಲ್’ನಿಂದ ಸಮೃದ್ಧವಾಗಿವೆ. ಅವು ಕಬ್ಬಿಣ, ಸತು ಮತ್ತು ಮೆಗ್ನೀಸಿಯಮ್’ನೊಂದಿಗೆ ಸಹ ಸಂಬಂಧ ಹೊಂದಿವೆ. ಅಂತಹ ಪರಿಸ್ಥಿತಿಯಲ್ಲಿ, ಚಹಾ ಕುಡಿದ ನಂತ್ರ ಮೊಳಕೆ ಕಾಳುಗಳನ್ನ ತಿನ್ನಬಾರದು. ಈ ರೀತಿ ಚಹಾ ಕುಡಿದ ತಕ್ಷಣ ಈ ಆಹಾರಗಳನ್ನ ಸೇವಿಸದಿರುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ.
BREAKING NEWS: 2023ರ ಮಾರ್ಚ್ ನಲ್ಲಿ ದೆಹಲಿಯಲ್ಲಿ ಜಿ-20 ವಿದೇಶಾಂಗ ಸಚಿವರ ಸಭೆ – ಉನ್ನತ ಮೂಲಗಳ ಮಾಹಿತಿ