ಕೆಎಮ್‌ಎಮ್‌ಡಿಜಿಟಲ್‌ ಡೆಸ್ಕ್‌ : ಪ್ರಸ್ತುತ ಕೊರೊನಾ ಅವಧಿಯಲ್ಲಿ, ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. ಆನೇಕರು ವಿಶೇಷವಾಗಿ ಆಹಾರದಲ್ಲಿ ಆಸಕ್ತಿ ಹೊಂದಿದ್ದು, ಕುಡಿಯುವ ನೀರು ಕೂಡ ತಣ್ಣಗಿರಬಾರದು ಎನ್ನುತ್ತಾರೆ. ಅದ್ರಂತೆ, ಅನೇಕ ಜನರು ಬಿಸಿನೀರನ್ನ ಮಾತ್ರ ಕುಡಿಯುತ್ತಾರೆ. ಅದು ದಿನವಿಡೀ. ಇನ್ನು ಪ್ರಸ್ತುತ ದಿನಗಳಲ್ಲಿ ಅನಾರೋಗ್ಯಕ್ಕೆ ತುತ್ತಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆಹಾರ ಪದ್ಧತಿ ಮತ್ತು ಜೀವನಶೈಲಿಯಲ್ಲಿನ ಬದಲಾವಣೆಯಿಂದಾಗಿ ಕೆಲವು ರೀತಿಯ ರೋಗಗಳು ಬಾಧಿಸುತ್ತಿವೆ. ಬೆಚ್ಚಗಿನ ನೀರು ಆರೋಗ್ಯಕ್ಕೆ ಒಳ್ಳೆಯದು ಎಂದು ಎಲ್ಲರಿಗೂ ತಿಳಿದಿದೆ. ಬೆಳಿಗ್ಗೆ ಬೆಚ್ಚಗಿನ ನೀರನ್ನ ಕುಡಿಯುವುದರಿಂದ ವಿವಿಧ ರೋಗಗಳನ್ನು ಗುಣಪಡಿಸಬಹುದು ಎಂದು ಸಂಶೋಧಕರು ಹೇಳಿದ್ದಾರೆ. ಆದ್ರೆ, ದಿನವಿಡೀ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಗಂಭೀರ ಅಪಾಯಗಳಿವೆ ಎಂದು ಸಂಶೋಧಕರು ಹೇಳುತ್ತಾರೆ. ಅನೇಕ ಜನರು ಆರೋಗ್ಯಕರ ಮತ್ತು ಫಿಟ್ ಆಗಿರಲು ದಿನವಿಡೀ ಬಿಸಿನೀರನ್ನ ಕುಡಿಯುತ್ತಾರೆ. ಇದರ ಪ್ರಯೋಜನಗಳಿದ್ದರೂ, ಹೆಚ್ಚು ತೆಗೆದುಕೊಳ್ಳುವುದರಿಂದ ದುಷ್ಪರಿಣಾಮಗಳೂ ಇವೆ. ಹಾಗಾದ್ರೆ, ಆ ದುಷ್ಪರಿಣಾಮಗಳೇನು? ಮುಂದೆ ಓದಿ.

1. ರಕ್ತದಲ್ಲಿ ನೀರು : ತೂಕ ಇಳಿಸಿಕೊಳ್ಳಲು ದಿನವಿಡೀ ಬಿಸಿ ನೀರು ಕುಡಿಯುತ್ತಿದ್ದರೆ ಈ ಅಭ್ಯಾಸವನ್ನು ಬದಲಿಸಿಕೊಳ್ಳುವಂತೆ ತಜ್ಞರು ಸಲಹೆ ನೀಡುತ್ತಾರೆ. ಹೀಗೆ ಮಾಡುವುದರಿಂದ ರಕ್ತದಲ್ಲಿ ನೀರಿನಂಶ ಹೆಚ್ಚಾಗುವ ಅಪಾಯವಿದೆ.

2. ಕಿಡ್ನಿ ಸಮಸ್ಯೆ : ಕಿಡ್ನಿ ನಮ್ಮ ದೇಹದ ಪ್ರಮುಖ ಅಂಗ. ಇದು ವಿಷವನ್ನು ತೆಗೆದುಹಾಕಲು ಕೆಲಸ ಮಾಡುತ್ತಿದ್ದು, ಇದರ ದಕ್ಷತೆಯು ನೀರಿನ ಮೇಲೆ ಭಾಗಶಃ ಅವಲಂಬಿತವಾಗಿದೆ. ಆದ್ರೆ, ಹೆಚ್ಚು ಬಿಸಿ ನೀರು ಸೇವಿಸುವುದರಿಂದ ಕಿಡ್ನಿ ಆರೋಗ್ಯಕ್ಕೆ ಹಾನಿಯಾಗುತ್ತದೆ.

3. ನಿದ್ರಾಹೀನತೆ : ರಾತ್ರಿ ಮಲಗುವಾಗ ನಿರಂತರವಾಗಿ ಬಿಸಿ ನೀರು ಕುಡಿಯುವುದರಿಂದ ನಿದ್ರೆಗೆ ತೊಂದರೆಯಾಗುತ್ತದೆ. ಹೆಚ್ಚು ನೀರು ಕುಡಿಯುವುದರಿಂದ ಆಗಾಗ್ಗೆ ಮೂತ್ರ ವಿಸರ್ಜನೆಗೆ ಕಾರಣವಾಗಬಹುದು.

4. ಊದಿಕೊಂಡ ರಕ್ತನಾಳಗಳು : ಬಾಯಾರಿಕೆ ಇಲ್ಲದಿದ್ದರೂ ಹೆಚ್ಚು ಬಿಸಿ ನೀರು ಕುಡಿದರೆ ವೆರಿಕೋಸ್ ವೇನ್ ಸಮಸ್ಯೆ ಬರುತ್ತದೆ. ಮಿದುಳಿನ ನರಗಳಲ್ಲಿ ಉರಿಯೂತ ಉಂಟಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು. ಆದ್ದರಿಂದ, ಹಗಲಿನಲ್ಲಿ ಸೀಮಿತ ಪ್ರಮಾಣದಲ್ಲಿ ಮಾತ್ರ ಬೆಚ್ಚಗಿನ ನೀರನ್ನ ಕುಡಿಯಿರಿ.

Share.
Exit mobile version