ಹೈದರಾಬಾದ್: ದೀಪಾವಳಿ ಹಬ್ಬಕ್ಕೆ ಪಟಾಕಿ ಖರೀದಿಸಿ ಬೈಕ್ ಸೇರಿದಂತೆ ಇತರೆ ವಾಹನಗಳಲ್ಲಿ ತೆಗೆದುಕೊಂಡು ಹೋಗೋರೇ ಹೆಚ್ಚು. ನೀವು ಪಟಾಕಿ ಖರೀದಿಸಿ ಬೈಕ್ ನಲ್ಲಿ ತೆಗೆದುಕೊಂಡು ಹೋಗ್ತಿದ್ದೀರಿ ಅಂದ್ರೆ ಎಚ್ಚರಿಕೆ ವಹಿಸಬೇಕಿದೆ. ಯಾಕೆ ಅಂತ ಮುಂದೆ ಸುದ್ದಿ ಓದಿ.
ಹೈದರಾಬಾದಿನ ಏಲೂರಲ್ಲಿ ದೀಪಾವಳಿ ಹಬ್ಬಕ್ಕೆ ಪಟಾಕಿ ಖರೀದಿಸಿದ್ದಂತ ಇಬ್ಬರು ಬೈಕ್ ನಲ್ಲಿ ತೆಗೆದುಕೊಂಡು ಹೋಗುತ್ತಿದ್ದರು. ಗಂಗಮ್ಮದೇವಸ್ಥಾನದ ಬಳಿಯ ರಸ್ತೆಯಲ್ಲಿ ಸಾಗುತ್ತಿದ್ದಂತ ವೇಳೆಯಲ್ಲಿ ರಸ್ತೆಯಲ್ಲಿದ್ದಂತ ಗುಂಡಿಯಲ್ಲಿ ಬೈಕ್ ಇಳಿದಿದೆ. ಬೈಕ್ ರಸ್ತೆ ಗುಂಡಿಯಲ್ಲಿ ಇಳಿದು ಅಲ್ಲಾಡಿದ್ದೇ ತಡ, ಹಿಂಬದಿಯಲ್ಲಿ ವ್ಯಕ್ತಿಯೊಬ್ಬರು ಹಿಡಿದಿದ್ದಂತ ಪಟಾಕಿ ಕೆಳಗೆ ಬಿದ್ದಿದೆ.
ಬೈಕ್ ಸವಾರರು ತೆರಳುತ್ತಿದ್ದಂತ ಮಾರ್ಗದಲ್ಲೇ, ರಸ್ತೆ ಗುಂಡಿಯ ಬಳಿಯಲ್ಲೇ ಸಾರ್ವಜನಿಕರು ನಿಂತಿದ್ದರು. ಪಟಾಕಿ ರಸ್ತೆಗೆ ಬೀಳುತ್ತಿದ್ದಂತೆ ದಿಢೀರ್ ಸ್ಪೋಟಗೊಂಡಿದೆ. ಈ ಸ್ಪೋಟಕದಲ್ಲಿ ಬೈಕ್ ಸವಾರ ಸುಧಾಕರ್ ಎಂಬುವರ ದೇಶ ಛಿದ್ರಛಿದ್ರಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇನ್ನೂ ಹಿಂಬದಿಯ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಅಲ್ಲದೇ ರಸ್ತೆಯಲ್ಲಿದ್ದಂತ ಆರು ಸಾರ್ವಜನಿಕರು ಗಂಭೀರವಾಗಿ ಪಟಾಕಿ ಸಿಡಿತದಿಂದ ಗಾಯಗೊಂಡಿದ್ದಾರೆ. ಅವರನ್ನು ಏಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಸೋ ದೀಪಾವಳಿ ಹಬ್ಬಕ್ಕೆ ಪಟಾಕಿ ಖರೀದಿಸಿ ಬೈಕ್ ನಲ್ಲಿ ಕೊಂಡೊಯ್ಯೋ ಮುನ್ನ ಎಚ್ಚರಿಕೆ ವಹಿಸೋದು ಮರೆಯಬೇಡಿ. ಜೀವ, ಜೀವನಕ್ಕಿಂತ ಪಟಾಕಿ ಹೊಡೆದು ಪರಿಸರ ಹಾಳು ಮಾಡೋದು, ಜೀವವನ್ನೇ ಕಳೆದುಕೊಳ್ಳುವುದು ಮುಖ್ಯವಲ್ಲ. ಎಚ್ಚರ.. ಎಚ್ಚರ..