ಕೆಎನ್ ಎನ್ ನ್ಯೂಸ್ ಡೆಸ್ಕ್ : ಪ್ರತಿಯೊಬ್ಬರು ಹತ್ರನೂ ಇಯರ್ ಬಡ್ಸ್ ಇದ್ದೆ ಇರುತ್ತದೆ. ಕಿವಿಯಲ್ಲಿ ಉತ್ಪತ್ತಿಯಾಗುವ ವ್ಯಾಕ್ಸ್ ಹೊರತೆಗೆಯಲು ಹೆಚ್ಚಿನವರು ಇದನ್ನು ಬಳಸುತ್ತಾರೆ.
ಇನ್ನೂ ಕೆಲವರಿಗೆ, ಸ್ನಾನ ಮಾಡಿ ಬಂದ ತಕ್ಷಣ ಕಿವಿಗೆ ಬಡ್ಸ್ ಹಾಕದಿದ್ದರೆ ಸಮಾಧಾನ ಇರೋದೆ ಇಲ್ಲ. ಇನ್ನೂ ಕೆಲವರು ಕಿವಿಗೆ ಸೀರೆಯ ಪಿನ್, ಹೇರ್ ಪಿನ್, ಪೇಪರ್ ಕ್ಲಿಪ್, ಟೂತ್ ಪಿಕ್ಸ್, ಪೆನ್ ಸೇರಿದಂತೆ ಬೆರಳುಗಳನ್ನು ಕೂಡಾ ತುರುಕುತ್ತಾರೆ. ಇದು ಅಭ್ಯಾಸವಾದ ಮೇಲಂತೂ, ಕೈಗೆ ಸಿಕ್ಕ ಕಡ್ಡಿಯಂತಹ ಸಾಧನಗಳನ್ನು ಕಿವಿಗೆ ಹಾಕಿ ಮೇಣದಂತಹ ವಸ್ತುವನ್ನು ಕಿವಿಯಿಂದ ತೆಗೆಯುತ್ತಾರೆ. ಆದರೆ ಇದು ಯಾವುದೂ ಸುರಕ್ಷಿತವಲ್ಲ ಎಂದು ತಜ್ಞರು ಹೇಳುತ್ತಾರೆ.ಪ್ರತಿಯೊಬ್ಬರೂ ಕಿವಿಯಲ್ಲಿರುವ ಮೇಣದಂತಹ ಅಂಶವನ್ನು ಹೊರತೆಗೆಯುವ ಅಗತ್ಯವಿಲ್ಲ. ಇದು ದೊಡ್ಡ ಪ್ರಮಾಣದಲ್ಲಿ ಕಿವಿಯಲ್ಲಿ ಸಂಗ್ರಹವಾದಾಗ, ಕಿವಿ ನೋವು ಮತ್ತು ಸಾಂಕ್ರಾಮಿಕ ರೋಗಗಳ ಅಪಾಯವನ್ನು ಉಂಟುಮಾಡುತ್ತದೆ. ತಾತ್ಕಾಲಿಕ ಶ್ರವಣದೋಷ ಮತ್ತು ಖಿನ್ನತೆಯ ಸಾಧ್ಯತೆಯಿದೆ. ಆದರೆ, ಹೆಚ್ಚಿನ ಸಂದರ್ಭಗಳಲ್ಲಿ ಇಯರ್ ವ್ಯಾಕ್ಸ್ ಅನ್ನು ಹೊರ ತೆಗೆಯುವ ಅಗತ್ಯವಿಲ್ಲ.
ಏಕೆಂದರೆ ಅದನ್ನು ಕಿವಿಯೇ ಸ್ವಚ್ಚಗೊಳಿಸಬಲ್ಲದು. ವಾಸ್ತವವಾಗಿ ಇಯರ್ ವ್ಯಾಕ್ಸ್ ಎಂಬುದು ಕಿವಿಯಲ್ಲಿನ ನೈಸರ್ಗಿಕ ಗ್ರಂಥಿಗಳಿಂದ ರೂಪುಗೊಂಡ ಪರಿಹಾರವಾಗಿದೆ. ಇದು ಕಿವಿಯಲ್ಲೇ ರೂಪುಗೊಳ್ಳುವ ಮೇಣದಂತಹ ಅಂಶ. ಚರ್ಮದ ಸತ್ತ ಜೀವಕೋಶಗಳು ಮತ್ತು ಕಿವಿಯೊಳಗೆ ಹೋಗುವ ಧೂಳು ಇದಕ್ಕೆ ಅಂಟಿಕೊಳ್ಳುತ್ತವೆ. ಅದನ್ನು ಹೊರಗೆ ಕಳುಹಿಸುವ ಕೆಲಸವನ್ನು ಕಿವಿಯೇ ನೋಡಿಕೊಳ್ಳುತ್ತದೆ. ನಮ್ಮ ಕಿವಿಯ ರಚನೆಯೇ ಅದಕ್ಕೆ ಪೂರಕವಾಗಿದೆ. ಆ ಕಾರಣದಿಂದಾಗಿ, ಅದಾಗಿಯೇ ಕಿವಿಯಿಂದ ಹೊರಬರುತ್ತದೆ. ಹೀಗಾಗಿ ಆಗಾಗ ಕಿವಿಯನ್ನು ಸ್ವಚ್ಛಗೊಳಿಸುವ ಅಗತ್ಯವಿಲ್ಲ. ತುರ್ತು ಸಂದರ್ಭಗಳಲ್ಲಿ ಮಾತ್ರ ಸ್ವಚ್ಛಗೊಳಿಸಿದರೆ ಸಾಕು.
ಇಯರ್ ವ್ಯಾಕ್ಸ್ ಹೊರಬರದಿದ್ದರೆ, ಅದನ್ನು ತೆಗೆದುಹಾಕಲು ಕೆಲವು ಸಲಹೆಗಳಿವೆ. ನೀವು ಆ ಮೂಲಕ ಕಿವಿಯ ಮೇಣವನ್ನು ಸುರಕ್ಷಿತವಾಗಿ ತೆಗೆಯಬಹುದು. ಕಿವಿಗಳು ಬಹಳ ಸೂಕ್ಷ್ಮ ಭಾಗವಾಗಿರುತ್ತವೆ. ಹೀಗಾಗಿ ಅವುಗಳನ್ನು ಸ್ವಚ್ಛಗೊಳಿಸುವಾಗ ಕಾಳಜಿ ತುಂಬಾ ಮುಖ್ಯ. ಇಲ್ಲದಿದ್ದರೆ, ಶಾಶ್ವತ ಶ್ರವಣ ದೋಷ ಎದುರಿಸಬಹುದಾದ ಅಪಾಯವಿದೆ.
ಎರಡರಿಂದ ಮೂರು ಹನಿ ಬಾದಾಮಿ ಎಣ್ಣೆಯನ್ನು ದಿನಕ್ಕೆ ಮೂರರಿಂದ ನಾಲ್ಕು ಬಾರಿ ಒಟ್ಟು 3ರಿಂದ 5 ದಿನಗಳವರೆಗೆ ಕಿವಿಗೆ ಬಿಡಿ.