ಕೆಎನ್ ಎನ್ ನ್ಯೂಸ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಬೊಜ್ಜು ಸಾಮಾನ್ಯವಾಗಿ ಬಿಟ್ಟಿದೆ. ಈ ಸಮಸ್ಯೆಯನ್ನು ಅನೇಕ ಜನರು ಎದುರಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ, ಮಕ್ಕಳು ಮತ್ತು ವಯಸ್ಕರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಅಧಿಕ ತೂಕಕ್ಕೆ ಮುಖ್ಯ ಕಾರಣ ಆಹಾರ ಪದ್ಧತಿಯಲ್ಲಿ ನಿಯಂತ್ರಣ ಇಲ್ಲದಿರುವುದು ಎನ್ನುತ್ತಾರೆ ತಜ್ಞರು.
BIGG NEWS: ವಿಜಯಪುರದಲ್ಲಿ ಪ್ರೀತಿಸಿದವನಿಗಾಗಿ ಪ್ರಾಣಬಿಟ್ಟ ಅಪ್ರಾಪ್ತೆ; ಹುಡುಗಿ ಮನೆಯವರಿಂದಲೇ ಯುವಕನ ಹತ್ಯೆ
30 ಅಥವಾ ಅದಕ್ಕಿಂತ ಹೆಚ್ಚಿನ ದೇಹದ BMI ಬೊಜ್ಜು ಎಂದು ಪರಿಗಣಿಸಲಾಗುತ್ತದೆ.ಅಧಿಕ ತೂಕ ಅಥವಾ ಸ್ಥೂಲಕಾಯತೆಯು ವಿವಿಧ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳಿಗೆ ಕಾರಣವಾಗಬಹುದು. ಆಹಾರ ಸೇವನೆ ಮತ್ತು ಜೀವನ ಶೈಲಿಯ ಅಸಮತೋಲನದಿಂದಾಗಿ ಅನೇಕ ಮಕ್ಕಳು ಬೊಜ್ಜು ಹೊಂದಿರುತ್ತಾರೆ.
ದೈಹಿಕ ಚಟುವಟಿಕೆಯ ಕೊರತೆಯು ಮಕ್ಕಳಲ್ಲಿ ಅಧಿಕ ತೂಕ ಉಂಟಾಗಲು ಮುಖ್ಯ ಕಾರಣಗಳಲ್ಲಿ ಒಂದಾಗಿದೆ. ಮಕ್ಕಳನ್ನು ಸ್ಥೂಲಕಾಯದಿಂದ ಹೊರತರಲು ದಿನವೂ ಆಟದ ಮೈದಾನಕ್ಕೆ ಕರೆದೊಯ್ಯುವುದನ್ನು ತಪ್ಪಿಸಬೇಡಿ.
BIGG NEWS: ವಿಜಯಪುರದಲ್ಲಿ ಪ್ರೀತಿಸಿದವನಿಗಾಗಿ ಪ್ರಾಣಬಿಟ್ಟ ಅಪ್ರಾಪ್ತೆ; ಹುಡುಗಿ ಮನೆಯವರಿಂದಲೇ ಯುವಕನ ಹತ್ಯೆ
ಜಂಕ್ ಫುಡ್ ತಪ್ಪಿಸಿ ಆರೋಗ್ಯಕರ ಆಹಾರ ನೀಡಿ
ಮಕ್ಕಳಿಗೆ ಆರೋಗ್ಯದ ಬಗ್ಗೆ ಅರಿವು ಇರುವುದಿಲ್ಲ. ಯಾವ ಆಹಾರಗಳನ್ನು ತಿನ್ನಬೇಕು ಮತ್ತು ಯಾವುದನ್ನು ತಿನ್ನಬಾರದು ಎಂಬುದರ ಬಗ್ಗೆ ನಿಜವಾದ ತಿಳುವಳಿಕೆ ಇಲ್ಲ. ನಾಲಿಗೆಗೆ ರುಚಿ ಎನಿಸುವ ತಿಂಡಿಗಳನ್ನು ಅವರು ಬಹಳ ಇಷ್ಟಪಡುತ್ತಾರೆ. ಸಾಮಾನ್ಯವಾಗಿ ಮಕ್ಕಳು ಟೇಸ್ಟಿ ಜಂಕ್ ಫುಡ್ಗಳನ್ನು ಹೆಚ್ಚಾಗಿ ತಿನ್ನುತ್ತಾರೆ. ಈ ಕಾರಣದಿಂದಾಗಿ, ಬೇಗನೆ ತೂಕ ಹೆಚ್ಚಾಗುತ್ತದೆ. ಆದ್ದರಿಂದ, ಮಕ್ಕಳಲ್ಲಿ ಕ್ಯಾಲೋರಿ ಸೇವನೆಯನ್ನು ಮಿತಿಗೊಳಿಸಲು ಪೋಷಕರು ವಿಶೇಷ ಕಾಳಜಿ ವಹಿಸಬೇಕು.
ಮೊಬೈಲ್, ಕಂಪ್ಯೂಟರ್ ಮುಂದೆ ಹೆಚ್ಚು ಕಾಲ ಕಳೆಯುವುದನ್ನು ತಪ್ಪಿಸಿ
ಸ್ಮಾರ್ಟ್ಫೋನ್ಗಳು ಬಂದ ನಂತರ, ಅನೇಕ ಮಕ್ಕಳು ಹೊರಗೆ ಹೋಗಿ ಆಟವಾಡುವುದನ್ನು ನಿಲ್ಲಿಸಿದ್ದಾರೆ. ಫೋನ್ ಲ್ಯಾಪ್ಟಾಪ್ನಲ್ಲಿ ಫನ್ನಿ ವಿಡಿಯೋ ನೋಡುವುದು, ಗೇಮ್ ಆಡುವುದನ್ನು ಹೆಚ್ಚು ಸಮಯ ಕುಳಿತು ಮಾಡುತ್ತಿದ್ದಾರೆ. ಕೆಲವು ಮಕ್ಕಳಂತೂ ಓದು, ಊಟ ಬಿಟ್ಟು ಶಾಲೆಯಿಂದ ಮನೆಗೆ ಬಂದಾಗಿನಿಂದ ಮಲಗುವವರೆಗೂ ಕೈಯ್ಯಲ್ಲಿ ಫೋನ್ ಹಿಡಿದರೆ ಅದನ್ನು ಬಿಡುವುದೇ ಇಲ್ಲ. ಫೋನ್ ಇಲ್ಲದಿದ್ದರೆ, ಅವರು ಟಿವಿ, ಲ್ಯಾಪ್ಟಾಪ್ ಮತ್ತು ಇತರ ಗ್ಯಾಜೆಟ್ಗಳ ಮೊರೆ ಹೋಗುತ್ತಾರೆ. ಆದರೆ ಇವೆಲ್ಲ, ಮಗುವಿನ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ.
BIGG NEWS: ವಿಜಯಪುರದಲ್ಲಿ ಪ್ರೀತಿಸಿದವನಿಗಾಗಿ ಪ್ರಾಣಬಿಟ್ಟ ಅಪ್ರಾಪ್ತೆ; ಹುಡುಗಿ ಮನೆಯವರಿಂದಲೇ ಯುವಕನ ಹತ್ಯೆ
ಮಕ್ಕಳು ಉತ್ತಮ ನಿದ್ರೆ ಮಾಡುವತ್ತ ಗಮನ ಹರಿಸಿ
ಮಕ್ಕಳು ಚೆನ್ನಾಗಿ ನಿದ್ರೆ ಮಾಡಿದರೆ, ಮರು ದಿನ ಅವರು ಹೆಚ್ಚು ಜಾಗೃತರಾಗಿರುತ್ತಾರೆ. ಉತ್ತಮ ಗುಣಮಟ್ಟದ ನಿದ್ರೆ ಮಕ್ಕಳಲ್ಲಿ ಟೈಪ್ 2 ಮಧುಮೇಹ ಮತ್ತು ಬೊಜ್ಜಿನ ಅಪಾಯವನ್ನು ಕಡಿಮೆ ಮಾಡುತ್ತದೆ. ಆದರೆ ಸಾಕಷ್ಟು ನಿದ್ರೆ ಮಾಡದ ಮಕ್ಕಳು ತೂಕ ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಜ್ಞರು ಹೇಳುತ್ತಾರೆ.