ಕೆಎನ್ಎನ್ ಡಿಜಿಟಲ್ ಡೆಸ್ಕ್ : ಎಲ್ಲರಿಗಿಂತ ನನ್ನ ಮುಖ ಚೆನ್ನಾಗಿ ಕಾಣಬೇಕು. ಎಲ್ಲರ ನಡುವೆ ನನ್ನ ಫೇಸ್ ಬ್ರೈಟ್ ಆಗಿ ಕಾಣಬೇಕು. ಆದರೆ ಮೊಡವೆಗಳಿಂದ ನನ್ನ ಸೌಂದರ್ಯ ಹಾಳಾಗಿದೆ ಅಂತ ನೀವು ಕೊರಗುತ್ತಿದ್ದೀರಾ? ಮೊಡವೆಗಳ ಬಗ್ಗೆ ಚಿಂತೆ ಬೇಡ. ಸಾಮಾನ್ಯವಾಗಿ ಮೊಡವೆಗಳಿಂದ ಮುಖದ ಲಕ್ಷಣವೇ ಬದಲಾಗುತ್ತದೆ. ಎಷ್ಟು ಮೆಡಿಸಿನ್ ಹಚ್ಚಿದ್ದರೂ ಮೊಡವೆ ಮಾತ್ರ ಕಡಿಮೆಯಾಗಲ್ಲ ಅಂತ ಬೇಜಾರಾಗುವವರೆ ಜಾಸ್ತಿ. ಮೊಡವೆಗಳಿಂದ ಮುಖದಲ್ಲಿ ಚಿಕ್ಕ ಚಿಕ್ಕ ರಂದ್ರವಾಗುತ್ತದೆ. ರಂದ್ರಗಳಿಂದ ಮುಖದ ಕಾಂತಿ ಹಾಳಾಗುವುದು ಸಹಜ. ಇದಕ್ಕೆ ಸೂಕ್ತ ಪರಿಹಾರ ನಿಮ್ಮ ಹತ್ತಿರವೇ ಇದೆ.
ಹವಮಾನ ಬದಲಾದಂತೆ ಸಾಮಾನ್ಯವಾಗಿ ಮೊಡವೆಗಳ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಮೊಡವೆಗಳ ನಿವಾರಣೆಗೆ ಹಚ್ಚುವ ಔಷಧಿಗಳು ಒಂದೆರಡಲ್ಲ. ಮುಖಕ್ಕೆ ಹಚ್ಚಿದ ಆಯಿಂಟ್ಮೆಂಟ್ಗಳಿಂದೇನೋ ಸ್ವಲ್ಪ ಸಮಯ ಮೊಡವೆಗಳು ಕಡಿಮೆಯಾಗುತ್ತದೆ. ಆದರೆ ಅದರಿಂದ ಮುಖದ ಕಾಂತಿ ಕಡಿಮೆಯಾಗುತ್ತದೆ. ಹೀಗಾಗಿ ಮನೆ ಮದ್ದನ್ನು ಬಳಸುವುದು ಹೆಚ್ಚು ಸೂಕ್ತ. ಮೊಡವೆಗಳ ನಿವಾರಣೆಗೆ ಶ್ರೀಗಂಧವನ್ನು ಬಳಸಬಹುದು.
ಶ್ರೀಗಂಧ ಆಂಟಿ ಸೆಪ್ಟಿಕ್ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಬೇಸಿಗೆಯಲ್ಲಿ ಶ್ರೀಗಂಧ ಮುಖವನ್ನು ತಂಪಾಗಿಡುತ್ತದೆ. ಮಾತ್ರವಲ್ಲದೆ ಮೊಡವೆ ಕಲೆ, ಚಿಕ್ಕ ಚಿಕ್ಕ ರಂದ್ರವನ್ನು ಕಡಿಮೆ ಮಾಡುವ ಶಕ್ತಿಯನ್ನು ಹೊಂದಿದೆ. ಮುಖದ ಕಾಂತಿಯನ್ನು ಹೆಚ್ಚಿಸುವ ಈ ಶ್ರೀಗಂಧವನ್ನು ಬಳಸುವುದು ಹೇಗೆ ಎನ್ನುವುದನ್ನ ತಿಳಿಸಲಾಗಿದೆ.
* ಸ್ಕಿನ್ ಕ್ಲೀನ್ಸರ್ ಮೂರು ಟೀ ಸ್ಪೂನ್ ಶ್ರೀಗಂಧದ ಪುಡಿ ಮತ್ತು 2 ಟೀ ಸ್ಪೂನ್ ಹಾಲನ್ನು ತೆಗೆದುಕೊಂಡು ಚೆನ್ನಾಗಿ ಬೆರೆಸಿ. ಮಿಶ್ರಣವನ್ನು ಮುಖ ಮತ್ತು ಕುತ್ತಿಗೆ ಭಾಗಕ್ಕೆ ಚೆನ್ನಾಗಿ ಹಚ್ಚಬೇಕು. ಮುಖಕ್ಕೆ ಹಚ್ಚಿದ ಪೇಸ್ಟ್ ಒಣಗಿದ ನಂತರ ತಣ್ಣೀರಿನಿಂದ ತೊಳೆಯಿರಿ.
* ಮೊಡವೆ ನಿವಾರಣೆ ಮೊಡವೆಯಿಂದ ಮುಜುಗರಕ್ಕೆ ಒಳಗಾಗಿದ್ದರೆ, ಇನ್ನು ಮುಂದೆ ಚಿಂತೆ ಬಿಡಿ. ಎರಡು ಚಮಚ ಶ್ರೀಗಂಧದ ಪುಡಿ, ಒಂದು ಚಮಚ ಅರಿಶಿಣ ಮತ್ತು ಒಂದು ಚಮಚ ಅಲೋವೆರಾ ಜೆಲ್ ಬೇಕು. ಈ ಮೂರನ್ನು ಚೆನ್ನಾಗಿ ಮಿಶ್ರಣ ಮಾಡಿ. ದಪ್ಪ ಪೇಸ್ಟ್ನಂತೆ ಮಿಶ್ರಣ ಮಾಡಬೇಕು. ಮೊಡವೆ ಇರುವ ಜಾಗಕ್ಕೆ ಸಿದ್ಧವಾಗಿರುವ ಪೇಸ್ಟ್ ಹಚ್ಚಬೇಕು. ಬಳಿಕ ಸುಮಾರು 20 ನಿಮಿಷಗಳ ಕಾಲ ಬಿಡಬೇಕು. ನಂತರ ನೀರಿನಲ್ಲಿ ತೊಳೆಯಿರಿ.
ಮುಖದ ಸುಕ್ಕು ನಿವಾರಣೆ
ಮುಕ್ಕದಲ್ಲಿ ಸುಕ್ಕು ಅಥವಾ ನೆರಿಗೆ ಕಾಣಿಸಿಕೊಂಡರೆ ವಯಸ್ಸಾದಂತೆ ಕಾಣುತ್ತದೆ. 25 ವರ್ಷದವರು ಮುಖದ ಸುಕ್ಕಿನಿಂದಾಗಿ 30 ರಿಂದ 35 ವರ್ಷದವರಂತೆ ಕಾಣುತ್ತಾರೆ. ಮುಖದಲ್ಲಿರುವ ನೆರಿಗೆಯನ್ನು ನಿವಾರಣೆ ಮಾಡಲು ಶ್ರೀಗಂಧ ಸಹಾಯಕವಾಗಿದೆ. ಇದಕ್ಕೆ ಮೂರು ಚಮಚ ಶ್ರೀಗಂಧದ ಪುಡಿ, ಎರಡು ಚಮಚ ಕಿತ್ತಳೆ ರಸ ಮತ್ತು ಒಂದು ಚಮಚ ತೆಂಗಿನ ಎಣ್ಣೆ ಬೇಕು. ಮೂರನ್ನು ಚೆನ್ನಾಗಿ ಮಿಶ್ರಣ ಮಾಡಬೇಕು. ಇದು ಕೂಡಾ ದಪ್ಪ ಪೇಸ್ಟ್ನಂತೆ ಸಿದ್ಧಪಡಿಸಬೇಕು. ರೆಡಿಯಾದ ಪೇಸ್ಟ್ನ ಮುಖಕ್ಕೆ ಹಚ್ಚಿ, 20 ನಿಮಿಷಗಳ ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ. ಈ ಫೇಸ್ ಪ್ಯಾಕ್ನ ವಾರಕ್ಕೆ ಎರಡು ಬಾರಿ ಮಾಡಿದರೆ ಫಲಿತಾಂಶ ಬೇಗ ಸಿಗುವುದು.